Day: April 21, 2022

ರಾಜಕೀಯದಲ್ಲಿ ಸೋಲಿಲ್ಲದ ಸರದಾರರು ಸಾಕು,ಯುವಕರು ರಾಜಕೀಯಕ್ಕೆ ಬರಬೇಕು-ಭಾಸ್ಕರ ರಾವ್

ಬೆಂಗಳೂರು : ಸೋಲಿಲ್ಲದ ಸರದಾರರು ಅನ್ನಿಸಿಕೊಂಡವರು ಇನ್ನು ಸಾಕು,ಯುವಕರು, ಶಿಕ್ಷಿತರು ರಾಜಕೀಯಕ್ಕೆ ಬರಬೇಕುಎಂದು ಮಾಜಿ ಪೊಲೀಸ್ ಆಯುಕ್ತ, ಆಪ್ ಮುಖಂಡ ಭಾಸ್ಕರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆದ ಆಮ್ ಆದ್ಮಿ‌ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸೋಲಿಲ್ಲದ ಸರದಾರರು ಹಲವು ಭಾರಿ ಗೆದ್ದು ಬರುತ್ತಾರೆ. ಗೆದ್ದವರೆಲ್ಲರೂ ಭ್ರಷ್ಟಾಚಾರದಲ್ಲೇ ಮುಳುಗಿದ್ದಾರೆ.ಡಾಲರ್ಸ್ ಕಾಲೋನಿಯಲ್ಲಿ ದೊಡ್ಡ ದೊಡ್ಡ ಬಂಗಲೆಗಳನ್ನ ಕಟ್ಟಿಸಿಕೊಂಡಿದ್ದಾರೆ ಎಂದರು. ಉತ್ತರ ಕರ್ನಾಟಕ ಭಾಗದ ಸೋಲಿಲ್ಲದ ಸರದಾರರ ಕ್ಷೇತ್ರಗಳನ್ನ ನೋಡಿ,ಅಲ್ಲಿ ಜನರ ಸಮಸ್ಯೆ ಕೇಳೋರೆ …

ರಾಜಕೀಯದಲ್ಲಿ ಸೋಲಿಲ್ಲದ ಸರದಾರರು ಸಾಕು,ಯುವಕರು ರಾಜಕೀಯಕ್ಕೆ ಬರಬೇಕು-ಭಾಸ್ಕರ ರಾವ್ Read More »

ಮಸೀದಿಯಲ್ಲಿ ಪ್ರಾರ್ಥನೆಗೆ ಕುಳಿತುಕೊಂಡಾಗ ಉಗ್ರರಿಂದ ಬಾಂಬ್ ಸ್ಫೋಟ ; 20 ಕ್ಕಿಂತಲೂ ಹೆಚ್ಚು ಮಂದಿ ಸಾವು, 65 ಮಂದಿ ಗಾಯ

ಉಗ್ರರು ಮಸೀದಿಗೆ ಬಾಂಬ್ ಸ್ಫೋಟ ನಡೆಸಿದ ಘಟನೆಯೊಂದು ಗುರುವಾರ ( ಇಂದು) ನಡೆದಿದೆ. ಈ ಬಾಂಬ್ ಸ್ಫೋಟದಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 65 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಮಝಾರ್ ಈ ಷರೀಫ್ ಮಸೀದಿ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ. ಉತ್ತರ ಅಫ್ಘಾನ್ ನಗರದ ಶಿಯಾ ಪಂಗಡದ ಮಝಾರ್ ಇ ಷರೀಪ್ ಮಸೀದಿ ಮೇಲೆ ಬಾಂಬ್ ದಾಳಿ ನಡೆದಿದೆ. ಸ್ಫೋಟದಲ್ಲಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬುದಾಗಿ ತಾಲಿಬಾನ್ ಕಮಾಂಡರ್ ನ ವಕ್ತಾರ ಮೊಹಮ್ಮದ್ …

ಮಸೀದಿಯಲ್ಲಿ ಪ್ರಾರ್ಥನೆಗೆ ಕುಳಿತುಕೊಂಡಾಗ ಉಗ್ರರಿಂದ ಬಾಂಬ್ ಸ್ಫೋಟ ; 20 ಕ್ಕಿಂತಲೂ ಹೆಚ್ಚು ಮಂದಿ ಸಾವು, 65 ಮಂದಿ ಗಾಯ Read More »

