ಪ್ರವಾಸಕ್ಕೆ ಗೋವಾ ಹೋಗುವವರಿಗೆ ಇಲ್ಲಿದೆ ಮಹತ್ವದ ಸೂಚನೆ

ವಿಶ್ವದಾದ್ಯಂತವಿರುವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಗೋವಾ ಸಹ ಸೇರಿದೆ. ಭಾರತದ ಹಲವು ಯುವಕರು ಸಹ ಗೋವಾ ಪ್ರವಾಸಕ್ಕೆ ಹೋಗಲು ಬಯಸುತ್ತಾರೆ. ಆದರೆ ಗೋವಾ ಪ್ರವಾಸಕ್ಕೆ ತೆರಳುವ ಮೊದಲು ಈ ಸೂಚನೆಗಳನ್ನು ಗಮನಿಸಿ.

ಗೋವಾಗೆ ಹೋಗುವ ಮೊದಲು, ನೀವು ಎಲ್ಲಿಗೆ ಹೋಗಬೇಕೆಂಬುವುದನ್ನ ಮೊದಲೆ ಲಿಸ್ಟ್ ಮಾಡಿ. ದಕ್ಷಿಣ ಗೋವಾ ಮತ್ತು ಉತ್ತರ ಗೋವಾ ಎರಡೂ ಗೋವಾದ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ. 

ಕೇಂದ್ರ ಮತ್ತು ರಸ್ತೆ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚು ಅಪಘಾತವಾಗುವ ಪ್ರವಾಸಿ ತಾಣದಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಗೋವಾಗೆ ತೆರಳುವ ಹೆದ್ದಾರಿಗಳಲ್ಲಿ ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದೆ. 

ಬೈಕ್ ಮೂಲಕ, ಕಾರಿನ ಮೂಲಕ ಗೆಳೆಯರೊಂದಿಗೆ ಗೋವಾಗೆ ತೆರಳುವವರು ಹೆದ್ದಾರಿಯಲ್ಲಿ ಹಾಕಿರುವ ಸೂಚನೆಗಳನ್ನು ಗಮನಿಸಲೇಬೇಕು. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಸಿಬಾರದು. ಸುರಕ್ಷತೆ ಅತೀ ಅಗತ್ಯವಾಗಿದ್ದು, ಎಚ್ಚರದಿಂದ ಪ್ರಯಾಣ ಮಾಡುವುದು ಒಳಿತು.

ಕರ್ನಾಟಕದಿಂದ ಗೋವಾಕ್ಕೆ ತೆರಳುವ ಟ್ಯಾಕ್ಸಿ ಚಾಲಕರು ಗಡಿ ದಾಟಲು ವಿಶೇಷ ಪರವಾನಿಗೆ ಪಡೆಯಲೇಬೇಕು. ಹಾಗೇನಾದ್ರೂ ಪರವಾನಿಗೆ ಪಡೆಯದೇ ನುಸುಳಲು ಯತ್ನಿಸಿದ್ರೆ 10,000 ರೂಪಾಯಿ ದಂಡ ವಿಧಿಸಲಾಗುವುದು.‌

ಪರ್ಮಿಟ್‌ ಇಲ್ಲದೆ ಬಂದ್ರೆ ಟ್ಯಾಕ್ಸಿಗಳಿಗೆ 10,000, ವ್ಯಾನ್‌ಗೆ 17,000 ಮತ್ತು ಪ್ರವಾಸಿ ಬಸ್‌ಗಳಿಗೆ 25,000 ರೂಪಾಯಿ ದಂಡ ಹಾಕಲಾಗುತ್ತದೆ.

ಈ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಗೋವಾಕ್ಕೆ ತೆರಳಿ ಪ್ರವಾಸದ ಸವಿಯನ್ನು ಅನುಭವಿಸಿ.

Leave A Reply

Your email address will not be published.