ಕಪ್ಪು ಕುದುರೆ ಎಂದು ಬರೋಬ್ಬರಿ 23 ಲಕ್ಷ ಕೊಟ್ಟು ಖರೀದಿ ಮಾಡಿದವನಿಗೆ ಮಹಾ ಮೋಸ | ಕುದುರೆಗೆ ಸ್ನಾನ ಮಾಡುವಾಗ ತಿಳಿಯಿತು ಅದರ ನಿಜ ಬಣ್ಣ ಯಾವುದೆಂದು!

ಕುದುರೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರೂ ಇಷ್ಟಪಡುವ ಕುದುರೆ, ಅದರ ಬಣ್ಣ ಹಾಗೂ ಸ್ಪೀಡ್ ಗೆ ಫೇಮಸ್. ಇವುಗಳ ಬಣ್ಣದ ಆಧಾರದಲ್ಲೇ ಕೊಂಡುಕೊಳ್ಳುವವರಿಗೆ ದರ ನಿಗದಿಪಡಿಸಲಾಗುತ್ತದೆ. ಕಪ್ಪು ಕುದುರೆಯ ವಿಷಯಕ್ಕೆ ಬಂದರೆ ಈ ಬಣ್ಣದ ಕುದುರೆಗೆ ಸ್ವಲ್ಪ ದರ ಹೆಚ್ಚೇ ಎನ್ನಬಹುದು. ಈ ಕಪ್ಪು ಬಣ್ಣದ ಕುದುರೆ ಖರೀದಿ ಮಾಡಲು ಹೋಗಿ ಓರ್ವ ಫಜೀತಿಗೆ ಸಿಲುಕಿದ ಘಟನೆಯೊಂದು ನಡೆದಿದೆ.

ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರು ಕಪ್ಪು ಕುದುರೆಯನ್ನು 23 ಲಕ್ಷ ರೂ.ಗೆ ಖರೀದಿಸಿದ ನಂತರ ಅದರ ನಿಜವಾದ ಬಣ್ಣ ಕಂಡು ಬೆಚ್ಚಿಬಿದ್ದಿರೋ ಘಟನೆ ನಡೆದಿದೆ. ಕುದುರೆಗಳಲ್ಲಿ ಕಪ್ಪು ಬಣ್ಣವು ಅಸಾಮಾನ್ಯ ಬಣ್ಣವಾಗಿದೆ.

ಕಪ್ಪು ಬಣ್ಣದ ಕುದುರೆಗಳು ಇತರ ಬಣ್ಣಗಳ ಕುದುರೆಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆಯನ್ನು ಪಡೆಯುತ್ತವೆ. ಇದೀಗ ಸಂಗ್ರೂರ್ ಜಿಲ್ಲೆಯ ಸುನಮ್ ನಗರದ ರಮೇಶ್ ಕುಮಾರ್, ಕುದುರೆ ವ್ಯಾಪಾರಿಗಳ ಗುಂಪೊಂದು ತನ್ನನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ.

ವ್ಯಾಪಾರಿಗಳಿಂದ ಖರೀದಿಸಿದ ಕುದುರೆಯನ್ನು ಮನೆಗೆ ಕರೆತಂದ ಕುಮಾರ್, ಅದಕ್ಕೆ ಸ್ನಾನ ಮಾಡಿಸಿದ್ದಾರೆ. ಈ ವೇಳೆ ಅದರ ಮೇಲಿದ್ದ ಕಪ್ಪು ಬಣ್ಣ ಹೋಗಿ ಅದರ ನೈಜ ಬಣ್ಣವಾದ ಕೆಂಪು ಬಣ್ಣದ ಕುದುರೆ ನೋಡಿ ಆಘಾತಕ್ಕೊಳಗಾಗಿದ್ದಾನೆ.

ಈ ಸಂಬಂಧ ಕುಮಾರ್ ಪೊಲೀಸರಿಗೆ ದೂರು ನೀಡಿದ್ದ. ಇದೀಗ ಮೂವರು ಆರೋಪಿಗಳ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.