ಜನನಿಬಿಡ ಪ್ರದೇಶದ ಕಸಾಯಿಖಾನೆಯ ಸುತ್ತ ಅಕ್ರಮ ಬಾಂಗ್ಲಾ ನಿವಾಸಿಗಳು ಎಸ್ಕಾರ್ಟ್!! ಪೊಲೀಸರು ಮಾರುವೇಷದಲ್ಲಿ ದಾಳಿ ನಡೆಸಿದಾಗ ಬಯಲಾಯಿತು ಸತ್ಯ!?

ಗೋಹತ್ಯಾ ನಿಷೇಧ ರಾಜ್ಯದಲ್ಲಿ ಜಾರಿಯಲ್ಲಿದ್ದರೂ, ಹಲವು ಕಡೆ ನಿತ್ಯ ಗೋಕಳ್ಳತನ, ಅಕ್ರಮ ಗೋಮಾಂಸ ಮಾರಾಟ ನಡೆಯುತ್ತಲೇ ಇದೆ. ಪೊಲೀಸರು ಇದಕ್ಕೆಲ್ಲಾ ಎಷ್ಟೇ ಕಡಿವಾಣ ಹಾಕಲು ಪ್ರಯತ್ನ ಪಟ್ಟರೂ ಈ ಅಕ್ರಮ ಗೋ ದಂಧೆ ಮಾತ್ರ ಕಡಿಮೆ ಆಗುತ್ತಿಲ್ಲ. ಆದರೆ ಮಲೆನಾಡಿನ ಭಾಗದಲ್ಲಿ ಈ ದಂಧೆಗೆ ಕಡಿವಾಣ ಹಾಕಲು ಪೊಲೀಸರೇ ಮಾರುವೇಷದಲ್ಲಿ ಹೋಗಿರುವುದು ವಿಶೇಷ. ಈ ಘಟನೆ ಮಲೆನಾಡಿನ ಜಯಪುರದಲ್ಲಿ.

ಗೋವುಗಳನ್ನ ಕಡಿದು ಅಕ್ರಮವಾಗಿ ಗೋ ಮಾಂಸ ಬೇರ್ಪಡಿಸುವಾಗ ದಾಳಿ ಮಾಡಿದ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿ ಕತ್ತಲಲ್ಲಿ ನದಿಗೆ ಹಾರಿ ಗೋಕಳ್ಳರು ತಪ್ಪಿಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೇರೂರು-ಸ್ಥಿರೂರು ಗ್ರಾಮದ ರಾಮೇಗೌಡ ಎಂಬುವರ ಕಾಫಿ ತೋಟದ ಲೈನ್‌ನಲ್ಲಿ ಅಪರಿಚಿತರು ಅಕ್ರಮವಾಗಿ ಗೋವುಗಳನ್ನ ಕಡಿದು ಮಾಂಸ ಬೇರ್ಪಡಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಬಾಳೆಹೊನ್ನೂರು ಪೋಲೀಸರು ಮಾರುವೇಷದಲ್ಲಿ ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಾರುವೇಷದಲ್ಲಿ ದಾಳಿ ನಡೆಸಿದ ಸಮಯದಲ್ಲಿ ಸುಮಾರು ಒಂದು ಕ್ವಿಂಟಾಲ್ ಗೋಮಾಂಸವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿ ವೇಳೆ ಎಸ್ಟೇಟ್‌ನ ಕೂಲಿ ಕಾರ್ಮಿಕರ ಲೈನ್‌ನ ಮನೆಯೊಂದರಲ್ಲಿ ಐದು ಜನ ಹಸುವನ್ನ ಕಡಿಯುತ್ತಿದ್ದು, ಈ ವೇಳೆಯಲ್ಲಿ ಪೊಲೀಸರನ್ನ ಕಂಡ ಕೂಡಲೇ ಅಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪರಾರಿಯಾಗುವ ವೇಳೆ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿ ಪೊಲೀಸರ ಮೇಲೆ ದಾಳಿಗೂ ಮುಂದಾಗಿದ್ದಾರೆ. ಅದರಲ್ಲಿ ಕೆಲವರು ಕತ್ತಲಲ್ಲಿ ನದಿಗೆ ಹಾರಿ ತಪ್ಪಿಸಿಕೊಂಡಿದ್ದಾರೆ.

ಸ್ಥಳದಲ್ಲಿ ಒಂದು ಕ್ವಿಂಟಾಲ್ ಗೋ ಮಾಂಸ, ದನದ ಕತ್ತರಿಸಿದ ಒಂದು ಕಾಲು ಪತ್ತೆಯಾಗಿದೆ. ಆರೋಪಿಗಳು ಮಾಂಸ ಮಾರಾಟದ ಉದ್ದೇಶದಿಂದ ದನಗಳನ್ನು ಹಲವೆಡೆಗಳಿಂದ ಕಳವು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಪರಾರಿಯಾದ ಗೋಕಳ್ಳರು ಕಾಫಿ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಅಕ್ರಮ ಬಾಂಗ್ಲಾ ನಿವಾಸಿಗಳು ಎನ್ನುವ ಆರೋಪ ಕೇಳಿಬಂದಿದೆ.

Leave A Reply

Your email address will not be published.