ಗೋವಾ ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ ಪ್ರವಾಸಿಗರಿಗೆ ಕಾದಿತ್ತು ಶಾಕ್| ಯಾಕೆ ಗೊತ್ತಾ!?

ರಜಾ ದಿನಗಳಲ್ಲಿ ಮೋಜು-ಮಸ್ತಿಗಾಗಿ ಪ್ರವಾಸ ತೆರಳೋದು ಸಾಮಾನ್ಯ. ಅದರಲ್ಲೂ ಇತ್ತೀಚೆಗೆ ಗೋವಾ ಟ್ರಿಪ್ ಕೈಗೊಳ್ಳುವವರ ಸಂಖ್ಯೆ ಹೆಚ್ಚೇ ಇದೆ.ಆದ್ರೆ ಈ ಬಾರಿ ಗೋವಾ ಪ್ರವಾಸ ತೆರಳಿದ ಕರ್ನಾಟಕದ ಪ್ರವಾಸಿಗರಿಗೆ ಚೆಕ್ ಪೋಸ್ಟ್ ನಲ್ಲಿ ಕಾದಿತ್ತು ಶಾಕ್!

ಹೌದು.ಅದೆಷ್ಟೋ ಜನ ಪ್ರವಾಸಕ್ಕೆಂದು ತೆರಳಿ ವಾಪಸಾಗಿದ್ದಾರೆ.ಯಾಕೆಂದರೆ ಕರ್ನಾಟಕದ ಪ್ರವಾಸಿಗರು ಕಳೆದ ವಾರ ಗಡಿ ದಾಟೋದಕ್ಕೆ 10,262 ರೂ.ಪಾವತಿಸುವಂತಾಗಿತ್ತು.ಅಷ್ಟಕ್ಕೂ ಯಾಕಿಷ್ಟು ದೊಡ್ಡ ಮೊತ್ತದ ದಂಡ ಎಂಬ ಪ್ರಶ್ನೆ ಕಾಡುವವರಿಗೆ ಇಲ್ಲಿದೆ ಉತ್ತರ.

ಕಳೆದ ವಾರ ಗುರುವಾರದಿಂದ ನಾಲ್ಕು ದಿನ ರಜೆ ಇದ್ದ ಕಾರಣ ಕರ್ನಾಟಕದ ಗಡಿ ಜಿಲ್ಲೆಗಳ ಜನರು ರಜಾದಿನ ಕಳೆಯಲು ಗೋವಾದತ್ತ ಹೊರಟಿದ್ದರು.ಈ ವೇಳೆ ಗುರುವಾರದಿಂದ ಶನಿವಾರದವರೆಗೆ ಗೋವಾದ ಮೊಲ್ಲೆಮ್ ಚೆಕ್ ಪೋಸ್ಟ್ ನಲ್ಲಿ ಕರ್ನಾಟಕದ 40 ಟ್ಯಾಕ್ಸಿಗಳನ್ನು ತಡೆ ಹಿಡಿಯಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಉಪಾಧ್ಯಕ್ಷ ಎಂ ರವಿ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಗೋವಾ ಪ್ರವೇಶಿಸಲು ವಿಶೇಷ ಪರವಾನಗಿ ಪಡೆಯಬೇಕು. ಇದಕ್ಕೆ 100 ರೂ.ಗಳಿಂದ 200 ರೂ. ವೆಚ್ಚವಾಗುತ್ತದೆ. ಈ ಹಣವನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ RTO ಮತ್ತು ರಾಜ್ಯದ ಇತರೆ ಭಾಗಗಳಲ್ಲಿರುವ RTO ಕಚೇರಿಯಲ್ಲಿ ಪಾವತಿಸಬೇಕು.ಆದ್ರೆ ಗುರುವಾರದಿಂದ ನಾಲ್ಕು ದಿನ ರಜೆ ಹಿನ್ನೆಲೆ RTO ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆನ್ ಲೈನ್ ನಲ್ಲಿಯೂ ವಿಶೇಷ ಪರವಾನಿಗೆ ಪಡೆಯುವ ವ್ಯವಸ್ಥೆಯೂ ಇಲ್ಲ.ಹೀಗಾಗಿ ಟ್ಯಾಕ್ಸಿ ಚಾಲಕರು ವಿಶೇಷ ಪರವಾನಿಗೆ ಪಡೆಯಲು ಸಾಧ್ಯವಾಗಿರಲಿಲ್ಲ.ಹೀಗಾಗಿ ಭಾರಿ ಮೊತ್ತದ ದಂಡ ಪವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಮೊದಲು ಚೆಕ್ ಪೋಸ್ಟ್ ಗಳಲ್ಲಿ ಪರವಾನಿಗೆ ಪಡೆಯುವ ವ್ಯವಸ್ಥೆ ಇತ್ತು. ಆದ್ರೆ ಏಪ್ರಿಲ್ 1ರಿಂದ ಈ ಸೇವೆ ಸ್ಥಗಿತಗೊಳಿಸಲಾಗಿದೆ.ನೆರೆಯ ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಆನ್ ಲೈನ್ ನಲ್ಲಿಯೇ ಪರವನಾಗಿ ಪಡೆಯುವ ವ್ಯವಸ್ಥೆ ಇದೆ. ಈ ವ್ಯವಸ್ಥೆ ನಮ್ಮಲ್ಲಿ ಜಾರಿಗೆ ಬಂದಿಲ್ಲ.ಈ ಕುರಿತು ಮಾತನಾಡಿರುವ ಸಾರಿಗೆ ಆಯುಕ್ತ ಶಿವಕುಮಾರ್ ಎನ್, ಆನ್ ಲೈನ್ ನಲ್ಲಿ ವಿಶೇಷ ಪರವಾನಿಗೆ ನೀಡಲು ಆರಂಭಿಸಲಾಗಿದೆ.ಶೀಘ್ರದಲ್ಲಿಯೇ ಚೆಕ್ ಪೋಸ್ಟ್ ಗಳಲ್ಲಿಯೂ ವಿಶೇಷ ಪರವಾನಿಗೆ ವಿತರಿಸುವ ವ್ಯವಸ್ಥೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.