Day: April 28, 2022

ಪ್ರವಾಸಿಗರಿಗೆ ಸಿಹಿಸುದ್ದಿ!! ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ಸುರಕ್ಷತೆಗೆ ಒತ್ತು ಕೊಟ್ಟ ಜಿಲ್ಲಾಡಳಿತ!!

ಉಡುಪಿ: ಹಲವು ದುರಂತಗಳಿಗೆ ಸಾಕ್ಷಿಯಾಗಿ, ಒಂದೇ ತಿಂಗಳ ಅಂತರದಲ್ಲಿ ಸೆಲ್ಫಿ ತೆಗೆಯಲು ಹೋದ ಆರು ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದ ಉಡುಪಿ ಮಲ್ಪೆಯ ಪ್ರವಾಸಿ ತಾಣ ಸೇಂಟ್ ಮೇರಿಸ್ ದ್ವೀಪದಲ್ಲಿ ಸುರಕ್ಷಾ ಕ್ರಮಗಳನ್ನು ಪಾಲಿಸುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಸೆಲ್ಫಿ ಟವರ್ ನಿರ್ಮಿಸಲು ಮುಂದಾಗಿದೆ. ಈ ಬಗ್ಗೆ ಮಲ್ಪೆ ಅಭಿವೃದ್ಧಿ ಸಮಿತಿಯ ಸಭೆ ಕರೆದ ಉಡುಪಿ ಜಿಲ್ಲಾಧಿಕಾರಿ, ದ್ವೀಪದಲ್ಲಾಗುವ ದುರಂತಗಳಿಗೆ ಅಂತ್ಯ ಹಾಡಲು ಕ್ರಮ ಕೈಗೊಳ್ಳುವ ಬಗ್ಗೆ ವಿವರಿಸಿದರು. ಅತೀ ಹೆಚ್ಚು ದುರಂತಗಳಿಗೆ ವಿದ್ಯಾರ್ಥಿಗಳ ಸೆಲ್ಫಿ …

ಪ್ರವಾಸಿಗರಿಗೆ ಸಿಹಿಸುದ್ದಿ!! ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ಸುರಕ್ಷತೆಗೆ ಒತ್ತು ಕೊಟ್ಟ ಜಿಲ್ಲಾಡಳಿತ!! Read More »

ಮರಣದಂಡನೆ ಕುರಿತು ಇಲ್ಲಿದೆ  ರೋಚಕ ಮಾಹಿತಿ

ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಆ ಅಪರಾಧವು ವಿರಳಾತಿವಿರಳ ಪ್ರಕರಣವಾಗಿದ್ದರೆ ಅಪರಾಧಿಗೆ ಸಾವಿನ ಶಿಕ್ಷೆ ನೀಡುವುದೇ ಮರಣದಂಡನೆ. ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮರಣದಂಡನೆಯು ಅತ್ಯುಗ್ರ ಶಿಕ್ಷೆ. ಸಂವಿಧಾನದ 21ನೇ ಪರಿಚ್ಛೇದವು ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ ಎಂದು ಹೇಳುತ್ತದೆ. ಆದಾಗ್ಯೂ ಭಾರತದಲ್ಲಿ ಅತ್ಯಂತ ಗಂಭೀರವಾದ ಅಪರಾಧಗಳಿಗೆ ಮರಣದಂಡನೆ ನೀಡಲಾಗುತ್ತದೆ. ಆದರೆ, ರಾಷ್ಟ್ರಪತಿಗೆ ಮರಣದಂಡನೆಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸುವ ವಿಶೇಷ ಅಧಿಕಾರವಿದೆ.  ಭಾರತದಲ್ಲಿ ಮುಖ್ಯವಾಗಿ ಎರಡು ರೀತಿಯಲ್ಲಿ ಮರಣ ದಂಡನೆ ವಿಧಿಸಲಾಗುತ್ತದೆ. …

ಮರಣದಂಡನೆ ಕುರಿತು ಇಲ್ಲಿದೆ  ರೋಚಕ ಮಾಹಿತಿ Read More »