‘ನಾನು ಎಲ್ಲರಂತೆ ಡಾಕ್ಟರ್ ಅಥವಾ ಇಂಜನಿಯರ್ ಆಗಲು ಆಗಲಿಲ್ಲ ಸಾರಿ ಮಗಳೇ’ ಎಂದ ಆಟೋ ಡ್ರೈವರ್ !|ಮಗಳ ಉತ್ತರಕ್ಕೆ ಭಾವುಕವಾದ ಇಂಟರ್ನೆಟ್

ಆತ ಹೆಣ್ಣು ಮಗಳೊಬ್ಬಳ ಅಪ್ಪ. ಮಗಳು ಓದಿದಳು, ಬಹುಶಃ ಕೆಲಸಕ್ಕೂ ಸೇರಿ ಒಳ್ಲೆಯ ಪೊಸಿಷನ್ ಗೆ ಹೋಗಿರಬಹುದು.  ಸನ್ನಿವೇಶ ಓದಿದರೆ ಹಾಗನ್ನಿಸುತ್ತದೆ. ಅಂತಹ ಒಂದು ಸಂಜೆ ಮಗಳನ್ನು ಕರೆದು ಅಪ್ಪ ಹೇಳ್ತಾನೆ, ಕೀಳರಿಮೆಯಿಂದಲೇ, ಮತ್ತು ಮಗಳನ್ನು ಯಾವತ್ತೂ ನೋಯಿಸಬಾರದು ಎಂಬ ಕಾಳಜಿಯಿಂದ !!“ನಾನು ಎಲ್ಲ ಪೋಷಕರಂತೆ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿಲ್ಲ, ಸಾರಿ ಮಗಳೇ; ನಿನ್ನಪ್ಪ ಟ್ಯಾಕ್ಸಿ ಡ್ರೈವರ್ ಅಂತ ನೀನು ಯಾರಿಗೂ ಹೇಳಬೇಕಾಗಿಲ್ಲ ” ಎಂದು ಅದೊಂದು ಬಾರಿ ಆ ಹೆಣ್ಣು ಮಗಳ ಅಪ್ಪ ಹೇಳ್ತಾನೆ. …

‘ನಾನು ಎಲ್ಲರಂತೆ ಡಾಕ್ಟರ್ ಅಥವಾ ಇಂಜನಿಯರ್ ಆಗಲು ಆಗಲಿಲ್ಲ ಸಾರಿ ಮಗಳೇ’ ಎಂದ ಆಟೋ ಡ್ರೈವರ್ !|ಮಗಳ ಉತ್ತರಕ್ಕೆ ಭಾವುಕವಾದ ಇಂಟರ್ನೆಟ್ Read More »

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ : ಹಿಜಾಬ್ ಬೇಕೆಂದು ಹೋರಾಟ ಮಾಡಿದ ನಾಲ್ವರು ವಿದ್ಯಾರ್ಥಿಗಳು ಹಾಲ್ ಟಿಕೇಟ್ ಪಡೆದಿಲ್ಲ

ಕರ್ನಾಟಕ ಹೈಕೋರ್ಟ್ ಆದೇಶ ದಂತೆ ಪರೀಕ್ಷೆ ಬರೆಯಲು ಶಾಲಾ ಸಮವಸ್ತ್ರ ಹೊರತು ಪಡಿಸಿ ಯಾವುದೇ ಇತರ ವಸ್ತ್ರ ಧರಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ನಾಳೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿಯಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಸೃಷ್ಟಿಗೆ ಕಾರಣರಾದ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರಾ ಎಂದು ಕಾದು‌ನೋಡಬೇಕಿದೆ. ಯಾಕೆಂದರೆ ಆ 4 ಮಂದಿ ವಿದ್ಯಾರ್ಥಿನಿಯರು ಇದುವರೆಗೂ ಅವರು ಹಾಲ್​ ಟಿಕೆಟ್​ ತೆಗೆದುಕೊಂಡಿಲ್ಲ. ಹಿಜಾಬ್ ಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ ಆ ಆರು ವಿದ್ಯಾರ್ಥಿ ಹೋರಾಟಗಾರ್ತಿಯರು ಪರೀಕ್ಷೆ …

