ಮಲಗಿಕೊಂಡಾಗ ಸ್ವಂತ ಮಗಳ ತುಟಿ ಚುಂಬಿಸಿ, ಗುಪ್ತಾಂಗ ಸ್ಪರ್ಶಿಸುತ್ತಿದ್ದ ಉಪ ತಹಶೀಲ್ದಾರ್ ಅಪ್ಪ | 17 ವರ್ಷಗಳ ಕಠಿಣ ಶಿಕ್ಷೆ ನೀಡಿದ ಕೋರ್ಟ್

ತಾಯಿಯಿಲ್ಲದ ಮಗುವನ್ನು ತಂದೆಯಾದವನು, ತಂದೆ,ತಾಯಿ ಈ ಎರಡೂ ಸ್ಥಾನದಲ್ಲಿ ನಿಂತು ಕರ್ತವ್ಯ ನಿಭಾಯಿಸಬೇಕು. ಆ ಕಂದನಿಗೆ ಅಷ್ಟೇ ಪ್ರೀತಿ, ವಾತ್ಸಲ್ಯ ನೀಡಬೇಕು. ಏನೂ ಅರಿಯದ ವಯಸ್ಸಿನಲ್ಲಿ ಸರಿ, ತಪ್ಪುಗಳ ಬಗ್ಗೆ ವಿವರವಾಗಿ ತಿಳಿಸಬೇಕು. ಅಂತಹ ಜವಾಬ್ದಾರಿ ಹೊರಬೇಕಾದ ತಂದೆ ಏನೂ ಅರಿಯದ ತನ್ನ ಮಗಳಿಗೆ ತನ್ನ ರಕ್ತ ಹಂಚಿ ಹುಟ್ಟಿದ ಮಗಳಿಗೆನೇ, ಲೈಂಗಿಕ ಕಿರುಕುಳ ನೀಡಿದ್ದು ನಾಚಿಕೆಗೇಡಿತನದ ಕೆಲಸ. ತನ್ನ ಹತ್ತು ವರ್ಷದ ಮಗಳ ತುಟಿಯನ್ನು ಚುಂಬಿಸಿ, ಆಕೆಯ ಗುಪ್ತಾಂಗವನ್ನು ಸ್ಪರ್ಶಿಸಿ ವಿಕೃತಿ ಮೆರೆಯುವ ಕೆಲಸ, ಸರಕಾರದ ಉನ್ನತ ಹುದ್ದೆಯಲ್ಲಿದ್ದ ಓರ್ವ ತಂದೆ ಮಾಡಿದ್ದಾನೆ ಎಂದರೆ ಕೇಳಲು ಅಸಹ್ಯವಾಗಿದೆ.

ಇಂತಹ ಒಂದು ಅಮಾನವೀಯ ಘಟನೆ ನಡೆದಿರುವುದು ತಿರುವನಂತಪುರಂನಲ್ಲಿ. ಹತ್ತು ವರ್ಷದ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿವಿಧ ಪ್ರಕರಣಗಳ ಅಡಿಯಲ್ಲಿ ಉಪ ತಹಶೀಲ್ದಾರ್ ಕೇರಳ ನ್ಯಾಯಾಲಯ 17 ವರ್ಷಗಳ ಘೋರ ಶಿಕ್ಷೆಯನ್ನು ವಿಧಿಸಿದೆ.


Ad Widget

Ad Widget

Ad Widget

ತಿರುವನಂತಪುರದ ಪ್ರಧಾನ ಪೊಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ವಿ. ಅವರು ಈ ಮಹತ್ವದ ಆದೇಶವನ್ನು ನೀಡಿದ್ದಾರೆ. ಜೈಲು ಶಿಕ್ಷೆ ಮಾತ್ರವಲ್ಲದೆ, 16.5 ಲಕ್ಷ ರೂಪಾಯಿ ದಂಡ ಪಾವತಿಸಲು ನ್ಯಾಯಾಲಯ ಆದೇಶಿಸಿದ್ದು, ದಂಡ ಪಾವತಿಸದಿದ್ದರೆ, ಇನ್ನೆರಡು ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಲಾಗಿದೆ.

2019ರಲ್ಲಿ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದು, ಬಳಿಕ ಸಂತ್ರಸ್ತೆ ತನ್ನ ತಂದೆಯ ಜತೆ ಮಲಗಿಕೊಳ್ಳುತ್ತಿದ್ದಳು. ಉಪ ತಹಸೀಲ್ದಾರ್ ಆಗಿ ಜವಬ್ದಾರಿಯುತ ಸ್ಥಾನದಲ್ಲಿದ್ದ ತಂದೆ ಈ ಸಮಯದಲ್ಲಿ ದುರುದ್ದೇಶದಿಂದ ಮಗಳನ್ನು ತಬ್ಬಿಕೊಂಡು, ಆಕೆಯ ತುಟಿಯನ್ನು ಚುಂಬಿಸಿ, ಆಕೆಯ ಗುಪ್ತಾಂಗವನ್ನು ಸ್ಪರ್ಶಿಸುವುದನ್ನೆಲ್ಲಾ ಮಾಡುತ್ತಿದ್ದ.

ತರಗತಿಯಲ್ಲಿ ಬಾಲಕಿ ಯಾವಾಗಲೂ ಮೌನವಾಗಿರುವುದನ್ನು ಗಮನಿಸಿದ ಟೀಚರ್ ಆಕೆಯನ್ನು ವಿಚಾರಿಸಿದಾಗ ತಂದೆಯಿಂದ ಲೈಂಗಿಕ ದೌರ್ಜ್ಯನ್ಯ ಎದುರಿಸುತ್ತಿರುವುದಾಗಿ ಹೇಳಿದ್ದಾಳೆ. ಈ ವಿಚಾರವನ್ನು ಟೀಚರ್, ಮುಖ್ಯೋಪಾಧ್ಯಯರಿಗೆ ಶಾಲೆಯ ಕೌನ್ಸಿಲರ್‌ಗೆ ಹೇಳಿದ್ದಾರೆ. ಇದಾದ ಬಳಿಕ ಆರೋಪಿ ತಂದೆಯ ವಿರುದ್ಧ ಕೇರಳದ ಪಂಗೋಡ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಅಪರಾಧ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಎ. ಪ್ರಮೋದ್ ಕುಮಾರ್ ತನಿಖೆ ನಡೆಸಿ, ಆರೋಪಿ ತಂದೆಯ ವಿರುದ್ಧ ಚಾರ್ಜ್‌ಶೀಟ್ ದಾಖಲಿಸುತ್ತಾರೆ.

ಮಗಳನ್ನು ನೋಡಿಕೊಳ್ಳಬೇಕಾದ ಸ್ವಂತ ತಂದೆಯೇ ಆಕೆಯ ಮೇಲೆ ದೌರ್ಜನ್ಯ ಎಸಗಿರುವುದು ಘೋರ ಅಪರಾಧ ಮತ್ತು ಆರೋಪಿಯು ಯಾವುದೇ ಕರುಣೆಗೆ ಅರ್ಹನಲ್ಲ ಎಂದು ನ್ಯಾಯಾಲಯ ಅಂತಿಮವಾಗಿ ತೀರ್ಪು ನೀಡಿದೆ. ಮಗುವಿಗೆ ಕಾನೂನಾತ್ಮಕವಾಗಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

Leave a Reply

error: Content is protected !!
Scroll to Top
%d bloggers like this: