ದೆಹಲಿಯ ಕುತುಬ್ ಪಕ್ಕದ ಮಸೀದಿಯ ಜಾಗದಲ್ಲಿತ್ತಂತೆ ಹಿಂದೂ ದೇವಾಲಯ!! ಬಾಬರಿ ಮಸೀದಿಯಡಿಯಲ್ಲಿ ದೇವಾಲಯದ ಅವಶೇಷವಿದೆ ಎಂದಿದ್ದ ತಜ್ಞರಿಂದ ಮತ್ತೊಂದು ಸ್ಪೋಟಕ ಮಾಹಿತಿ ಬಯಲು!!

ಬಾಬರಿ ಮಸೀದಿಯ ಕೆಳಗೆ ದೇವಾಲಯದ ಅವಶೇಷಗಳಿವೆ ಎಂದು ಮೊದಲು ಪತ್ತೆ ಮಾಡಿದ್ದ ಪುರಾತತ್ವ ಸಮೀಕ್ಷೆಯ ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ ಮೊಹಮ್ಮದ್ ಮತ್ತೊಂದು ಐತಿಹಾಸಿಕ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ.ರಾಜಧಾನಿ ದೆಹಲಿಯ ಕುತುಬ್ ಮೀನಾರ್ ಬಳಿ ಇರುವ ಕುವಾತ್-ಉಲ್-ಇಸ್ಲಾಂ ಮಸೀದಿ ಕಟ್ಟಲು ಸುಮಾರು 27 ದೇವಾಲಯಗಳನ್ನು ಕೆಡವಲಾಗಿದ್ದು,ಕುತುಬ್ ಪಕ್ಕದಲ್ಲಿ ಇಂದಿಗೂ ಹಲವು ಗಣೇಶ ಮೂರ್ತಿಗಳಿವೆ ಎಂದಿದ್ದಾರೆ. ಸದ್ಯ ಸುದ್ದಿ ಎಲ್ಲೆಡೆ ಹಬ್ಬಿದ್ದು,ರಾಮ ಮಂದಿರ ನಿರ್ಮಾಣದಂತೆ ಗಣೇಶ ಮಂದಿರ ನಿರ್ಮಾಣಕ್ಕೂ ಆಗ್ರಹ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ.

ಪೃಥ್ವಿರಾಜ್ ಚೌಹಾಣನ ರಾಜಧಾನಿಯಾಗಿದ್ದ ಈ ಸ್ಥಳದಲ್ಲಿ ದೇವಾಲಯಗಳನ್ನು ಕೆಡವಿ, ಅದೇ ಕಲ್ಲುಗಳಿಂದ ಮಸೀದಿ ಕಟ್ಟಲಾಗಿದೆ. ಅಲ್ಲಿರುವ ಅರೇಬಿಕ್ ಶಾಸನಗಳಲ್ಲೂ ಈ ವಿಷಯ ಬರೆಯಲಾಗಿದ್ದು, ಇದಕ್ಕೆಲ್ಲಾ ಸಾಕ್ಷಿ ಎಂಬಂತೆ ಇಂದಿಗೂ ಅಲ್ಲಿನ ಹಲವು ಕಡೆ ಗಣೇಶ ಮೂರ್ತಿಗಳು ಇವೆ ಎಂದು ಅವರು ಹೇಳಿದರು.1990 ರಲ್ಲಿ ಬಾಬರಿ ಮಸೀದಿ ಇದ್ದ ಜಗದಲ್ಲಿ ದೇವಾಲಯವಿತ್ತು ಎಂದು ಮೊದಲು ಪತ್ತೆ ಮಾಡಿದ ಕೀರ್ತಿ ಮೊಹಮ್ಮದ್ ಪಾಲಿಗಿದ್ದು, ಇವರ ಸಂಶೋಧನೆಯನ್ನು ಸುಪ್ರೀಂ ಕೋರ್ಟ್ ತೀರ್ಪಿಗೂ ಪರಿಗಣಿಸಲಾಗಿತ್ತು. ಸದ್ಯ ಇನ್ನೊಂದು ಸತ್ಯವನ್ನು ಬಿಚ್ಚಿಡಲಾಗಿದ್ದು, ಯಾವ ಹಂತ ತಲುಪಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.