ಕನಸಿನಲ್ಲಿ ಬರುವ ಈ ಹಣ್ಣು-ಪದಾರ್ಥಗಳು ತಿಳಿಸುತ್ತೆ ನಿಮ್ಮ ಭವಿಷ್ಯ!!

ಕನಸು ಎಂದರೆ ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ‘ಕಥೆ’. ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ. ಕೆಲವು ಕನಸುಗಳು ಖುಷಿ ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ.ಒಂದು ಕನಸ್ಸಿನ ಅವಧಿ ಸುಮಾರು 5 ರಿಂದ 50 ನಿಮಿಷವಿರುತ್ತೆಯಂತೆ.ಒಬ್ಬ ವ್ಯಕ್ತಿಯು ತನ್ನ ಜೀವನಾವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕನಸುಗಳನ್ನು ಕಾಣುವನು.

ಕನಸಿನಲ್ಲಿ ಇಂತಹ ವಸ್ತುಗಳನ್ನು ಕಂಡರೆ ಕೆಲವೊಂದು ನಂಬಿಕೆ ಇದೆ. ಅಂತೆಯೇ ಕನಸಿನಲ್ಲಿ ಕೆಲ ಹಣ್ಣುಗಳನ್ನು ಕಂಡರೆ ಒಳ್ಳೆಯದು, ಕೆಲವು ಹಣ್ಣುಗಳು ಕೆಟ್ಟವು. ಶಾಸ್ತ್ರಗಳ ಪ್ರಕಾರ ಯಾವ ಹಣ್ಣು, ಪದಾರ್ಥ ಶುಭ ಎಂಬುದನ್ನು ತಿಳಿದುಕೊಳ್ಳಿ.

ನೆಲ್ಲಿಕಾಯಿ ಕನಸಲ್ಲಿ ಬಂದ್ರೆ ಸದ್ಯದಲ್ಲಿಯೇ ನಿಮ್ಮ ಕನಸು ಈಡೇರುತ್ತದೆ ಎನ್ನುವುದರ ಸಂಕೇತವದು. ಅಪ್ಪಿ ತಪ್ಪಿ ಪೇರಲೆ ಹಣ್ಣು ತಿಂದ ಹಾಗೆ ಕಂಡ್ರೆ ಕೈತುಂಬ ಹಣ ಬರುತ್ತೆ. ಹಣದ ಸಂಕೇತ ಪೇರಲೆಹಣ್ಣು ಎನ್ನುತ್ತದೆ ಶಾಸ್ತ್ರ.

ಶುಂಠಿ ತಿಂದ ಹಾಗೆ ಕನಸು ಬಿದ್ದರೆ ಗೌರವ, ಸನ್ಮಾನ ದೊರಕುತ್ತದೆ ಎಂದು ಅರ್ಥ. ಅನಾನಸ್ ತಿಂದಂತೆ ಕಂಡರೆ ಮೊದಲು ಕಷ್ಟ, ನಂತರ ಪರಿಹಾರ ಸಿಗುತ್ತದೆ ಎಂದು ನೀವು ಅಂದಾಜಿಸಬಹುದು. ದಾಳಿಂಬೆ ಎಲೆ ಕನಸು ಬಿದ್ದರೆ ಮದುವೆಯಾಗದವರು ನೆಮ್ಮದಿಯಿಂದಿರಬಹುದು. ಯಾಕೆಂದ್ರೆ ದಾಳಿಂಬೆ ಎಲೆ ಕನಸಿನಲ್ಲಿ ಕಂಡರೆ ನಿಮ್ಮ ಮದುವೆಗೆ ಮುಹೂರ್ತ ಕೂಡಿ ಬಂದಿದೆ ಎಂದೇ ಅರ್ಥ. ಇನ್ನು ದಾಳಿಂಬೆ ಬೀಜ ತಿಂದಂತೆ ಕನಸು ಬಿದ್ದರೆ ಹಣ ಸಿಗುತ್ತೆ ಎನ್ನುತ್ತದೆ ಶಾಸ್ತ್ರ.

ಕನಸಿನಲ್ಲಿ ಜೀರಿಗೆ ಮತ್ತು ದ್ರಾಕ್ಷಿ ಹಣ್ಣು ಕಂಡರೆ ನಿಮ್ಮ ಆರೋಗ್ಯ ಸುಧಾರಿಸುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ. ಮಾವಿನ ಹಣ್ಣು ಕಂಡರೆ ನಿಮ್ಮ ಜೇಬು ತುಂಬುತ್ತದೆಯಂತೆ.ಇನ್ನು ತೊಗರಿ ಬೇಳೆ ತಿಂದಂತೆ ಕಂಡರೆ ಸದ್ಯದಲ್ಲಿ ಹೊಟ್ಟೆ ನೋವನ್ನು ನೀವು ಅನುಭವಿಸಬೇಕಾಗುತ್ತದೆ. ಉಪ್ಪಿನ ಕಾಯಿ ತಿಂದಂತೆ ಕನಸು ಬಿದ್ದರೂ ಹೊಟ್ಟೆ ಹಾಗೂ ತಲೆ ನೋವು ಗ್ಯಾರಂಟಿ.

Leave A Reply

Your email address will not be published.