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ : ಹಿಜಾಬ್ ಬೇಕೆಂದು ಹೋರಾಟ ಮಾಡಿದ ನಾಲ್ವರು ವಿದ್ಯಾರ್ಥಿಗಳು ಹಾಲ್ ಟಿಕೇಟ್ ಪಡೆದಿಲ್ಲ Read More »

ಕೊನೆಗೂ ಪತ್ತೆಯಾಯಿತು ಕೊರೋನಾ ವೈರಸ್ ನ ಮೂಲ !! | ಈ ಪ್ರಾಣಿಗೆ ಹೋಲುವ ಜೀವಿಯಲ್ಲಿತ್ತಂತೆ ವೈರಸ್

ಇಡೀ ಜಗತ್ತನ್ನೇ ಭಯಭೀತಗೊಳಿಸಿದ ಕೊರೋನಾ ವೈರಸ್ ನ ಕುರಿತು ಯಾವುದೇ ಮಾಹಿತಿ ಇದುವರೆಗೂ ಪತ್ತೆಯಾಗಿರಲಿಲ್ಲ.ಈ ವೈರಸ್ ಎಲ್ಲಿಂದ ಬಂದಿದೆ? ಹೇಗೆ ಇದೆ? ಎಂಬ ಸುಳಿವೇ ಇಲ್ಲದೆ ಜನರೆಲ್ಲರೂ ತನ್ನ ಪ್ರಾಣ ರಕ್ಷಣೆಗಾಗಿ ಅದೆಷ್ಟೋ ಸರ್ಕಾರ ಜಾರಿಗೊಳಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ.ಆದರೆ ಇದೀಗ ಜನರ ಜೀವನದಲ್ಲಿ ಚೆಲ್ಲಾಟವಾಡಿದ ಆ ಒಂದು ಕೊರೋನ ವೈರಸ್ ನ ಕುರಿತು ಸತತ ಎರಡು ವರ್ಷಗಳ ಬಳಿಕ ಮಾಹಿತಿ ಬಹಿರಂಗವಾಗಿದೆ. ಈ ಮೊದಲು ನಾಲ್ವರು ಅಮೆರಿಕನ್ನರಿಗೆ ಮೊದಲ ಬಾರಿಗೆ ಪ್ರಾಣಿಯಿಂದ ಕೊರೋನಾ ಸೋಂಕು …

ಕೊನೆಗೂ ಪತ್ತೆಯಾಯಿತು ಕೊರೋನಾ ವೈರಸ್ ನ ಮೂಲ !! | ಈ ಪ್ರಾಣಿಗೆ ಹೋಲುವ ಜೀವಿಯಲ್ಲಿತ್ತಂತೆ ವೈರಸ್ Read More »

ಪದವಿ ಮುಗಿಸಿ ಎರಡು ವರ್ಷ ಕೆಲಸಕ್ಕಾಗಿ ಅಲೆದರೂ ಸಿಗಲಿಲ್ಲ ಉದ್ಯೋಗ | ಹಾಗಂತ ಸುಮ್ಮನೆ ಕೂರದೆ ಚಾಯ್‍ವಾಲಿಯಾಗಿ ದೇಶದ ಗಮನ ಸೆಳೆದ ಅರ್ಥಶಾಸ್ತ್ರ ಪದವೀಧರೆ !!