ಮದುವೆ ಸಮಾರಂಭದಲ್ಲಿ ನಿಜವಾದ ಹಾವನ್ನೇ ಹಿಡಿದುಕೊಂಡು “ನಾಗಿಣಿ” ನೃತ್ಯ !! – ವೀಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡುವುದು ಮಾಮೂಲಿ. ಆದರೆ ಇಲ್ಲೊಂದು ಕಡೆ ನಡೆದ ವಿವಾಹ ಸಮಾರಂಭದಲ್ಲಿ ‘ಮೈನ್ ನಾಗಿನ್ (ನಾನು ನಾಗಿಣಿ)’ ಗೀತೆಗೆ ನಿಜವಾದ ಹಾವನ್ನೇ ಹಿಡಿದು ತಂದು ನೃತ್ಯ ಮಾಡುತ್ತಿದ್ದ ಐವರು ಆರೋಪಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಒಡಿಶಾದ ಮಯೂರ್ಬಾಹನ್‌ನ ಕರಾಂಜಿಯಾ ಸ್ಟ್ರೀಟ್‌ ನಲ್ಲಿ ನಡೆದ ವಿವಾಹ ವೇದಿಕೆಯಲ್ಲಿ ಹಾವಿನೊಂದಿಗೆ ನೃತ್ಯ ಮಾಡಲಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಟ್ಟಣದ ಬೀದಿಯಲ್ಲಿ ಪುಂಡರು ಬಿದಿರುಬುಟ್ಟಿಯಲ್ಲಿ ತಂದಿದ್ದ ಹಾವನ್ನು ಪ್ರದರ್ಶಿಸಿದ್ದಾರೆ. ಹಾವಿನೊಂದಿಗೆ …

ಮದುವೆ ಸಮಾರಂಭದಲ್ಲಿ ನಿಜವಾದ ಹಾವನ್ನೇ ಹಿಡಿದುಕೊಂಡು “ನಾಗಿಣಿ” ನೃತ್ಯ !! – ವೀಡಿಯೋ ವೈರಲ್ Read More »

ಮಂಗಳೂರು: ಮತ್ತೆ ಹರಿದ ನೆತ್ತರು | ರೌಡಿಶೀಟರ್ ‘ಕಕ್ಕೆ’ ರಾಹುಲ್ ಹೊಯ್ಗೆಬಜಾರ್ ಹತ್ಯೆ

ಬೆವರು ಕಿತ್ತು ಹೋಗುತ್ತಿರುವ ಮಂಗಳೂರಿನ ಬಿಸಿಲಿನ ಬೇಗೆಯ ನಡುವೆಯೇ ಗುಂಪು ದ್ವೇಷ ನೆತ್ತರು ಕಕ್ಕಿಸಿದೆ. ಎಮ್ಮೆಕೆರೆ ಮೈದಾನದಲ್ಲಿ ರೌಡಿಶೀಟರ್ ರಾಹುಲ್ ಹೊಯಿಗೆ ಬಜಾರ್ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆಗೈದ ಘಟನೆ ಗುರುವಾರ ಸಂಜೆ ನಡೆದಿದೆ. ರಕ್ತ ಸಿಕ್ತ ಕೋಳಿ ಅಂಕದ ಕಣದಲ್ಲಿ ‘ಕಕ್ಕೆ’ಯ ರಕ್ತ ಬೆರೆತಿದೆ. ಪಾಂಡೇಶ್ವರ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಕಕ್ಕೆ ಅಲಿಯಾಸ್ ರಾಹುಲ್ (26) ಕೊಲೆಯಾದ ವ್ಯಕ್ತಿ. ಎಮ್ಮೆಕೆರೆ ಬಳಿ ಕೋಳಿ ಅಂಕ ನಡೆಯುತ್ತಿದ್ದ ಸಂದರ್ಭ ಅಲ್ಲಿಂದ ಅಟ್ಟಿಸಿಕೊಂಡು ಬಂದ ನಾಲ್ವರ ತಂಡ ಮೈದಾನದ …

ಮಂಗಳೂರು: ಮತ್ತೆ ಹರಿದ ನೆತ್ತರು | ರೌಡಿಶೀಟರ್ ‘ಕಕ್ಕೆ’ ರಾಹುಲ್ ಹೊಯ್ಗೆಬಜಾರ್ ಹತ್ಯೆ Read More »

ಮೇಕೆ ಮರಿ ನುಂಗಿದ ಸುಮಾರು 14 ಅಡಿ ಉದ್ದದ ಹೆಬ್ಬಾವು|ಬೇಟೆ ಮುಗಿಸಿ ಬೆಚ್ಚಗೆ ಶೆಡ್​ನಲ್ಲಿ ಮಲಗಿದ್ದ ಹಾವು ಉರಗ ತಜ್ಞರ ಕೈ ವಶ

