Income Tax ಇಲಾಖೆಯಿಂದ ಹೊಸ ರೂಲ್ಸ್ | ಇನ್ನು ಮುಂದೆ ಐಟಿ ರಿಟರ್ನ್ಸ್ ಗೆ ಕಾರಣ ಕೂಡ ನೀಡಬೇಕು

ಕೇಂದ್ರ ಸರಕಾರ ಐಟಿ ರಿಟರ್ನ್ಸ್ ಗೆ ಹೊಸ ರೂಲೊಂದನ್ನು ಜಾರಿಗೆ ತಂದಿದೆ. ಅದೇನೆಂದರೆ ಇನ್ನು ಮುಂದೆ ತೆರಿಗೆ ಸಲ್ಲಿಸಲು ಕಾರಣವನ್ನು ಕೂಡ ನೀಡಬೇಕಿದೆ.

ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿಸಲು ಹೊಸ ಫಾರ್ಮ್ ಬಿಡುಗಡೆ ಮಾಡಿದ್ದು, ಇದರಲ್ಲಿ ತೆರಿಗೆ ಪಾವತಿಸುವವರು ಸಲ್ಲಿಸಬೇಕಾದ ಆದಾಯದ ಮೊತ್ತದೊಂದಿಗೆ ಅದನ್ನು ಸಲ್ಲಿಸಲು ನಿಖರವಾದ ಕಾರಣವನ್ನು ಕೂಡ ನೀಡಬೇಕಿದೆ.

2019 -20 ಮತ್ತು 2020 -21 ನೇ ಹಣಕಾಸು ವರ್ಷದಲ್ಲಿ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತೆರಿಗೆ ಪಾವತಿದಾರರಿಗೆ ಹೊಸ ಫಾರ್ಮ್ ಭರ್ತಿ ಮಾಡಬೇಕು. ಇದರಲ್ಲಿ ಆದಾಯದ ಮೊತ್ತದೊಂದಿಗೆ ಅದನ್ನು ಸಲ್ಲಿಸಲು ಕಾರಣ ಕೂಡ ನೀಡಬೇಕಿದೆ ಎನ್ನಲಾಗಿದೆ.

Leave A Reply

Your email address will not be published.