ಭಾರತದಲ್ಲಿ ಈಗಲೂ ಅದೆಷ್ಟೋ ಮಂದಿ ನಿರುದ್ಯೋಗಿಗಳಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ತಮ್ಮ ಓದಿಗೆ ಸರಿಯಾದ ಕೆಲಸ ಸಿಗದೆ ಪ್ರತಿದಿನ ನೋವಿನಲ್ಲೇ ಜೀವನ ಸಾಗಿಸುವವರ ನಡುವೆ ಇಲ್ಲೊಬ್ಬಳು ಸುಮ್ಮನೆ ಮನೆಯಲ್ಲಿ ಕೂರದೆ ಚಹಾದ ಅಂಗಡಿ ತೆರೆದು ಸಮಾಜಕ್ಕೆ ಮಾದರಿಯಾಗಿದ್ದಾಳೆ. ಎರಡು ವರ್ಷ ಎಷ್ಟೇ ಅಲೆದಾಡಿದರೂ ಕೆಲಸ ಸಿಗದ ಕಾರಣ ಅರ್ಥಶಾಸ್ತ್ರ ಪದವೀಧರೆಯಾದ ಈಕೆ ಟೀ ಸ್ಟಾಲ್ ಸ್ಟಾಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಪಟ್ನಾದ ಮಹಿಳಾ ಕಾಲೇಜು ಬಳಿ ಬಿಹಾರದ ಪ್ರಿಯಾಂಕಾ ಗುಪ್ತಾ ಈ ಸಾಹಸಕ್ಕೆ ಕೈಹಾಕಿದ ಯುವತಿ. 2019ರಲ್ಲಿ ಅರ್ಥಶಾಸ್ತ್ರ …

ಪದವಿ ಮುಗಿಸಿ ಎರಡು ವರ್ಷ ಕೆಲಸಕ್ಕಾಗಿ ಅಲೆದರೂ ಸಿಗಲಿಲ್ಲ ಉದ್ಯೋಗ | ಹಾಗಂತ ಸುಮ್ಮನೆ ಕೂರದೆ ಚಾಯ್‍ವಾಲಿಯಾಗಿ ದೇಶದ ಗಮನ ಸೆಳೆದ ಅರ್ಥಶಾಸ್ತ್ರ ಪದವೀಧರೆ !! Read More »

ಮುದ್ದಾದ ಬೆಕ್ಕು ತಯಾರಿಸಿತು ಮಣ್ಣಿನ ಮಡಿಕೆ!!

ಪ್ರಾಣಿಗಳಲ್ಲಿ, ನಾಯಿಗಳು ಮತ್ತು ಬೆಕ್ಕುಗಳು ಮನುಷ್ಯರಿಗೆ ಅತ್ಯಂತ ಪ್ರಿಯವಾಗಿವೆ. ಒಂದೆಡೆ, ನಾಯಿ ನಿಷ್ಠಾವಂತ ಪ್ರಾಣಿಯಾಗಿದ್ದರೆ, ಇನ್ನೊಂದೆಡೆ ಬೆಕ್ಕು ಜನರಿಗೆ ತುಂಬಾ ಮುದ್ದಿನ ಪ್ರಾಣಿಯಾಗಿದೆ. ಮನೆಯಲ್ಲಿ ಇಲಿಗಳ ಕಾಟ ತಪ್ಪಿಸಲು ಜನರು ಬೆಕ್ಕುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಒಂದು ರೀತಿಯಲ್ಲಿ ಬೆಕ್ಕು ಕೂಡ ಮನುಷ್ಯರ ಸ್ನೇಹಿತ ಪ್ರಾಣಿ ಎಂದರೆ ತಪ್ಪಾಗಲಾರದು. ಅಂತೆಯೇ ಇಲ್ಲೊಂದು ಮನೆಯಲ್ಲಿ ಸಾಕಿದ ಬೆಕ್ಕು ಮಣ್ಣಿನ ಮಡಕೆಯನ್ನು ತಯಾರಿಸಬೇಕೇ ?! ಇದನ್ನು ನೋಡಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರಿ. ಇತ್ತೀಚಿನ ದಿನಗಳಲ್ಲಿ ಇಂತಹ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ …

ಮುದ್ದಾದ ಬೆಕ್ಕು ತಯಾರಿಸಿತು ಮಣ್ಣಿನ ಮಡಿಕೆ!! Read More »