ಚಿಕ್ಕಮಗಳೂರು: ಮೇಕೆ ಮರಿ ನುಂಗಿ ಬೆಚ್ಚಗೆ ಶೆಡ್​ನಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಸೆರೆ ಹಿಡಿಯಲಾದ ಘಟನೆ ನಡೆದಿದೆ. ನಗರದ ಕಾಫಿ ಮಂಡಳಿಯ ಸಮೀಪ ವೆಂಕಟಪ್ಪ ಎಂಬುವವರಿಗೆ ಸೇರಿದ ಕುರಿ ಶೆಡ್​ಗೆ ಸುಮಾರು 14 ಅಡಿ ಉದ್ದದ ಹೆಬ್ಬಾವು ಬಂದು ಮೇಕೆ ಮರಿಯನ್ನು ನುಂಗಿದ್ದು,ಇದನ್ನು ಗಮನಿಸಿದ ಮಾಲೀಕ ವೆಂಕಟಪ್ಪ ಮೇಕೆ ಮರಿ ಪ್ರಾಣ ಉಳಿಸಲು ಜೋರಾಗಿ ಕಿರುಚಿದ್ದಾರೆ. ಆದರೆ, ಹೆಬ್ಬಾವು ಮಾತ್ರ ಮೇಕೆ ಮರಿ ನುಂಗುವುದನ್ನು ಬಿಡಲಿಲ್ಲ. ಸಂಪೂರ್ಣವಾಗಿ ನುಂಗಿಯೇ ನಂತರ …

ಮೇಕೆ ಮರಿ ನುಂಗಿದ ಸುಮಾರು 14 ಅಡಿ ಉದ್ದದ ಹೆಬ್ಬಾವು|ಬೇಟೆ ಮುಗಿಸಿ ಬೆಚ್ಚಗೆ ಶೆಡ್​ನಲ್ಲಿ ಮಲಗಿದ್ದ ಹಾವು ಉರಗ ತಜ್ಞರ ಕೈ ವಶ Read More »

ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ ಭರ್ಜರಿ ಆಫರ್| ವಾಟ್ಸಪ್ ಪೇ ಮೇಲೆ ಸಿಗಲಿದೆ ಕ್ಯಾಶ್​ಬ್ಯಾಕ್!

ಪ್ರತಿಯೊಬ್ಬ ವ್ಯಕ್ತಿಯು ಇಂದು ಬಳಸುತ್ತಿರುವುದು ವಾಟ್ಸಪ್. ಯಾವುದೇ ಒಂದು ವಿಷಯ ನಡೆದರು ಅತಿವೇಗವಾಗಿ ನಮಗೆ ಈ ಮೀಡಿಯ ಮೂಲಕವೇ ತಲುಪುತ್ತದೆ. ಇಂತಹ ವಾಟ್ಸಪ್ ತನ್ನ ಗ್ರಾಹಕರನ್ನು ಸೆಳೆಯಲು ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಇದೀಗ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಮುಂದಾಗಿದೆ. ಹೌದು. ಇದೀಗ ವಾಟ್ಸಪ್ ಕೇವಲ ಚಾಟಿಂಗ್ ಮಾತ್ರ ಸೀಮಿತವಾಗಿರದೆ, ಹಣದ ವಹಿವಾಟು ನಡೆಸಬಹುದಾದಂತಹ ಒಂದು ಯುಪಿಐ ಪೇಮೆಂಟ್ ಆಗಿದೆ. ಪ್ರಮುಖ ಮಾರುಕಟ್ಟೆ …

ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ ಭರ್ಜರಿ ಆಫರ್| ವಾಟ್ಸಪ್ ಪೇ ಮೇಲೆ ಸಿಗಲಿದೆ ಕ್ಯಾಶ್​ಬ್ಯಾಕ್! Read More »

ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ !! | ಅರ್ಜಿ ಸಲ್ಲಿಸಲು ಮೇ 7 ಕೊನೆಯ ದಿನ

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ್ರೊಫೆಸರ್, ಅಸೋಸಿಯೇಟ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಕೇಳಲಾಗಿದೆ. ಆಸಕ್ತರು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಮೇ 7ರೊಳಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನೇರವಾಗಿ ಬಂದ ಅರ್ಜಿ ತಿರಸ್ಕರಿಸಲಾಗುವುದು. …

ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ !! | ಅರ್ಜಿ ಸಲ್ಲಿಸಲು ಮೇ 7 ಕೊನೆಯ ದಿನ Read More »

ONGC ಯಲ್ಲಿ ಭರ್ಜರಿ ಉದ್ಯೋಗವಕಾಶ | 3614 ಹುದ್ದೆಗಳು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಟ್ರೈನಿ ಹುದ್ದೆಗಳನ್ನು ಭರ್ತಿ  ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಮೇ 15,2022ರ ಸಂಜೆ 6 ಗಂಟೆಯೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ. ಹುದ್ದೆ : ಅಪ್ರೆಂಟಿಸ್ ಟ್ರೈನಿ ಹುದ್ದೆ ಸಂಖ್ಯೆ : 3614 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಎಪ್ರಿಲ್ 27, 2022ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ …

