ಶ್ರೀರಾಮ ಒಳ್ಳೆಯವನಲ್ಲ, ಕುತಂತ್ರಿ, ರಾವಣ ಒಳ್ಳೆಯ ವ್ಯಕ್ತಿ ಎಂದು ಭಾಷಣ ಮಾಡಿದ ಸಹಾಯಕ ಪ್ರಾಧ್ಯಾಪಕಿ – ಕೆಲಸದಿಂದ ವಜಾಗೊಳಿಸಿದ ಯೂನಿವರ್ಸಿಟಿ

ಕೋಟ್ಯಾಂತರ ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮ‌ನನ್ನು ಪ್ರಾಧ್ಯಾಪಕಿಯೊಬ್ಬರು ಕೀಳು ಅಭಿರುಚಿಯಿಂದ ನಿಂದಿಸಿದ್ದು, ಈಗ ಬಹಳ ಚರ್ಚೆಗೆ ಕಾರಣವಾಗಿದೆ.

ಲವ್ಲಿ ಪ್ರೊಫೆಶನಲ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕಿ ಗುರ್ಸಂಗ್ ಪ್ರೀತ್ ಕೌರ್ ಎಂಬಾಕೆಯೇ ಈ ರೀತಿಯ ನಿಂದನಾತ್ಮಕವಾಗಿ ಶ್ರೀರಾಮನನ್ನು ಜರಿದದ್ದು. ಈಕೆಯ ಭಾಷಣ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ನೋಡಿದ ಜನರು ಪ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಹಿಂದೂ ದೇವರಿಗೆ ಅವಮಾನ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿದ್ದರು. ಅದರ ಬೆನ್ನಲ್ಲೇ ಯೂನಿರ್ವಸಿಟಿ ಈ ಪ್ರಾಧ್ಯಾಪಕಿಯನ್ನು ವಜಾಗೊಳಿಸಿದೆ.


Ad Widget

Ad Widget

Ad Widget

ಸಹಾಯಕ ಪ್ರಾಧ್ಯಾಪಕಿ ಮಾಡಿದ ಭಾಷಣದಿಂದ ಅನೇಕರಿಗೆ ನೋವಾಗಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಇದು ಆ ಪ್ರಾಧ್ಯಾಪಕಿಯ ವೈಯಕ್ತಿಕ ಹೇಳಿಕೆಯೇ ಹೊರತು ನಮ್ಮ ವಿಶ್ವವಿದ್ಯಾನಿಲಯ ಇದಕ್ಕೆ ಜವಾಬ್ದಾರ ಅಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದೆ.

ಈ ಯೂನಿವರ್ಸಿಟಿ ಇರುವುದು ಪಂಜಾಬ್‌ನ ಜಲಂಧರ್‌ನಲ್ಲಿ, ಅದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಗುರ್ಸಂಗ್ ಪ್ರೀತ್ ಕೌರ್, ಶೈಕ್ಷಣಿಕ ಸಮಾರಂಭವೊಂದರಲ್ಲಿ ಮಾತನಾಡುತ್ತ “ನಿಜ ಹೇಳಬೇಕೆಂದರೆ ಶ್ರೀರಾಮ ನಿಜಕ್ಕೂ ಒಳ್ಳೆಯವನಲ್ಲ. ರಾವಣನೇ ಒಳ್ಳೆಯ ವ್ಯಕ್ತಿ. ರಾಮನೊಬ್ಬ ಕುತಂತ್ರಿ. ಸೀತೆಯನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಎಲ್ಲ ಉಪಾಯ ಮಾಡಿದ. ಸೀತೆಯನ್ನು ತೊಂದರೆಗೆ ನೂಕಿ, ಬಳಿಕ ರಾವಣನನ್ನು ದೂಷಿಸಿದ. ಆದರೆ ಈಗ ಇಡೀ ಜಗತ್ತು ಶ್ರೀರಾಮನನ್ನು ಪೂಜಿಸುತ್ತದೆ, ರಾವಣನನ್ನು ಕೆಟ್ಟವನು ಎಂದು ಹೇಳುತ್ತಿದೆ. ಅಂದ ಮೇಲೆ ನಾನೇನು ಮಾಡಲು ಸಾಧ್ಯ” ಎಂದು ಹೇಳಿದ್ದರು.

Leave a Reply

error: Content is protected !!
Scroll to Top
%d bloggers like this: