ಕೋಮು ಗಲಬೆಗೆ ಬಿಗಡಾಯಿಸಿದ‌ ಹಳೇ ಹುಬ್ಬಳ್ಳಿ ! ಸದ್ಯದ ಪರಿಸ್ಥಿತಿಯ ಬಗ್ಗೆ ಇಲ್ಲಿದೆ ವಿವರ

ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಕೋಮು ದ್ವೇಷದ ಗಲಾಟೆ ನಡೆಯುತ್ತಿದ್ದರೂ ಶಾಂತವಾಗಿದ್ದ ಹುಬ್ಬಳ್ಳಿ ಶನಿವಾರ ರಾತ್ರಿ ಹೊತ್ತಿಉರಿದಿದೆ. ಹಳೇ ಹುಬ್ಬಳ್ಳಿಯಲ್ಲಿ ನೂರಾರು ಕಿಡಿಗೇಡಿಗಳು ಸಿಕ್ಕ ಸಿಕ್ಕವರ ಮೇಲೆ ಕಲ್ಲು ತೂರಿ ಹಿಂಸಾಚಾರ ನಡೆಸಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ ಪ್ರಾರಂಭವಾಗಲು ಕಾರಣವೇನು?

ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿರುವ ವಿಚಾರವಾಗಿ ಹಳೆ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ  ಸಂಭವಿಸಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ

ವಿವಾದಾತ್ಮಕ ಪೋಸ್ಟ್ ವಿಷಯವಾಗಿ ಶನಿವಾರ ರಾತ್ರಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸಿದ್ದ ಬಹುತೇಕ ಕಿಡಿಗೇಡಿಗಳೆಲ್ಲ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಮನೆಗೆ ತೆರಳಿ ತಪಾಸಣೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ ಕಿಡಿಗೇಡಿಗಳು ಗಲಭೆ ವೇಳೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದುವರೆಗೆ ಒಟ್ಟು 60 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, ಒಟ್ಟು 7 ಪ್ರತ್ಯೇಕ ಎಫ್​ಐಆರ್ ದಾಖಲಿಸಲಾಗಿದೆ. ಗಲಾಟೆಯಲ್ಲಿ ಮೂವರು ಅಪ್ತಾಪ್ತರ ಮೇಲೂ ಕೇಸ್ ದಾಖಲಾಗಿದೆ.

ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ದಾಂಧಲೆಯಲ್ಲಿ ಒಟ್ಟು ಪೊಲೀಸ್ ವಾಹನಗಳು ಸೇರಿದಂತೆ 12 ವಾಹನಗಳು ಜಖಂಗೊಂಡಿವೆ. ಘಟನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಹಾನಿಯಾಗಿದ್