ಗೋವಾ ಶಿಪ್ ಯಾರ್ಡ್ ನಲ್ಲಿ 253 ವಿವಿಧ ಹುದ್ದೆ; ಡಿಪ್ಲೋಮಾ, ಡಿಗ್ರಿ, ಐಟಿಐ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ!

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.  ಒಟ್ಟು 253 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ.

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಇದೀಗ ನೇಮಕಾತಿ ಪ್ರಕಟಣೆಯೊಂದನ್ನು ಹೊರಡಿಸಿದೆ. ಅಸಿಸ್ಟಂಟ್ ಸೂಪರಿಂಟೆಂಡಂಟ್, ಪ್ಲಂಬರ್, ಟೆಕ್ನಿಕಲ್ ಅಸಿಸ್ಟಂಟ್ ಮತ್ತು ಇತರೆ ಹಲವು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಸದರಿ ಹುದ್ದೆಗಳಿಗೆ ಡಿಪ್ಲೊಮ, ಡಿಗ್ರಿ, ಐಟಿಐ, ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 29-03-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 13-05-2022
ಹಾರ್ಡ್ ಕಾಪಿ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ:
23-05-2022

ಅರ್ಜಿ ಶುಲ್ಕ : ಅರ್ಜಿ ಸಲ್ಲಿಸಲು ರೂ.200 ಶುಲ್ಕ ಪಾವತಿ ಮಾಡಬೇಕು. ಎಸ್‌ಸಿ, ಎಸ್‌ಟಿ, PWD, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಯೋಮಿತಿ : ಅರ್ಜಿ ಸಲ್ಲಿಸಲು ಗರಿಷ್ಠ 46 ವರ್ಷದ ವರೆಗೆ ಅವಕಾಶ ನೀಡಲಾಗಿದೆ. ವಿವಿಧ ಹುದ್ದೆಗಳಿಗೆ ವಿವಿಧ ವಯೋಮಿತಿ ಅರ್ಹತೆಗಳನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ನೋಟಿಫಿಕೇಶನ್‌ನಲ್ಲಿ ಚೆಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ : ಅಸಿಸ್ಟಂಟ್ ಸೂಪರಿಂಟೆಂಡಂಟ್,
ಸ್ಟ್ರಕ್ಚರಲ್ ಫಿಟ್ಟರ್, ರೆಫ್ರಿಜೆರೇಷನ್ ಅಂಡ್ ಎಸಿ ಮೆಕ್ಯಾನಿಕ್, ವೆಲ್ಡರ್, 3ಜಿ ವೆಲ್ಡರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮೆಕ್ಯಾನಿಕ್, ಪ್ಲಂಬರ್, ಮೊಬೈಲ್ ಕ್ರೇನ್ ಆಪರೇಟರ್, ಪ್ರಿಂಟರ್ ಕಮ್ ರೆಕಾರ್ಡ್ ಕೀಪರ್, ಕುಕ್, ಆಫೀಸರ್‌ ಅಸಿಸ್ಟಂಟ್
ಆಫೀಸರ್ ಅಸಿಸ್ಟಂಟ್ (ಫೈನಾನ್ಸ್ / ಇಂಟರ್‌ನಲ್
ಆಡಿಟ್),  ಸ್ಟೋರ್ ಅಸಿಸ್ಟಂಟ್ , ಯಾರ್ಡ್ ಅಸಿಸ್ಟಂಟ್,
ಜೂನಿಯರ್ ಇನ್‌ಸ್ಟ್ರಕ್ಟರ್, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಷಿಯನ್, ಟೆಕ್ನಿಕಲ್ ಅಸಿಸ್ಟಂಟ್ (ವಿವಿಧ ಟ್ರೇಡ್),
ಸಿವಿಲ್ ಅಸಿಸ್ಟಂಟ್,  ಟ್ರೈನಿ ವೆಲ್ಡರ್, ಟ್ರೈನಿ ಜೆನೆರಲ್ ಫಿಟ್ಟರ್, ಅನ್ ಸ್ಕಿಲ್ಡ್

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಇತರೆ ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.