ವರ ಹಾರ ಹಾಕಿದ್ದೇ ತಡ ಕಪಾಳಕ್ಕೆ ಬಾರಿಸಿದ ವಧು! ಹಾರ ಬದಲಾವಣೆಯಲ್ಲಿ ನಡೆಯಿತು ಗಲಾಟೆ!!! ವಧುವಿನ ಸಿಟ್ಟಿಗೆ ಕಾರಣ ಏನು ? ಇಲ್ಲಿದೆ ಉತ್ತರ!!!

ಮದುವೆ ಸಂಭ್ರಮ ಎಂದರೆ ಎಲ್ಲರ ಮುಖದಲ್ಲಿ ಖುಷಿಯ ಕಳೆ ಎದ್ದು ಕಾಣುತ್ತದೆ. ಅದರಲ್ಲೂ ನವ ವಧು, ವರನ ಮುಖದಲ್ಲಂತೂ ಸ್ವಲ್ಪ ಹೆಚ್ಚೇ ಎಂದು ಹೇಳಬಹುದು. ಸಂಬಂಧಿಕರು, ಫ್ರೆಂಡ್ಸ್ ಓಡಾಟ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
ಆದರೆ, ಎಲ್ಲಾ ಸಂದರ್ಭದಲ್ಲೂ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಸಲ ಮದುವೆ ಗಲಾಟೆಯಲ್ಲಿ ಮುಗಿಯುವುದು ಕೂಡಾ ಇದೆ. ಸದ್ಯ ಅಂತಹದ್ದೇ ಗಲಾಟೆ ಮದುವೆಯ ವಿಡಿಯೋ ವೈರಲ್ ಆಗಿದ್ದು, ಅದರ ಕಾರಣ ಏನೆಂದು ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ.

ಕೆಲವೊಂದು ಖುಷಿ ಕೊಡುವ ಮದುವೆ ವೀಡಿಯೋಗಳು ವೈರಲ್ ಆದರೆ, ಒಂದೊಂದು ಸಲ ದಿಗಿಲುಗೊಳಿಸುವಂತಹ ಮದುವೆಯ ವಿಡಿಯೋಗಳೂ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ.

ಇಲ್ಲೊಂದು ಕಡೆ ವಧು ವರನಿಗೆ ವೇದಿಕೆಯಲ್ಲಿಯೇ ಹೊಡೆದಿದ್ದಾಳೆ. ಜತೆಗೆ, ಸಿಟ್ಟಿನಿಂದ ವೇದಿಕೆಯಿಂದ ಹೊರ ನಡೆದಿದ್ದಾಳೆ. ಪರಸ್ಪರ ಹಾರ ಬದಲಾಯಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಈ ಕ್ಷಣಕ್ಕೆ ಸಾಕ್ಷಿಯಾಗಿದ್ದ ಅತಿಥಿಗಳು ಕೂಡಾ ಒಂದು ಕ್ಷಣ ಹೌಹಾರಿ ಹೋಗಿದ್ದರು. ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದ್ದ ಘಟನೆ.

ಪರಸ್ಪರ ಹೂಮಾಲೆ ಹಿಡಿದು ನವಜೋಡಿ ನಿಂತಿರುವ ದೃಶ್ಯದ ಮೂಲಕ ಈ ವೈರಲ್ ವಿಡಿಯೋ ಆರಂಭಗೊಳ್ಳುತ್ತದೆ. ವರ ವಧುವಿಗೆ ಹಾರ ಹಾಕುತ್ತಾನೆ. ಕೂಡಲೇ ವಧು ವರನಿಗೆ ಕಪಾಳಮೋಕ್ಷ ಮಾಡುತ್ತಾಳೆ. ಎರಡು ಬಾರಿಗೆ ಕೆನ್ನೆಗೆ ಹೊಡೆಯುವ ವಧು ಬಳಿಕ ಅಲ್ಲಿಂದ ಹೊರನಡೆಯುತ್ತಾಳೆ. ಅಲ್ಲಿ ನೆರೆದವರೆಲ್ಲಾ ಇದನ್ನು ಕಂಡು ನಿಂತಲ್ಲೇ ನಿಲ್ಲುತ್ತಾರೆ.

ವಧು ಹೀಗೆ ಕೋಪಗೊಳ್ಳಲು ಕಾರಣವೇನು ಎಂಬುದಕ್ಕೆ ನಿಖರ ಉತ್ತರ ಸಿಕ್ಕಿಲ್ಲ. ಆದರೆ, ಸಂಬಂಧಿಕರು ಹೇಳುವ ಪ್ರಕಾರ ವರ ಮದ್ಯಪಾನ ಮಾಡಿಕೊಂಡು ಬಂದಿದ್ದ. ಇದರಿಂದ ವಧು ಕೋಪಗೊಂಡಿದ್ದಾಳೆ. ಹಾಗಾಗಿ ಸಿಟ್ಟು ಹೆಚ್ಚಾಗಿ ಹಾರ ಹಾಕುವಾಗ ವಧು ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ ಎನ್ನಲಾಗಿದೆ. ಜಲೌನ್ ಜಿಲ್ಲೆಯ ಚಮರಿ ಗ್ರಾಮದಿಂದ ಹಮೀರ್‌ಪುರಕ್ಕೆ ಇವರು ದಿಬ್ಬಣದಲ್ಲಿ ಬಂದಿದ್ದರು. ವಧುವಿನ ಮನೆಯವರು ವರನ ದಿಬ್ಬಣವನ್ನು ಅತ್ಯಂತ ವೈಭವ ಮತ್ತು ಸಂತಸದಿಂದಲೇ ಸ್ವಾಗತ ಮಾಡಿದ್ದರು. ಆದರೆ, ಇದಾದ ಬಳಿಕ ಈ ಸಂಭ್ರಮ ಕಾಣಲು ಸಿಗಲಿಲ್ಲ. ಕೊನೆಗೆ ಎರಡೂ ಕುಟುಂಬಸ್ಥರು ಮಾತುಕತೆ ನಡೆಸಿ ಮದುವೆ ನಡೆದಿದೆ ಎಂದು ಗೊತ್ತಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜತೆಗೆ, ನೆಟ್ಟಿಗರು ಕೂಡಾ ಈ ಬಗ್ಗೆ ಬಗೆಬಗೆ ಅಭಿಪ್ರಾಯ
ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.