ಈ ವಾರದ ರಾಶಿ ಭವಿಷ್ಯ ಇಲ್ಲಿದೆ ನೋಡಿ

2022 ಏಪ್ರಿಲ್ 26ರ ಮಂಗಳವಾರವಾದಿಂದ 30-4-2022 ರವರೆಗೆ ವಾರ ರಾಶಿ ಭವಿಷ್ಯ ಗ್ರಹಗಳ ಬದಲಾವಣೆಯ ನಡುವೆ  ನಿಮ್ಮ ವಾರ ಹೇಗಿರುತ್ತದೆ..? ನಿಮ್ಮ ರಾಶಿಯ ಫಲಾಫಲ ಈ ವಾರ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ;
ನೀವು ಮಾಡುವ ಕೆಲವು ಕೆಲಸಗಳಲ್ಲಿ ಉತ್ತಮ ಲಾಭದ ಸಾಧ್ಯತೆ ಇದೆ.ಆಸ್ತಿ ವ್ಯಾಪಾರಿಗಳಿಗೆ ಇಂದು ಹೆಚ್ಚು ಲಾಭದಾಯಕರವಾಗಿದೆ. ಅನಗತ್ಯ ಸಿಟ್ಟಿನಿಂದ ಆಗುವ ನಷ್ಟ ತಪ್ಪಿಸಲು ಸಮಾಧಾನದಿಂದ ಇರುವುದು ಒಳ್ಳೆಯದು.

ವೃಷಭ
ಹೊಸ ವಸ್ತುಗಳನ್ನು ಖರೀದಿಯನ್ನು ಮಾಡುವ ಅವಕಾಶವಿರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ. ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿ ವ್ಯವಹರಿಸುವುದು ಒಳ್ಳೆಯದು. 

ಮಿಥುನ
ನಿಮಗೆ ಮಿಶ್ರ ದಿನವಾಗಲಿದೆ.  ಆಸ್ತಿ ಖರೀದಿಯನ್ನು ಸ್ವಲ್ಪ ಕಾಲ ಮುಂದೂಡುವುದು ಒಳ್ಳೆಯದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳನ್ನು ಕಾಣಬಹುದು.

ಕಟಕ
ಕಟಕ ರಾಶಿಯವರಿಗಿಂದು ಒಳ್ಳೆಯ ವಾರವಾಗಲಿದೆ. ನಿಮಗಾಗಿ ಸಮಯ ತೆಗೆದುಕೊಳ್ಳಿ ಮತ್ತು ನಿಮ್ಮ ಭವಿಷ್ಯದ ಯೋಜನೆಗಳಲ್ಲಿ ಕೆಲಸ ಮಾಡಿ. ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು. 

ಸಿಂಹ
ಈ ದಿನ ನೀವು ಮಾಡುವ ಎಲ್ಲಾ ಕೆಲಸಗಳು ಸುಲಭವಾಗುತ್ತವೆ. ನೀವು ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು. ಹಿರಿಯರಿಂದ ಆಸ್ತಿ ಅಥವಾ ಧನಸಹಾಯ ಸಿಗುವ ಸಾಧ್ಯತೆಗಳಿವೆ.

ಕನ್ಯಾ
ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವೃತ್ತಿಯಲ್ಲಿ ಹೆಚ್ಚಿನ ಒತ್ತಡಗಳಿರುತ್ತವೆ. 

ತುಲಾ
ನೀವು ಮನೆಯಲ್ಲಿ ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು. ಯಾರನ್ನಾದರೂ ಅತಿಯಾಗಿ ನಂಬುವುದು ಒತ್ತಡಕ್ಕೆ ಕಾರಣವಾಗಬಹುದು. ಆಹಾರದಿಂದ ಆರೋಗ್ಯ ವ್ಯತ್ಯಾಸ ಆಗುವ ಸಾಧ್ಯತೆ ಇದೆ.

ವೃಶ್ಚಿಕ
ಮಹಿಳೆಯರು ಈ ದಿನ ಕೆಲವು ವಿಶೇಷವಾದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಮಕ್ಕಳ ಪ್ರಗತಿಯ ಬಗ್ಗೆ ಶುಭವಾರ್ತೆ ಕೇಳುವಿರಿ.

ಮಕರ
ನಿಮ್ಮ ಆರ್ಥಿಕ ಮತ್ತು ಕೌಟುಂಬಿಕ ಪರಿಸ್ಥಿತಿಯನ್ನು ಸುಧಾರಿಸಲು ನಿಮ್ಮ ಪ್ರಯತ್ನಗಳು ಮುಂದುವರಿಯುತ್ತವೆ. ನೀವು ಹಣ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು

ಕುಂಭ
ನಿಮ್ಮ ದಿನಚರಿ ಅಥವಾ ಯೋಜನೆಯಲ್ಲಿ ನೀವು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಬೇಕಾಗಬಹುದು. ಯುವಕರಿಗೆ ಉದ್ಯೋಗದಲ್ಲಿ ಅಡೆ ತಡೆಗಳು ಬರುವ ಸಾಧ್ಯತೆಗಳಿವೆ.

ಮೀನ
ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯ ದಿಕ್ಕಿನಲ್ಲಿ ಮುನ್ನಡೆಯುತ್ತದೆ. ಆದಾಯವನ್ನು ಹೆಚ್ಚಿಸಲು ನೀವು ಕೆಲವು ಉತ್ತಮ ಅವಕಾಶಗಳನ್ನು ಸಹ ಪಡೆಯಬಹುದು. ಸ್ವಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. 

Leave A Reply

Your email address will not be published.