ಹಿಂದೂಗಳು 4 ಮಕ್ಕಳನ್ನು ಹೊಂದಿರಬೇಕು, ಇಬ್ಬರನ್ನು RSSಗೆ ಕೊಡಬೇಕು- ಋತಂಭರಾ
ಭಾರತ ಇಸ್ಲಾಮಿಕ್ ರಾಷ್ಟವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು- ಯತಿ ಸತ್ಯದೇವಾನಂದ ಸರಸ್ವತಿ

ಲಕ್ನೋ: ಪ್ರತಿ ಹಿಂದೂ ಪೋಷಕರು ಕನಿಷ್ಠ ಪಕ್ಷ ನಾಲ್ಕು ಜನ ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ಆರ್‌ಎಸ್‌ಎಸ್ ಅಥವಾ ವಿಶ್ವಹಿಂದೂ ಪರಿಷತ್‌ಗೆ ಹಸ್ತಾಂತರಿಸಬೇಕು ಎಂದು ಆಧ್ಯಾತ್ಮಿಕ ಮುಖಂಡರಾದ ಸಾಧ್ವಿ ಋತಂಭರಾ ಅವರು ಹಿಂದೂಗಳಿಗೆ ಕರೆ ನೀಡಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರಾಮೋತ್ಸವವನ್ನುದ್ದೇಶಿಸಿ ಮಾತನಾಡುತ್ತಾ, ರಾಮನ ಭಕ್ತನಾಗಲು, ರಾಮತ್ವವನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ ರಾಮನು ಅಜೇಯ ಪುರುಷತ್ವದ ಸಂಕೇತ. ರಾಜಕೀಯ ಪಕ್ಷಗಳು ಹಿಂದೂಗಳನ್ನು ವಿಭಜಿಸುತ್ತವೆ. ಆದರೆ ಶ್ರೀರಾಮನ ನಡವಳಿಕೆಯು ಇಡೀ ಸಮಾಜವನ್ನು ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ವಿಶ್ವ ಹಿಂದೂ ಪರಿಷತ್‌ಗೆ ಹಸ್ತಾಂತರಿಸಿದರೆ, ಅವರು ರಾಷ್ಟತ್ಯಾಗಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಮಾತನಾಡಿ, ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟವಾಗಿದೆ. ಆದರೆ ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಭಾರತವು ಇಸ್ಲಾಮಿಕ್ ರಾಷ್ಟವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸಲಹೆ ನೀಡಿದರು.

Leave A Reply

Your email address will not be published.