SSLC ವಿದ್ಯಾರ್ಥಿಗಳಿಂದ ಗುಂಡು ತುಂಡಿನ ವಿದಾಯ ಪಾರ್ಟಿ ; ಫೋಟೋ ವೈರಲ್, ತನಿಖೆ ಆರಂಭ

ಎಸ್ ಎಸ್ ಎಲ್ ಸಿ ವಿದಾಯ ಪಾರ್ಟಿಯಲ್ಲಿ ವಿದ್ಯಾರ್ಥಿಗಳು ಗುಂಡು ತುಂಡಿನ ಪಾರ್ಟಿ ಮಾಡಿರುವ ಘಟನೆಯೊಂದು ನಡೆದಿದೆ. ಮಂಚೇರಿಯಲ್ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕುಡಿತದ ಚಿತ್ರ ವೈರಲ್ ಆಗಿವೆ. ದಾಂಡೇಪಲ್ಲಿಯಲ್ಲಿರುವ ಬಾಲಕರ ವಸತಿ ಶಾಲೆಯಲ್ಲಿ ಈ ಘಟನೆ ವರದಿಯಾಗಿದ್ದು, ವಿದಾಯದ ಪಾರ್ಟಿಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳು ಬಿಯರ್ ಸೇವಿಸುತ್ತಿರುವ ಫೋಟೋ ತೆಗೆಸಿಕೊಂಡಿದ್ದು, ಇದೀಗ ಅದು ವೈರಲ್ ಆಗಿದೆ. ಅಭಿವೃದ್ಧಿ ಅಧಿಕಾರಿ ಭಗವತಿ ಅವರ ಪ್ರಕಾರ, ‘ವಿದ್ಯಾರ್ಥಿಗಳು ತಮ್ಮ ಬೇಸಿಗೆ ರಜೆ ಪ್ರಾರಂಭವಾಗುವ …

SSLC ವಿದ್ಯಾರ್ಥಿಗಳಿಂದ ಗುಂಡು ತುಂಡಿನ ವಿದಾಯ ಪಾರ್ಟಿ ; ಫೋಟೋ ವೈರಲ್, ತನಿಖೆ ಆರಂಭ Read More »

ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ !! | ವೃದ್ಧ ಸಾವು, ನಾಲ್ವರಿಗೆ ಗಂಭೀರ ಗಾಯ

ಮನೆಯಲ್ಲಿ ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧ ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡ ಘಟನೆ ತೆಲಂಗಾಣದ ನಿಜಾಮಾಬಾದ್‍ನಲ್ಲಿ ನಡೆದಿದೆ. ಬಿ ರಾಮಸ್ವಾಮಿ (80) ಮೃತ ವ್ಯಕ್ತಿ. ಟೈಲರ್ ಆಗಿರುವ ಅವರ ಮಗ ಬಿ ಪ್ರಕಾಶ್ ಒಂದು ವರ್ಷದಿಂದ ಇವಿ ಸ್ಕೂಟರ್ ಬಳಸುತ್ತಿದ್ದರು. ರಾತ್ರಿ ವೇಳೆ ಸ್ಕೂಟರ್ ಸ್ಪೋಟಗೊಂಡಿದೆ. ತ್ರೀ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹೇಳಿಕೆ ಪ್ರಕಾರ, ಪ್ರಕಾಶ್ ಅವರು 12:30 ರ ಸುಮಾರಿಗೆ ಸ್ಕೂಟರ್‌ನಿಂದ ಬ್ಯಾಟರಿಯನ್ನು ತೆಗೆದು …

ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ !! | ವೃದ್ಧ ಸಾವು, ನಾಲ್ವರಿಗೆ ಗಂಭೀರ ಗಾಯ Read More »

ಮಂಗಳೂರು : ದರ್ಗಾ ಕೆಡವಿದಾಗ, ದೇವಸ್ಥಾನದ ಗುಡಿ ಪತ್ತೆ!!!

ಮಂಗಳೂರು: ನವೀಕರಣ ಮಾಡುವುದಕ್ಕಾಗಿ ದರ್ಗಾವೊಂದನ್ನು ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನದ ಗುಡಿಯೊಂದು ಪತ್ತೆಯಾಗಿದೆ. ಈ ಘಟನೆ ಕಂಡುಬಂದಿರುವುದು ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ. ಗುಡಿ ಪತ್ತೆಯಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದು, ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ್ ಮುಂದಾಗಿದ್ದಾರೆ. ಸದ್ಯ ದರ್ಗಾದ ನವೀಕರಣ …

ಮಂಗಳೂರು : ದರ್ಗಾ ಕೆಡವಿದಾಗ, ದೇವಸ್ಥಾನದ ಗುಡಿ ಪತ್ತೆ!!! Read More »

error: Content is protected !!
Scroll to Top