BSF ( ಗಡಿ ಭದ್ರತಾ ಪಡೆ)ನಲ್ಲಿ 90 ‘ಗ್ರೂಪ್ ಬಿ’ ಹುದ್ದೆಗಳ ನೇಮಕ: ಡಿಪ್ಲೊಮ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ : ಮಾಸಿಕ ವೇತನ ರೂ.1,40,000 ವರೆಗೆ|

ಬಾರ್ಡರ್ ಸೆಕ್ಯೂರಿಟಿ ಪೋರ್ಸ್ (ಗಡಿ ಭದ್ರತಾ ಪಡೆ) ನಲ್ಲಿ ಅಗತ್ಯ ಇರುವ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಹಾಕಿರಿ.

ಹುದ್ದೆ ಹೆಸರು: ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್)
ಹುದ್ದೆಗಳ ಸಂಖ್ಯೆ : 01
ವೇತನ ಶ್ರೇಣಿ : ರೂ.44,900-142400 / ಲೆವೆಲ್-7ಪೇ.

ಹುದ್ದೆ ಹೆಸರು: ಸಬ್ ಇನ್ಸ್ಪೆಕ್ಟರ್ (ವರ್ಕ್ಸ್)
ಹುದ್ದೆಗಳ ಸಂಖ್ಯೆ : 57
ವೇತನ ಶ್ರೇಣಿ : ರೂ.35400-112400, ಲೆವೆಲ್-6

ಹುದ್ದೆ ಹೆಸರು: ಜೂನಿಯರ್ ಇಂಜಿನಿಯರ್ / ಸಬ್ ಇನ್ಸ್ಪೆಕ್ಟರ್ (ಇಲೆಕ್ಟ್ರಿಕಲ್)
ಹುದ್ದೆಗಳ ಸಂಖ್ಯೆ : 32
ವೇತನ ಶ್ರೇಣಿ : ರೂ.35400-112400, / ಲೆವೆಲ್-6 ಪೇ

ವಿದ್ಯಾರ್ಹತೆ : ಇನ್ಸ್‌ಪೆಕ್ಟರ್ (ಆರ್ಕಿಟೆಕ್ಸ್) : ಅಂಗೀಕೃತ
ವಿಶ್ವವಿದ್ಯಾಲಯಗಳಿಂದ ಆರ್ಕಿಟೆಕ್ಚರ್ ವಿಷಯದಲ್ಲಿ ಪದವಿ ತೇರ್ಗಡೆ ಮಾಡಿರಬೇಕು.

ಸಬ್‌ಇನ್ಸ್‌ಪೆಕ್ಟರ್ (ವರ್ಕ್ಸ್) : ಕೇಂದ್ರ ಅಥವಾ ರಾಜ್ಯ ಸರ್ಕಾರಿ ಅಂಗೀಕೃತ ವಿವಿ / ಶಿಕ್ಷಣ ಸಂಸ್ಥೆಗಳಿಂದ 3 ವರ್ಷದ ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್ ತೇರ್ಗಡೆ ಹೊಂದಿರಬೇಕು.

ಸಬ್‌ಇನ್ಸ್‌ಪೆಕ್ಟರ್ (ಇಲೆಕ್ಟ್ರಿಕಲ್) : ಕೇಂದ್ರ ಅಥವಾ ರಾಜ್ಯ
ಸರ್ಕಾರಿ ಅಂಗೀಕೃತ ವಿವಿ / ಶಿಕ್ಷಣ ಸಂಸ್ಥೆಗಳಿಂದ 3 ವರ್ಷದ ಡಿಪ್ಲೊಮ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್
ಪಾಸ್ ಮಾಡಿರಬೇಕು.

ಅರ್ಜಿ ಶುಲ್ಕ : ಅರ್ಜಿ ಸಲ್ಲಿಸಲು ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200/-,  ಎಸ್‌ಸಿ / ಎಸ್ಟಿ / ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಅಥವಾ ಇ-ಚಲನ್ ಮೂಲಕ ಪಾವತಿ ಮಾಡಬಹುದು.

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 25-04-2022
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 08-06-2022
ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ:
08-06-2022

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಶಾರ್ಟ್ ಲಿಸ್ಟ್ ಮಾಡುವ ಮೂಲಕ ಆಯ್ಕೆ
ಮಾಡಲಾಗುತ್ತದೆ. ಈ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ವೈದ್ಯಕೀಯ ಕೀಯ ಪರೀಕ್ಷೆಗಳು ಸಹ ಇರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.