ಮಾಸ್ಕ್ ಹಾಕದಿದ್ದರೆ ಬೀಳುತ್ತೆ ದಂಡ| ಮಾಸ್ಕ್ ಧರಿಸದವರಿಗೆ ಈ ಗೈಡ್ ಲೈನ್ಸ್ ಗಳು ಜಾರಿಗೊಳಿಸಿದ ಬಿಎಂಟಿಸಿ!

ಬೆಂಗಳೂರು: ಇನ್ನೇನು ಕೊರೋನ ನಿಯಂತ್ರಣದಲ್ಲಿದೆ, ಯಾವುದೇ ಭಯವಿಲ್ಲದೆ ಸುತ್ತಾಡಬಹುದು ಎಂದುಕೊಂಡಿದ್ದ ಜನತೆಗೆ ನಾಲ್ಕನೇ ಅಲೆ ತಡೆಗೋಡೆಯಾಗಿ ನಿಂತಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು,ಲಾಕ್ ಡೌನ್ ಭಯ ಎಲ್ಲರಲ್ಲೂ ಮೂಡಿದೆ.ಹೀಗಾಗಿ ನಾಲ್ಕನೇ ಅಲೆ ತಡೆಯಲು ಬಿಬಿಎಂಪಿ ಮೇ ಮೊದಲ ವಾರದಿಂದ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗ ಮಾಡಲು ನಿರ್ಧರಿಸಿದೆ.

ಆರಂಭದಲ್ಲೆ ಕೊರೊನಾ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆದರೆ ಸದ್ಯಕ್ಕೆ ದಂಡ ಹಾಕಲ್ಲ.ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದರು.ಆದರೆ ಹಲವೆಡೆ ಜನರು ಮಾಸ್ಕ್ ಧರಿಸುತ್ತಿಲ್ಲದ ಕಾರಣ ಬೆಂಗಳೂರಿನಲ್ಲಿ ದಂಡ ಪ್ರಯೋಗ ಮಾಡಲು ಬಿಬಿಎಂಪಿ ನಿರ್ಧರಿಸಿದೆ.ಮಾಸ್ಕ್ ಹಾಕದೆ ಓಡಾಡುವವರಿಗೆ 250 ರೂಪಾಯಿ ದಂಡ ಹಾಕಲು ತೀರ್ಮಾನ ಮಾಡಲಾಗಿದ್ದು,ಏಪ್ರಿಲ್ ಅಂತ್ಯದವರೆಗೂ ಮಾಸ್ಕ್ ಹಾಕದಿದ್ದರೆ ವಿನಾಯಿತಿ ನೀಡಿ, ಜೊತೆಗೆ ಜಾಗೃತಿ ಮೂಡಿಸಿ ಕಳುಹಿಸಿ ಅಂತ ಮಾರ್ಷೆಲ್​ಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಅಷ್ಟೇ ಅಲ್ಲದೆ ಮಾತ್ರ ಧರಿಸದಿದ್ದರೆ ಕೆಲವೊಂದು ಷರತ್ತುಗಳನ್ನು ಕೂಡ ವಿಧಿಸಿದೆ.

ಹೌದು.ಇನ್ನು ಮುಂದೆ ಮಾಸ್ಕ್ ಧರಿಸಿದರೆ ಮಾತ್ರ ಬಿಎಂಟಿಸಿ ಬಸ್ ಹತ್ತಲು ಅವಕಾಶ ನೀಡಲಾಗುತ್ತದೆ. ಕಪವಿಡ್ ಪಾಸಿಟಿವ್ ದರ ಹೆಚ್ಚುತ್ತಿರುವ ಹಿನ್ನೆಲೆ ಬಿಎಂಟಿಸಿ ಎಚ್ಚರಿಕೆ ಕ್ರಮಕೈಗೊಳ್ಳಲು ಮುಂದಾಗಿದೆ. ಡ್ರೈವರ್, ಕಂಡಕ್ಟರ್ ಕಡ್ಡಾಯವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ಬಗ್ಗೆ ಬಿಎಂಟಿಸಿ ಶೀಘ್ರದಲ್ಲೇ ಗೈಡ್​ಲೈನ್ಸ್ ಜಾರಿಗೊಳಿಸುತ್ತದೆ.

ನಿನ್ನೆ ದೇಶದಲ್ಲಿ 2,483 ಮಂದಿಯಲ್ಲಿ ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈವರೆಗೆ ಒಟ್ಟು 4,25,25,563 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣವು ಶೇ 98.75 ಇದೆ.

Leave A Reply

Your email address will not be published.