ಜೈ ಭೀಮ್ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ವಿರುದ್ಧ ಎಫ್​ಐಆರ್​ ದಾಖಲು

ಕಾಲಿವುಡ್​ನ ಖ್ಯಾತ ನಟ ಸೂರ್ಯ ಅಭಿನಯಿಸಿರುವ ‘ಜೈ ಭೀಮ್​’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿ ಸಕತ್ ಹಿಟ್ ಆಗಿತ್ತು. ಆದರೆ ಈಗ ಸಿನಿಮಾದ ನಟ ಸೂರ್ಯ, ನಿರ್ಮಾಪಕಿಯೂ ಆಗಿರುವ ಪತ್ನಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್​ ವಿರುದ್ಧ ಎಫ್​ಐಆರ್​ ದಾಖಲು ಮಾಡುವಂತೆ ಚೆನ್ನೈನ ನ್ಯಾಯಾಲಯವೊಂದು ಆದೇಶಿಸಿದೆ.

ಆದರೆ ಕೆಲವರು ‘ಜೈ ಭೀಮ್​’ ಚಿತ್ರದ ಬಗ್ಗೆ ಆಕ್ಷೇಪ ಎತ್ತಿದ್ದರು. ವನ್ನಿಯಾರ್​ ಸಮುದಾಯದ ಜನರನ್ನು ಈ ಸಿನಿಮಾದಲ್ಲಿ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ತಕರಾರು ತೆಗೆದಿದ್ದರು. ಈ ಪ್ರಕರಣ ಈಗ ಕೋರ್ಟ್​ ಮೆಟ್ಟಿಲು ಏರಿದೆ. ರುದ್ರ ವನ್ನಿಯಾರ್​ ಸೇನಾ’ ಸಂಘಟನೆಯವರು ಈ ಕೇಸ್​ ದಾಖಲಿಸಿದ್ದಾರೆ.

ಪ್ರಕರಣದ ಕುರಿತು ಏ.29ರಂದು ಈ  ವಿಚಾರಣೆ ನಡೆಯಿತು. ಆದರೆ ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್​ ಅವರು ವಿಚಾರಣೆಯಲ್ಲಿ ಹಾಜರಾಗಿಲ್ಲ.

ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ ಸೂರ್ಯ, ಜ್ಯೋತಿಕಾ ಮತ್ತು ಜ್ಞಾನವೇಲ್​ ವಿರುದ್ಧ ಎಫ್​ಐಆರ್​ ದಾಖಲಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಚೆನ್ನೈ ಪೊಲೀಸರಿಗೆ ಕೋರ್ಟ್​ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 20ರಂದು ನಡೆಯಲಿದೆ.

Leave A Reply

Your email address will not be published.