ಮಧ್ಯಾಹ್ನ ಮಂಗಳೂರಿಗೆ ಆಗಮಿಸಲಿದ್ದಾರೆ ಮುಖ್ಯಮಂತ್ರಿ

ಎ.27ರಂದು ಬೆಳಿಗ್ಗೆ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ತೆರಳೋದಕ್ಕೆ ಏರ್ಪೋರ್ಟ್ ಗೂ ಹೋಗಿದ್ದರು.   ಆದರೆ ವಿಮಾನ ವಿಳಂಬದ ಕಾರಣದಿಂದಾಗಿ, ಬೆಳಗ್ಗಿನ ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿ, ಏರ್ಪೋರ್ಟ್ ನಿಂದ ಗೃಹ ಕಚೇರಿ ಕೃಷ್ಣಾಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ಪಾಲ್ಗೊಂಡರು. ಇದೀಗ ಮುಖ್ಯಮಂತ್ರಿಗಳ ಪ್ರವಾಸದ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು,ಮಧ್ಯಾಹ್ನ3 ಗಂಟೆಗೆ ಮಂಗಳೂರು ತಲುಪಲಿದ್ದಾರೆ.