ಇನ್ನು ಕೇವಲ 27 ವರ್ಷಗಳಲ್ಲಿ ಇಡೀ ವಿಶ್ವದಲ್ಲಿ ಆಹಾರವೇ ಮುಗಿದು ಹೋಗಲಿದೆಯಂತೆ !! | ಜನರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿಯ ಕುರಿತು ದಿ ವರ್ಲ್ಡ್ ಕೌಂಟ್ ವರದಿ ಹೇಳಿದ್ದೇನು ಗೊತ್ತಾ ??

ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬ ಮಾತಿದೆ. ಜೀವನದಲ್ಲಿ ತುತ್ತು ಅನ್ನಕ್ಕಾಗಿ ಮನುಷ್ಯ ಏನೆಲ್ಲಾ ಕಸರತ್ತು ಮಾಡುತ್ತಾನೆ. ಹಗಲಿರುಳೆನ್ನದೆ ದುಡಿದು ತನ್ನವರ ಹೊಟ್ಟೆ ತುಂಬಿಸುತ್ತಾನೆ. ಕಾರಣ ಹಸಿವು. ಹೊಟ್ಟೆಗೆ ಇಂಧನ ಬೀಳದಿದ್ದರೆ ಜೀವನದ ಗಾಡಿ ಮುಂದೆ ಸಾಗುವುದಿಲ್ಲ, ಅಂದರೆ ಆಹಾರವಿಲ್ಲದೆ ಮನುಷ್ಯ ಬದುಕಲು ಸಾಧ್ಯವೇ ಇಲ್ಲ.‌ ಆದರೆ, ಈ ಆಹಾರ ಇನ್ನು ಕೆಲವೇ ವರ್ಷಗಳಲ್ಲಿ ಮುಗಿದು ಹೋಗಲಿದೆಯಂತೆ !!

ಹೌದು. ಇನ್ನು ಕೇವಲ 27 ವರ್ಷಗಳಲ್ಲಿ ವಿಶ್ವದಲ್ಲಿ ಭಾರಿ ಧಾನ್ಯ ಸಂಕಟ ಎದುರಾಗಲಿದ್ದು, ಎರಡು ಹೊತ್ತಿನ ಊಟ ಬಿಡಿ, ಒಪ್ಪತ್ತಿನ ಊಟಕ್ಕೂ ಕೂಡ ಮನುಷ್ಯ ಪರದಾಡುವ ಸ್ಥಿತಿ ಎದುರಾಗಲಿದೆ ಎನ್ನಲಾಗಿದೆ. ಕೋಟ್ಯಾಂತರ ರೂಪಾಯಿ ಹಣವಿದ್ದರೂ ಕೂಡ ಮನುಷ್ಯ ಆಹಾರ ಖರೀದಿಸಲು ಪರದಾಡುವ ಸ್ಥಿತಿ ಬಂದೊದಗಲಿದೆ ಎನ್ನಲಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಡೇಟಾ ಮೇಲೆ ನಿಗಾ ಇಡುವ ಸಂಸ್ಥೆಯಾದ ದಿ ವರ್ಲ್ಡ್ ಕೌಂಟ್ ವರದಿಯ ಪ್ರಕಾರ, ಇಡೀ ವಿಶ್ವದಲ್ಲಿ ಇಂತಹ ಧಾನ್ಯ ಬಿಕ್ಕಟ್ಟು ಉಂಟಾಗಲಿದ್ದು, 2050 ರ ವೇಳೆಗೆ ಇಡೀ ಜಗತ್ತಿನಲ್ಲಿ ಆಹಾರ ಧಾನ್ಯಗಳು ಭಾರಿ ಕೊರತೆ ಎದುರಾಗಲಿದೆ ಎನ್ನಲಾಗಿದೆ. ತನ್ನ ವರದಿಯನ್ನು ಬಿಡುಗಡೆ ಮಾಡುವುದರ ಜೊತೆಗೆ, ದಿ ವರ್ಲ್ಡ್ ಕೌಂಟ್ ತನ್ನ ವೆಬ್‌ಸೈಟ್‌ನಲ್ಲಿ ಧಾನ್ಯ ಅಂತ್ಯವಾಗುವ ಕೌಂಟ್‌ಡೌನ್ ಕೂಡ ಹಂಚಿಕೊಂಡಿದೆ. ಈ ಕೌಂಟ್‌ಡೌನ್ ಪ್ರಕಾರ, ಭೂಮಿಯಿಂದ ಧಾನ್ಯವು ಕೊನೆಗೊಳ್ಳಲು 27 ವರ್ಷಗಳು ಮಾತ್ರ ಉಳಿದಿವೆ ಎನ್ನಲಾಗಿದೆ.

