ಇಂಟೆಲಿಜೆನ್ಸ್ ಬ್ಯೂರೊ( IB) ದಲ್ಲಿ
ಉದ್ಯೋಗ: 150 ಹುದ್ದೆಗಳಿಗೆ ಅರ್ಜಿ ; ಅರ್ಜಿ ಸಲ್ಲಿಸಲು ಮೇ.07 ಕೊನೆಯ ದಿನಾಂಕ

ಇಂಟೆಲಿಜೆನ್ಸ್ ಬ್ಯೂರೊ(ಐಬಿ)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.  ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ACIO) ಗ್ರೇಡ್ 2 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಬಿಇ, ಬಿ.ಟೆಕ್, ಮಾಸ್ಟರ್ ಡಿಗ್ರಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ, ವಿದ್ಯಾರ್ಹತೆ, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ಚೆಕ್ ಮಾಡಿಕೊಂಡು ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಉದ್ಯೋಗ ಸಂಸ್ಥೆ: ಇಂಟೆಲಿಜೆನ್ಸ್ ಬ್ಯೂರೊ
ಹುದ್ದೆಗಳ ಹೆಸರು: ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್
ಆಫೀಸರ್ ಗ್ರೇಡ್ 2
ಹುದ್ದೆಗಳ ಸಂಖ್ಯೆ: 150

ವರ್ಗಾವಾರು ಹುದ್ದೆಗಳ ಸಂಖ್ಯೆ :
ಸಾಮಾನ್ಯ ಅಭ್ಯರ್ಥಿಗಳು (UR) : 80
ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು: 15
ಇತರೆ ಹಿಂದುಳಿದ ಅಭ್ಯರ್ಥಿಗಳು: 15
ಪರಿಶಿಷ್ಟ ಪಂಗಡ ಅಭ್ಯರ್ಥಿಗಳು: 16
ಪರಿಶಿಷ್ಟ ಜಾತಿ ಅಭ್ಯರ್ಥಿಗಳು: 24

ವಿದ್ಯಾರ್ಹತೆ: ಬಿಇ, ಬಿ.ಟೆಕ್, ಮಾಸ್ಟರ್ ಡಿಗ್ರಿ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: 16-04-2022
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 07-05 2022 ರ ರಾತ್ರಿ 11-59 ರವರೆಗೆ.
ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ: 07-05-2022

ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.100/-, EWS /OBC ಅಭ್ಯರ್ಥಿಗಳಿಗೆ ರೂ.100.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ, ನೆಟ್ ಬ್ಯಾಂಕಿಂಗ್ ಮೂಲಕ ಸಹ ಪಾವತಿ ಮಾಡಬಹುದು.

ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ.
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು
ಅನ್ವಯವಾಗಲಿವೆ.

ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಇತರೆ ಯಾವುದೇ ಮಾದರಿಯಲ್ಲಿ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ.

ಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ಶೈಕ್ಷಣಿಕ ಅರ್ಹತೆ ದಾಖಲೆಗಳು,ಕಾರ್ಯಾನುಭವ ದಾಖಲೆಗಳು, ಭಾವಚಿತ್ರ, ಇತರೆ ದಾಖಲೆಗಳು.

ಇತರೆ ಹೆಚ್ಚಿನ ಮಾಹಿತಿಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಅಧಿಸೂಚನೆ ಓದಬಹುದು. ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.