ONGC ಯಲ್ಲಿ ಭರ್ಜರಿ ಉದ್ಯೋಗವಕಾಶ | 3614 ಹುದ್ದೆಗಳು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ! Read More »

ಮಾಸ್ಕ್ ಹಾಕದಿದ್ದರೆ ಬೀಳುತ್ತೆ ದಂಡ| ಮಾಸ್ಕ್ ಧರಿಸದವರಿಗೆ ಈ ಗೈಡ್ ಲೈನ್ಸ್ ಗಳು ಜಾರಿಗೊಳಿಸಿದ ಬಿಎಂಟಿಸಿ!

ಬೆಂಗಳೂರು: ಇನ್ನೇನು ಕೊರೋನ ನಿಯಂತ್ರಣದಲ್ಲಿದೆ, ಯಾವುದೇ ಭಯವಿಲ್ಲದೆ ಸುತ್ತಾಡಬಹುದು ಎಂದುಕೊಂಡಿದ್ದ ಜನತೆಗೆ ನಾಲ್ಕನೇ ಅಲೆ ತಡೆಗೋಡೆಯಾಗಿ ನಿಂತಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು,ಲಾಕ್ ಡೌನ್ ಭಯ ಎಲ್ಲರಲ್ಲೂ ಮೂಡಿದೆ.ಹೀಗಾಗಿ ನಾಲ್ಕನೇ ಅಲೆ ತಡೆಯಲು ಬಿಬಿಎಂಪಿ ಮೇ ಮೊದಲ ವಾರದಿಂದ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗ ಮಾಡಲು ನಿರ್ಧರಿಸಿದೆ. ಆರಂಭದಲ್ಲೆ ಕೊರೊನಾ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆದರೆ ಸದ್ಯಕ್ಕೆ ದಂಡ ಹಾಕಲ್ಲ.ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದರು.ಆದರೆ ಹಲವೆಡೆ …

ಮಾಸ್ಕ್ ಹಾಕದಿದ್ದರೆ ಬೀಳುತ್ತೆ ದಂಡ| ಮಾಸ್ಕ್ ಧರಿಸದವರಿಗೆ ಈ ಗೈಡ್ ಲೈನ್ಸ್ ಗಳು ಜಾರಿಗೊಳಿಸಿದ ಬಿಎಂಟಿಸಿ! Read More »

ಆಟೋದಲ್ಲಿ ಹತ್ತಿದ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಚಾಲಕ ಹಾಗೂ ಸ್ನೇಹಿತನಿಂದ ಅತ್ಯಾಚಾರ!

ಹಾಡಹಗಲೇ ಆಟೋ ಚಾಲಕ ಮತ್ತು ಆತನ ಸ್ನೇಹಿತ ಸೇರಿ ಆಟೋದಲ್ಲಿ ತೆರಳುತ್ತಿದ್ದ ಯುವತಿಯನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದು, ಜೊತೆಗೆ ವೀಡಿಯೋ ಕೂಡಾ ಚಿತ್ರೀಕರಿಸಿ ಪೈಶಾಚಿಕ ಕೃತ್ಯ ಎಸಗಿದ ಘಟನೆಯೊಂದು ಯಾದಗಿರಿ ತಾಲೂಕಿನಲ್ಲಿ ನಡೆದಿದೆ. ಮನೆ ಕೆಲಸ ಮಾಡಿಕೊಂಡಿದ್ದ ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿ ಎ.26ರಂದು ಯಾದಗಿರಿ ನಗರಕ್ಕೆ ತೆರಳಲೆಂದು ಹನುಮಂತ ಎಂಬಾತನ ಆಟೋ ಹತ್ತಿದ್ದಳು. ಈ ವೇಳೆ ಆಟೋ ಚಾಲಕ ತನ್ನ ಸ್ನೇಹಿತನನ್ನೂ ಹತ್ತಿಸಿಕೊಂಡಿದ್ದ. ಯುವತಿ ಹೇಳಿದ ಸ್ಥಳಕ್ಕೆ ಕರೆದೊಯ್ಯುವ ಬದಲು ಬೇರೆಡೆಗೆ ಆಟೋ ತೆರಳುತ್ತಿತ್ತು. …

ಆಟೋದಲ್ಲಿ ಹತ್ತಿದ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಚಾಲಕ ಹಾಗೂ ಸ್ನೇಹಿತನಿಂದ ಅತ್ಯಾಚಾರ! Read More »

error: Content is protected !!
Scroll to Top