ಪ್ರಾರ್ಥನೆಗೆಂದು ಬಂದ 11 ವರ್ಷದ ಬಾಲಕಿ ಮೇಲೆ ಪಾದ್ರಿಯಿಂದ ಅತ್ಯಾಚಾರ!

ಚರ್ಚ್ ಗೆ ಪ್ರಾರ್ಥನೆ ಮಾಡಲೆಂದು ಬಂದ
11 ವರ್ಷದ ಬಾಲಕಿಯ ಮೇಲೆ ಚರ್ಚ್ ಪಾದ್ರಿಯೊಬ್ಬ ಅತ್ಯಾಚಾರ ಮಾಡಿದ ಹೀನಾಯ ಘಟನೆಯೊಂದು ನಡೆದಿದೆ. ಇಷ್ಟು ಮಾತ್ರವಲ್ಲದೇ ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡಾ ಹಾಕಿದ್ದಾನೆ. ಹೆದರಿದ ಬಾಲಕಿ ಮನೆಗೆ ಬಂದ ಕೂಡಲೇ ತನ್ನ ತಾಯಿಯ ಬಳಿ ಅಮಾನುಷ ಕೃತ್ಯವನ್ನು ಹೇಳಿಕೊಂಡಿದ್ದಾಳೆ.

ಚರ್ಚ್ ಪಾದ್ರಿ ಆಲ್ಬರ್ಟ್ ಅತ್ಯಾಚಾರ ಆರೋಪಿ.

ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಚಾಂದಿನಗರ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ತಾಯಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.