ಒಂದು ಕಾಫಿ ಪೋಟೊ ವೈರಲ್ ! ಏನು ಈ ವಿಶೇಷತೆ ?

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದ ಒಂದು ಚಿತ್ರ, ಇದು ಕಂಪ್ಯೂಟರ್‌ನಲ್ಲಿ ಮಾಡಿದ್ದೇ ಅಥವಾ ಕೈಯಿಂದ ಬರೆದ ಚಿತ್ರವೇ ಅಥವಾ ಛಾಯಾಚಿತ್ರವೇ ಎಂದು ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಇದೊಂದು ಛಾಯಾಚಿತ್ರವಲ್ಲ ಎಂದು ನಂಬಲು ತುಂಬಾ ಕಷ್ಟಕರ ಎನಿಸುವಂತಹ ವರ್ಣಚಿತ್ರ ಇದು.

ಒಂದು ಸಣ್ಣ ಲೋಟದಲ್ಲಿ ತುಂಬಿದ ಬಿಸಿಯಾದ ಕಾಫಿಯನ್ನು, ಅದನ್ನು ತಂಪಾಗಿಸಿಕೊಳ್ಳಲು ಕೆಳಗಡೆ ಒಂದು ಚಿಕ್ಕ ತಟ್ಟೆಯಂತಿರುವುದನ್ನು ನಾವು ಈ ಫೋಟೋದಲ್ಲಿ ನೋಡಬಹುದಾಗಿದೆ. ಹತ್ತಿರದಿಂದ ಇದನ್ನು ನೋಡಿದಾಗ ಉತ್ತಮ ಕ್ಯಾಮೆರಾದಿಂದ ಸೆರೆ ಹಿಡಿಯಲಾದ ಛಾಯಾಚಿತ್ರದಂತೆ ಕಾಣುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಒಂದು ಸರಳವಾದ ಫಿಲ್ಟರ್ ಕಾಫಿ ಫೋಟೋ ಏಕೆ ಅಷ್ಟೊಂದು ಗಮನ ಸೆಳೆಯುತ್ತಿದೆ ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದಾರೆ.

ಆದರೆ ಇದು ಕಲಾವಿದೆಯ ಕುಂಚದಿಂದ ಅರಳಿದ ನೈಜ್ಯ ಚಿತ್ರ . ಚೆನ್ನೈ ಮೂಲದ ಕಲಾವಿದೆ ಮತ್ತು ಛಾಯಾಗ್ರಾಹಕಿಯಾದ ವರುಣಾ ಶ್ರೀಧರ್ ಅವರು ತಾವು ಬಿಡಿಸಿದ ಫಿಲ್ಟರ್ ಕಾಫಿಯ ವರ್ಣಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಕಲೆಯಲ್ಲಿ ಇಂಪ್ರೆಷನಿಸಮ್‌ನೊಂದಿಗೆ ಹೈಪರ್‌ ರಿಯಲಿಸಂ ಅನ್ನು ಅಳವಡಿಸಿಕೊಳ್ಳಲು ನಾನು ಬಯಸುತ್ತೇನೆ, ಅದಕ್ಕಾಗಿಯೇ ಈ ವರ್ಣಚಿತ್ರದಲ್ಲಿ ವಿನ್ಯಾಸವನ್ನು ಹೀಗೆ ಚಿತ್ರಿಸಿದ್ದೇನೆ” ನಾನು ಬಾಲ್ಯದಿಂದಲೂ ಚಿತ್ರಗಳನ್ನು ಬಿಡಿಸುತ್ತಿದ್ದೆ, ನಾನು ಎರಡು ವರ್ಷದವನಿದ್ದಾಗ ಚಿತ್ರ ಬಿಡಿಸುವುದನ್ನು ಶುರು ಮಾಡಿದೆ ಮತ್ತು ನಾಲ್ಕನೇ ವಯಸ್ಸಿನಲ್ಲಿ ನನ್ನ ಮೊದಲ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದು 21 ವರ್ಷದ ಹುಡುಗಿ‌ ಹೇಳಿದ್ದಾಳೆ.

Leave A Reply

Your email address will not be published.