ಇನ್ನು ಮುಂದೆ ಈ ಫೋನ್ ಗಳಲ್ಲಿ ರವಾನೆಯಾಗುವ ಅಶ್ಲೀಲ ಫೋಟೋಗಳು ಆಗಲಿವೆ ಬ್ಲರ್ !!

ತನ್ನ ಉತ್ಕೃಷ್ಟ ಸಾಧನಗಳ ಮೂಲಕ ಹೆಸರುವಾಸಿಯಾಗಿರುವ ಮೊಬೈಲ್ ಫೋನ್ ತಯಾರಿಕಾ ಕಂಪನಿ ಎಂದರೆ ಅದು ಆಪಲ್. ಹೊಸ ಹೊಸ ಫೀಚರ್ ಗಳನ್ನು ಹೊರತರುತ್ತಿರುವ ಆಪಲ್ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ರವಾನೆಯಾಗುವ ಅಶ್ಲೀಲ ಫೋಟೋಗಳನ್ನು ಬ್ಲರ್ ಮಾಡುವಂತಹ ಫೀಚರ್ ಅನ್ನು ಆಪಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೊರ ತಂದಿತ್ತು. ಆದರೆ ಇದೀಗ ಅಮೆರಿಕದಲ್ಲಿ ಮೊದಲಿಗೆ ಬಿಡುಗಡೆಯಾದ ಆ ಫೀಚರ್ ಅನ್ನು ಆಪಲ್ ಶೀಘ್ರವೇ ಜಾಗತಿಕ ಬಳಕೆದಾರರಿಗೂ ಲಭ್ಯವಾಗಿಸಲಿದೆ.

ಈ ಫೀಚರ್ ಮೆಸೇಜಿಂಗ್ ಆಪ್‌ಗಳಲ್ಲಿ ರವಾನೆಯಾಗುವ ಅಶ್ಲೀಲ ಅಥವಾ ಆಘಾತಕಾರಿ ಫೋಟೋಗಳನ್ನು ನೇರವಾಗಿ ತೋರಿಸುವ ಬದಲು ಬ್ಲರ್ ಆಗಿ ತೋರಿಸಲಿದೆ. ಈ ಫೀಚರ್‌ನಲ್ಲಿ ಬ್ಲರ್ ಆಗಿರುವ ಫೊಟೋವನ್ನು ತೆರೆಯುವುದಕ್ಕೂ ಮೊದಲು ಅನುಮತಿ ಕೇಳಲಿದೆ.

ಇದು ಆಪ್ಟ್-ಇನ್ ಫೀಚರ್ ಆಗಿದ್ದು, ಅಶ್ಲೀಲ ಚಿತ್ರಗಳು ಪರದೆಯಲ್ಲಿ ಗೋಚರಿಸುವುದನ್ನು ತಡೆಯಲು ಬಳಸಬಹುದು. ಈ ಫೀಚರ್ ಮುಖ್ಯವಾಗಿ ಮಕ್ಕಳು ಫೋನ್ ಬಳಸುವಾಗ ಉಪಯುಕ್ತವಾಗಲಿದೆ. ಫೋಷಕರು ತಮ್ಮ ಮಕ್ಕಳ ಕೈಗೆ ಫೋನ್ ಕೊಡುವುದಕ್ಕೂ ಮೊದಲು ಈ ಫೀಚರ್ ಅನ್ನು ಸಕ್ರಿಯಗೊಳಿಸಬಹುದು.

ದಿಸ್ ಫೋಟೋ ಕುಡ್ ಬೀ ಸೆನ್ಸಿಟಿವ್. ಆರ್ ಯು ಶುವರ್ ಯು ವಾಂಟು ವೀವ್(ಈ ಫೋಟೋ ಸೂಕ್ಷ್ಮವಾಗಿರಬಹುದು. ಆದರೂ ಇದನ್ನು ನೀವು ನೋಡಲು ಬಯಸುತ್ತೀರಾ) ಎಂಬ ಎಚ್ಚರಿಕೆಯನ್ನು ಫೀಚರ್ ನೀಡಲಿದೆ. ಈ ಸಂದೇಶವನ್ನು ಅನುಸರಿಸಿ ಆಪಲ್ ಅಶ್ಲೀಲ ಫೋಟೋ ಅರ್ಥವನ್ನು ಹಾಗೂ ಅದನ್ನು ಮಕ್ಕಳು ನೋಡುವುದು ಏಕೆ ಸೂಕ್ತವಲ್ಲ ಎಂಬುದನ್ನು ವಿವರಿಸಿದೆ. ಜೊತೆಗೆ ನಾಟ್ ನೌವ್(ಈಗ ಬೇಡ) ಐ ಆಮ್ ಶುವರ್(ಖಂಡಿತಾ ಬೇಕು) ಎಂಬ ಆಯ್ಕೆಯನ್ನು ನೀಡುತ್ತದೆ.

ಆಪಲ್ ಇದೊಂದು ಕೇವಲ ಎಚ್ಚರಿಕಾ ಸಂದೇಶವಾಗಿ ಫೀಚರ್ ಅನ್ನು ತಂದಿದೆ. ಮಕ್ಕಳು ಐ ಆಮ್ ಶುವರ್ ಆಪ್ಶನ್ ಆಯ್ಕೆ ಮಾಡುವ ಮೂಲಕ ಫೊಟೋ ವೀಕ್ಷಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಪೋಷಕರು ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವುದರ ಬಗ್ಗೆ ಆದಷ್ಟು ಗಮನಹರಿಸುವುದು ಅಗತ್ಯ. ಆಪಲ್‌ನ ಈ ಫೀಚರ್ ಸದ್ಯ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಲಭ್ಯವಿದೆ. ಶೀಘ್ರವೇ ಎಲ್ಲಾ ದೇಶಗಳಲ್ಲೂ ಈ ಫೀಚರ್ ಲಭ್ಯವಾಗಲಿದೆ ಎಂದು ಆಪಲ್ ತಿಳಿಸಿದೆ.

Leave A Reply

Your email address will not be published.