ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್ ನಲ್ಲಿ ಮತ್ತೊಂದು ಆತ್ಮಹತ್ಯೆ !

ಕೆಲವು ದಿನಗಳ ಹಿಂದಷ್ಟೇ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಇಂದು ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಂತೋಷ್‌ ಸಾವನ್ನಪ್ಪಿದ ಶಾಂಭವಿ ಲಾಡ್ಜ್ನ ಹೆಸರನ್ನು ಮಾಲಕರು ಬದಲಾಯಿಸಿದ್ದಾರೆ. ಈ ಪ್ರಕರಣದಿಂದ ಲಾಡ್ಜ್ನ ಹೆಸರಿಗೆ ಧಕ್ಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಲಾಡ್ಜ್ನ ಹೆಸರನ್ನು ಬದಲಾಯಿಸಲು ಮಾಲಕರು ನಿರ್ಧರಿಸಿದ್ದು, ಅದರಂತೆ ಹೆಸರು ಬದಲಾವಣೆ ಮಾಡಲಾಗಿದೆ. ಆದರೆ ಇದೀಗ ಮತ್ತೋರ್ವ ಯುವಕ ಆತ್ಮಹತ್ಯೆ ನಡೆದಿರುವುದು ಮಗದೊಮ್ಮೆ ಚರ್ಚೆಗೆ ಕಾರಣವಾಗಿದೆ.


Ad Widget

Ad Widget

Ad Widget

ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ರೂಂ ಅನ್ನು ಯಾರಿಗೂ ನೀಡಲಾಗಿಲ್ಲ. “ಅಲ್ಲದೇ ಹೋಟೆಲ್‌ಗೆ ಬರುವ ಕಸ್ಟಮರ್‌ಗೆ ಯಾವುದೇ ಭಯ ಇರಬಾರದು ಎಂದು ಹೋಟೆಲ್‌ನಲ್ಲಿ ದೇವರ ಪೂಜೆ ಮಾಡಿ ಗಣ ಹೋಮ ನಡೆಸಲು ತೀರ್ಮಾನಿಸಲಾಗಿದೆ” ಎಂದು ಶಾಂಭವಿ ಲಾಡ್ಜ್ ಲೀಸ್ ಪಡೆದ ದಿನೇಶ್ ಮಾಧ್ಯಮಗಳಿಗೆ ಹೇಳಿಕೆ‌ ನೀಡಿದ್ದರು. ಆದರೆ ಇದೀಗ ಮತ್ತೆ ದುರ್ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಣಾಜೆಯ ಶರಣ್ ರಾಜ್ (31) ಎಂದು ಗುರುತಿಸಲಾಗಿದೆ‌. ಇವರು ನಿನ್ನೆ ರಾತ್ರಿ ಶಾಂಭವಿ ಲಾಡ್ಡಿನ ಕೋಣೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದ್ದು , ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದುಬಂದಿದೆ .

Leave a Reply

error: Content is protected !!
Scroll to Top
%d bloggers like this: