ಮಹಿಳೆಯರ ಸೌಂದರ್ಯ ಇಮ್ಮಡಿ ಮಾಡಿಸುವ ಒಳ ಉಡುಪುಗಳನ್ನು ಮಲಗುವಾಗ ಧರಿಸುವುದು ಒಳ್ಳೆಯದೇ? ಕೆಟ್ಟದೇ ? ಬನ್ನಿ ತಿಳಿಯೋಣ!!!

ಡ್ರೆಸ್ ಕೋಡ್‌ನ ಅಂಶಗಳಲ್ಲಿ ಒಳುಡುಪುಗಳು ಕೂಡಾ
ಒಂದಾಗಿದೆ. ಈ ಒಳ ಉಡುಪುಗಳು ನಮ್ಮ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೇ ನೈರ್ಮಲ್ಯ ಕೂಡಾ ಇದರೊಂದಿಗೆ ಬೆಸೆದಿದೆ.

ರಾತ್ರಿ ಮಲಗುವಾಗಲೂ ಒಳ ಉಡುಪು ಮುಖ್ಯವೇ? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತೆ. ಇದಕ್ಕೆ ಉತ್ತರ ನಾವು ನಿಮಗಿಲ್ಲಿ ನೀಡುತ್ತೇವೆ.

ಇದು ಹೆಚ್ಚಾಗಿ ಅವರವರ ಅಭ್ಯಾಸದ ಮೇಲೆ ಅವಲಂಬಿತವಾಗಿದೆ. ಕೆಲವು ಮಹಿಳೆಯರು ಒಳ ಉಡುಪು ಇಲ್ಲದೆ ಮಲಗಲು ಸಾಧ್ಯವಿಲ್ಲ ಎಂದರೆ ಕೆಲವರ ಅಭ್ಯಾಸ ವಿರುದ್ಧವಾಗಿರುತ್ತವೆ.

ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಮಲಗುವಾಗ ಒಳಉಡುಪು ಧರಿಸಿದರೆ ಸ್ಪೆಷಲ್ ಕಟ್ಸ್ ಧರಿಸಬೇಕು. ಆದರೆ ಒಳಉಡುಪು ಇಲ್ಲದೆ ಸಡಿಲವಾದ ಬಟ್ಟೆ ಧರಿಸಿ ಮಲಗುವುದು ಒಳ್ಳೆಯದು.

ಸಿಂಥೆಟಿಕ್ ಒಳಉಡುಪುಗಳನ್ನು ಧರಿಸುವುದರಿಂದ ಚರ್ಮವು ರಾತ್ರಿಯಲ್ಲಿ ಉಸಿರಾಡಲು ಕಷ್ಟವಾಗುತ್ತದೆ, ನೀವು ಹತ್ತಿ ಒಳಉಡುಪುಗಳನ್ನು ಧರಿಸುವುದು ಉತ್ತಮ. ವಿಶೇಷವಾಗಿ ಯೋನಿ ಭಾಗಕ್ಕೆ ಹತ್ತಿ ಒಳಉಡುಪುಗಳನ್ನು ಮಾತ್ರ ರಾತ್ರಿ ಮಲಗುವಾಗ ಧರಿಸಬೇಕು.

ಒಳಉಡುಪುಗಳನ್ನು ಹೆಚ್ಚಾಗಿ ಧರಿಸುವುದರಿಂದ ಜನನಾಂಗಗಳು ತೇವವನ್ನುಂಟುಮಾಡುತ್ತದೆ, ನೀವು ಬೆವರಿದರೆ ಈ ಸಮಸ್ಯೆಯು ವಿಶೇಷವಾಗಿ ಗಂಭೀರವಾಗಿದೆ. ಅಂತಹ ಸಂದರ್ಭದಲ್ಲಿ ನೀವು ಒಳಉಡುಪುಗಳನ್ನು ಬಿಟ್ಟು ಪ್ಯಾಂಟ್‌ಗಳನ್ನು ಧರಿಸಬಹುದು. ಇದು ಮಲಗುವ ಸಮಯದಲ್ಲಿ ಅಸ್ವಸ್ಥತೆ ದೂರ ಮಾಡಿ ನಿಮಗೆ ಆರಾಮ ನಿಡುತ್ತದೆ.

ಬಿಸಿ ವಾತಾವರಣದಲ್ಲಿ ಬಿಕಿನಿ ರೇಖೆಯ ಉದ್ದಕ್ಕೂ ಮೊಡವೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಶೇವ್ ಮಾಡಿದ ನಂತರ ಈ ಸಮಸ್ಯೆ ಉಂಟಾಗುತ್ತದೆ. ಈ ವೇಳೆ, ಬಿಗಿಯಾದ ಒಳಉಡುಪುಗಳನ್ನು ಧರಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಒಳ ಉಡುಪು ಅವಾಯ್ಡ್ ಮಾಡುವುದು ಉತ್ತಮ. ಹೆಚ್ಚುವರಿ ಬಿಗಿಯಾದ ಒಳಉಡುಪುಗಳನ್ನು ಧರಿಸುವುದರಿಂದ ಯೋನಿ ನಾಳದ ಉರಿಯೂತಕ್ಕೆ ಶಿಲೀಂಧ್ರಗಳ ಸೋಂಕಿನ ಪರಿಣಾಮವಾಗಿ ತುರಿಕೆ ಮತ್ತು ಬಿಳಿ ಸ್ರಾವದಂತಹ ಸಮಸ್ಯೆಗಳು ಉಂಟಾಗುತ್ತವೆ. ಆದರೂ ಸರಿಯಾದ ಒಳ ಉಡುಪುಗಳನ್ನು ಧರಿಸದೆ ಮುಟ್ಟಿನ ಸಮಯದಲ್ಲಿ ರಾತ್ರಿ ಮಲಗಲು ಸಾಧ್ಯವಿಲ್ಲ. ಆದರೆ ಬೇರೆ ದಿನಗಳಲ್ಲಿ ಮಲಗುವಾಗ ಒಳಉಡುಪು ಅಥವಾ ಬ್ರಾ ಧರಿಸದಿರುವುದು ಉತ್ತಮ.

Leave A Reply

Your email address will not be published.