ದುಬಾರಿ 50ಕೆಜಿ ಲಿಂಬೆಹಣ್ಣಿನ ಡಬ್ಬಿಯನ್ನೇ ಎತ್ತಾಕೊಂಡೋದ ಕಳ್ಳ!| ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್

ಈ ದುಬಾರಿ ಕಾಲದಲ್ಲಿ ದಿನಬಳಕೆಯ ವಸ್ತುಗಳಿಂದ ಹಿಡಿದು ಎಲ್ಲಾ ವಸ್ತುಗಳಿಗೆ ಬೆಲೆ ಹೆಚ್ಚುತ್ತಲೇ ಇದೆ. ಈ ಹಿಂದೆ ನೀರುಳ್ಳಿ ಬೆಲೆ ಅಧಿಕವಾದಾಗ ನೀರುಳ್ಳಿಯನ್ನು ಕಳ್ಳತನ ಮಾಡಿದಂತಹ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದೀಗ ಅದೇ ಸಾಲಿಗೆ ನಿಂಬೆಹಣ್ಣು ಕೂಡ ಸೇರಿದೆ.

ಹೌದು.ದೇಶದಲ್ಲಿ ನಿಂಬೆಹಣ್ಣಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಕಳ್ಳರು ಇದೀಗ ಅವುಗಳ ಮೇಲೆ ಕಣ್ಣು ಹಾಕಿದ್ದಾರೆ.ಜೈಪುರದ ಮುಹನಾ ಮಂಡಿಯಲ್ಲಿ ಕಳ್ಳನೋರ್ವ ನಿಂಬೆಹಣ್ಣು ಕಳ್ಳತನ ಮಾಡಿ ಪರಾರಿಯಾಗಿರುವ ವಿಡಿಯೋ ವೈರಲ್​ ಆಗಿದೆ. ಇಲ್ಲಿನ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ನಿಂಬೆ ಹಣ್ಣು 400 ರೂಪಾಯಿಗೆ ಮಾರಾಟವಾಗ್ತಿದ್ದು, ಕಳ್ಳನೋರ್ವ 50 ಕೆಜಿ ನಿಂಬೆ ಕದ್ದು ಪರಾರಿಯಾಗಿದ್ದಾನೆ. ರಿಕ್ಷಾದಲ್ಲಿ ಬಂದಿರುವ ಆರೋಪಿ ನಿಂಬೆ ಹಣ್ಣು ತುಂಬಿರುವ ಬಾಕ್ಸ್‌ ಅನ್ನು ಅದರಲ್ಲಿಟ್ಟುಕೊಂಡು ಪರಾರಿಯಾಗಿದ್ದಾನೆ.


Ad Widget

Ad Widget

Ad Widget

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಶೋಧಕಾರ್ಯ ನಡೆಸುತ್ತಿದ್ದಾರೆ.

1 thought on “ದುಬಾರಿ 50ಕೆಜಿ ಲಿಂಬೆಹಣ್ಣಿನ ಡಬ್ಬಿಯನ್ನೇ ಎತ್ತಾಕೊಂಡೋದ ಕಳ್ಳ!| ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್”

  1. Pingback: ದುಬಾರಿ 50ಕೆಜಿ ಲಿಂಬೆಹಣ್ಣಿನ ಡಬ್ಬಿಯನ್ನೇ ಎತ್ತಾಕೊಂಡೋದ ಕಳ್ಳ!| ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್ – SHOPP

Leave a Reply

error: Content is protected !!
Scroll to Top
%d bloggers like this: