ಗಮನಿಸಿ : 2022-23ನೇ ಸಾಲಿನ ‘ಶೈಕ್ಷಣಿಕ ವೇಳಾಪಟ್ಟಿ’ ಬಿಡುಗಡೆ: ಮೇ.14ರಿಂದ ಶಾಲೆ ಪ್ರಾರಂಭ, ಅಕ್ಟೋಬರ್ 3ರಿಂದ 16 ದಸರಾ ರಜೆ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಕಳೆದ ಮೂರು ವರ್ಷಗಳಲ್ಲಿನ ಕಲಿಕಾ ಕೊರತೆಯನ್ನು ಸರಿದೂಗಿಸೋ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

2022-23ನೇ ಶೈಕ್ಷಣಿಕ ವೇಳಾಪಟ್ಟಿಯಂತೆ ದಿನಾಂಕ 14 05-2022ರಿಂದ ಶಾಲೆ ಪ್ರಾರಂಭ ಮತ್ತು ಪ್ರಾರಂಭೋತ್ಸವದ ಪೂರ್ವ ಸಿದ್ಧತೆ ಆರಂಭಗೊಳ್ಳಲಿದೆ. ದಿನಾಂಕ 16-05 2022ರಿಂದ ಶಾಲಾ ಪ್ರಾರಂಭೋತ್ಸವ ಶುರುವಾಗಲಿದೆ. ಅಲ್ಲದೇ ದಿನಾಂಕ 03-10-2022 ರಿಂದ ದಿನಾಂಕ 16-10 2022ರವರೆಗೆ ದಸರಾ ರಜೆಯನ್ನು ಘೋಷಿಸಲಾಗಿದೆ.

Leave A Reply

Your email address will not be published.