ದಿ ವರ್ಡ್ ಕೌಂಟ್ ವರದಿಯ ಪ್ರಕಾರ, 2050ರವರೆಗೆ ವಿಶ್ವದ ಒಟ್ಟು ಜನಸಂಖ್ಯೆ 1000 ಕೋಟಿ ಗಡಿ ದಾಟಲಿದೆ. ಹೀಗಿರುವಾಗ 2017ಕ್ಕೆ ಹೋಲಿಸಿದರೆ 2050 ರಲ್ಲಿ ಧಾನ್ಯ ಬೇಡಿಕೆ ಶೇ.70ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಭೂಮಿಯು ಪ್ರತಿ ವರ್ಷ 7500 ಮಿಲಿಯನ್ ಟನ್ ಫಲವತ್ತಾದ ಮಣ್ಣನ್ನು ಕಳೆದುಕೊಳ್ಳುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಜಗತ್ತಿನಲ್ಲಿ ಕಳೆದ 40 ವರ್ಷಗಳಲ್ಲಿ, ಒಟ್ಟು ಭೂಮಿಯ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಇದೇ ವೇಳೆ, ಆಹಾರದ ಬೇಡಿಕೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಮುಂದಿನ 40 ವರ್ಷಗಳಲ್ಲಿ ಭೂಮಿಯ ಜನರ ಆಹಾರದ ಅಗತ್ಯಗಳನ್ನು ಪೂರೈಸಲು, ಕಳೆದ 8 ಸಾವಿರ ವರ್ಷಗಳಲ್ಲಿ ಉತ್ಪಾದನೆಯಾದ ಒಟ್ಟು ಧಾನ್ಯದ ಅಗತ್ಯತೆ ಬೀಳಲಿದೆ ಎನ್ನಲಾಗಿದೆ. ಅಂದರೆ ಒಂದೆಡೆ ವಿಶ್ವದಲ್ಲಿ ಪ್ರತಿ ವರ್ಷ ಫಲವತ್ತಾದ ಭೂಮಿ ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ, ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎನ್ನಲಾಗಿದೆ.

ವರದಿಯ ಪ್ರಕಾರ, ಇಡೀ ವಿಶ್ವದಲ್ಲಿನ ಧಾನ್ಯ ಮುಗಿದುಹೋದ ಬಳಿಕ ಮಾಂಸ ತಿನ್ನುವುದು ಕೂಡ ಒಂದು ಆಯ್ಕೆಯಾಗಿ ಉಳಿಯುವುದಿಲ್ಲ ಎನ್ನಲಾಗಿದೆ. ಏಕೆಂದರೆ ಮಾಂಸವನ್ನು ತಯಾರಿಸಲು ಮೆಕ್ಕೆ ಜೋಳಕ್ಕಿಂತ 75 ಪಟ್ಟು ಹೆಚ್ಚು ಶಕ್ತಿಯ ಅಗತ್ಯವಿದ್ದು, ಇದನ್ನು ಉತ್ಪಾದಿಸುವುದು ಅಸಾಧ್ಯವಾದ ಕೆಲಸವಾಗಿದೆ. ವರ್ಲ್ಡ್ ಕೌಂಟ್ ತನ್ನ ವರದಿಯಲ್ಲಿ 2030 ರ ವೇಳೆಗೆ ಅಕ್ಕಿಯ ಬೆಲೆ ಶೇ. 130 ರಷ್ಟು ಮತ್ತು ಮೆಕ್ಕೆಜೋಳದ ಬೆಲೆ ಶೇ. 180 ರಷ್ಟು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದೆ. ಅಷ್ಟೇ ಅಲ್ಲ ಪ್ರಸ್ತುತ ಇಡೀ ಜಗತ್ತು ಯಾವ ಅಂಚಿನಲ್ಲಿ ನಿಂತಿದೆ ಎಂದರೆ, ಭವಿಷ್ಯದಲ್ಲಿ ಯುದ್ಧಗಳು ಕೂಡ ಆಹಾರ ಮತ್ತು ನೀರನ್ನು ಆಧರಿಸಿ ನಡೆಯಲಿವೆ ಎಂದು ಅದು ಹೇಳಿದೆ.

Leave A Reply

Your email address will not be published.