ಮಲ್ಪೆ : ಸೆಲ್ಫಿ ತೆಗೆಯಲು ಹೋಗಿ ಯುವಕರಿಬ್ಬರು ನೀರು ಪಾಲು|ಓರ್ವನ ಮೃತದೇಹ ಪತ್ತೆ!

ಮಲ್ಪೆ:ಸೆಲ್ಫಿ ತೆಗೆಯಲು ಹೋಗಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಯುವಕರಿಬ್ಬರು ನೀರುಪಾಲಾಗಿದ್ದು,ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾದ ಘಟನೆ ಇಂದು ನಡೆದಿದೆ.

ಮೃತರನ್ನು ಹಾವೇರಿಯ ಸತೀಶ್ ಎಂ.ನಂದಿಹಳ್ಳಿ ಮತ್ತು ಬಾಗಲ ಕೋಟೆಯ ಸತೀಶ್ ಎಸ್.ಕಲ್ಯಾಣ್ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರಲ್ಲಿ ಸತೀಶ್ ನಂದಿಹಳ್ಳಿಯ ಮೃತದೇಹವು ಪತ್ತೆಯಾಗಿದ್ದು,ಇನ್ನೊಬ್ಬರಿಗೆ ಹುಡುಕಾಟ ಮುಂದುವರೆದಿದೆ.


Ad Widget

Ad Widget

Ad Widget

ಬೆಂಗಳೂರಿನ GKVK ಕೃಷಿ ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದು, ಈ ವೇಳೆ ಮಲ್ಪೆ ಬೀಚ್ ಗೆ ಆಗಮಿಸಿ ನೀರಿಗಿಳಿದಿದ್ದಾರೆ.68 ವಿದ್ಯಾರ್ಥಿಗಳು ತಂಡದಲ್ಲಿ ಆಗಮಿಸಿದ್ದು, ಈ ಪೈಕಿ ಲೈಫ್ ಗಾರ್ಡ್ ಸಿಬ್ಬಂದಿಗಳ ಸೂಚನೆ ಮೀರಿ ಸೆಲ್ಫಿ ತೆಗೆಯಲು ಹೋದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.ಓರ್ವನ ಶವವನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ಮೇಲಕ್ಕೆತ್ತಿದ್ದು,ನೀರುಪಾಲದ ಮತ್ತೊಬ್ಬಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಸತೀಶ್ ನಂದಿ ಹಳ್ಳಿಯನ್ನು ನೀರಿನಿಂದ ಮೇಲಕ್ಕೆ ಎತ್ತಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ತೀವ್ರವಾಗಿ ಅಸ್ವಸ್ಥಗೊಂಡ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: