ಎಷ್ಟೇ ಬೇಡ ಎಂದು ಗೋಗರೆದರೂ ಬಿಡದೆ, ನೆಲಕ್ಕೆ ಕೆಡವಿ ಮಹಿಳೆಗೆ ಕೋವಿಡ್ ಪರೀಕ್ಷೆ – ವೀಡಿಯೋ ವೈರಲ್

0 14

ಕೊರೋನಾ ಹಾವಳಿಗೆ ಕಂಗೆಟ್ಟಿದೆ ನೆರೆ ರಾಷ್ಟ್ರ ಚೀನಾ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ. ದೇಶದಲ್ಲಿ ಉಲ್ಬಣಿಸುತ್ತಿರುವ ಕೋವಿಡ್ ಹಾಗೂ ಲಾಕ್‌ಡೌನ್‌ನಿಂದ ಜನ ಆತಂಕಗೊಂಡಿದ್ದಾರೆ.

ಸೋಂಕಿತರು ಕಠಿಣ ನಿಯಮಗಳನ್ನು ಪಾಲಿಸಬೇಕೆಂಬ ಭಯದಿಂದ ಅನೇಕರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅಲ್ಲಿನ ಜನರಿಗೆ ಹೇಗೆ ಬಲವಂತವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂಬುದು ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

https://twitter.com/S7i5FV0JOz6sV3A/status/1519334903694991361?s=20&t=xn0sWifGhqGIB7UU8jSKgw

ಮಹಿಳೆಯೊಬ್ಬರಿಗೆ ಕೋವಿಡ್ ಪರೀಕ್ಷೆ ಮಾಡಲು ಆರೋಗ್ಯ ಸಿಬ್ಬಂದಿ ಹರಸಾಹಸಪಟ್ಟ ಘಟನೆಯ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೊರೋನಾ ಪರೀಕ್ಷೆಗೆ ಒಳಗಾಗಲು ಆ ಮಹಿಳೆ ನಿರಾಕರಿಸುತ್ತಾಳೆ. ಈ ವೇಳೆ ಆಕೆಯನ್ನು ನೆಲಕ್ಕೆ ಕೆಡವಿ ಆರೋಗ್ಯ ಸಿಬ್ಬಂದಿ ಕೊರೊನಾ ಪರೀಕ್ಷೆ ನಡೆಸಿದ್ದಾರೆ.

ಮತ್ತೊಂದು ವೀಡಿಯೋದಲ್ಲಿ ವೃದ್ಧೆಯೊಬ್ಬರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆಗ ನಾಲ್ಕೈದು ಮಂದಿ ಆಕೆಯನ್ನು ಹಿಡಿದು, ಕೊರೋನಾ ಪರೀಕ್ಷೆ ಮಾಡುತ್ತಾರೆ.

ಇನ್ನೊಂದು ವೀಡಿಯೋದಲ್ಲಿ ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಕೆಡವಿ ಬಲವಂತವಾಗಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಚೀನಾದಲ್ಲಿ ಜನರು ಕೋವಿಡ್ ಪರೀಕ್ಷೆಗೆ ಒಳಗಾಗಲು ಹಿಂಜರಿಯುತ್ತಿರುವ ಬಗ್ಗೆ ಅನೇಕ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Leave A Reply