ಚೀನಾ ಹಿಂದಿಕ್ಕಿದ ಭಾರತ !! | ವಿಶ್ವದಲ್ಲಿಯೇ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮುವತ್ತ ದಾಪುಗಾಲು

ಭಾರತ ಮತ್ತೊಮ್ಮೆ ಬಲಿಷ್ಠ ರಾಷ್ಟ್ರ ಎಂಬುದನ್ನು ಸಾಬೀತುಪಡಿಸುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದ ಹಾಗೂ ಕೋವಿಡ್ ಪ್ರಭಾವದಿಂದ ಇಡೀ ವಿಶ್ವವೇ ನಲುಗಿ ಹೋಗಿ, ಆರ್ಥಿಕತೆ ಕುಗ್ಗುವ ಆತಂಕದಲ್ಲಿರುವಾಗಲೇ ಭಾರತದ ಆರ್ಥಿಕತೆಯಲ್ಲಿ ಭಾರೀ ಪ್ರಮಾಣದ ಚೇತರಿಕೆ ಕಂಡುಬರುತ್ತಿದೆ.

ಹೌದು, ಭಾರತ ಇದೀಗ ಚೀನಾವನ್ನೇ ಮೀರಿಸುವಷ್ಟು ವೇಗವಾಗಿ ಆರ್ಥಿಕತೆಯಲ್ಲಿ ಅಭಿವೃದ್ದಿ ಹೊಂದುತ್ತಿದೆ. 2022ನೇ ಇಸವಿಯಲ್ಲಿ ಭಾರತ ಶೇ.8.2 ರಷ್ಟು ಪ್ರಗತಿ ಕಾಣಲಿದೆ. ಇದು ಜಗತ್ತಿನಲ್ಲಿಯೇ ಅತೀ ವೇಗದ ಅಭಿವೃದ್ಧಿ ಹೊಂದಲಿರುವ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತಿಳಿಸಿದೆ.


Ad Widget

Ad Widget

Ad Widget

ಚೀನಾದ ಪ್ರಗತಿ ದರ ಶೇ.4.4 ರಷ್ಟು ಇದ್ದು, ಭಾರತ ಇದರ ದುಪ್ಪಟ್ಟು ವೇಗದಲ್ಲಿ ಅಭಿವೃದ್ದಿ ಹೊಂದುತ್ತಿದೆ. 2021ರ ಜಾಗತಿಕ ಆರ್ಥಿಕ ದರ ಶೇ.6.1 ಇದ್ದು, ಈ ವರ್ಷ ಶೇ.3.6 ಕ್ಕೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ ಎಂದು ಹೇಳಿದೆ. ಕೆಲವು ತಿಂಗಳ ಹಿಂದೆ ಐಎಂಎಫ್ 2022ರ ಭಾರತದ ಆರ್ಥಿಕತೆ ಶೇ.9.1 ಇರಲಿದೆ ಎಂದು ತಿಳಿಸಿತ್ತು. ಇದೀಗ ಐಎಂಎಫ್ ಈ ಅಂದಾಜನ್ನು ಪರಿಷ್ಕರಿಸಿ, ಶೇ.0.8 ರಷ್ಟು ಕಡಿಮೆ ಮಾಡಿದೆ. 2023ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.6.9 ಇರಲಿದೆ ಎಂದು ತಿಳಿಸಿದೆ.

Leave a Reply

error: Content is protected !!
Scroll to Top
%d bloggers like this: