ಮೆಟ್ರೋ ಕಾಮಗಾರಿಗೆ 1342 ಮರಗಳನ್ನು ಕತ್ತರಿಸಲು ಹೈಕೋರ್ಟ್ ಅಸ್ತು!!!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಒಟ್ಟು 1,342 ಮರಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಅನುಮತಿ ನೀಡಿದೆ.

ಮೆಟ್ರೋ ಕಾಮಗಾರಿಗಾಗಿ ನಗರದಲ್ಲಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ ಟಿ.ದತ್ತಾತ್ರೇಯ ದೇವರೆ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.


Ad Widget

Ad Widget

Ad Widget

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಮತ್ತು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಗೆ 4,400 ಮರಗಳು ಬಲಿಯಾಗಲಿವೆ ಅಥವಾ ಎತ್ತಂಗಡಿ ಆಗಲಿವೆ ಎಂದು ಮೆಟ್ರೋ ನಿಗಮ ಅಂದಾಜಿಸಿತ್ತು. ಅದರಂತೆ ಮೆಟ್ರೋ ಕಾಮಗಾರಿಯ ಫೇಸ್-2 ಬಿ (ಕೆ.ಆರ್.ಪುರದಿಂದ ದೇವನಹಳ್ಳಿ ವಿಮಾನ ನಿಲ್ದಾಣ)ನಲ್ಲಿ ಬರುವ ಹೊರ ವರ್ತುಲ ರಸ್ತೆಯ ಕಸ್ತೂರಿ ನಗರ ಮತ್ತು ಕೆಂಪಾಪುರ ನಡುವಿನ 10 ಕಿ.ಮೀ. ಅಂತರದಲ್ಲಿ 1,507 ಮರಗಳನ್ನು ಕತ್ತರಿಸಲು ಮೆಟ್ರೋ ನಿಗಮ ಸಿದ್ಧತೆ ನಡೆಸಿತ್ತು. ಆದರೆ ಈಗ 1,334 ಮರಗಳನ್ನು ಕತ್ತರಿಸಲು ಅನುಮತಿ ಸಿಕ್ಕಿದೆ.

Leave a Reply

error: Content is protected !!
Scroll to Top
%d bloggers like this: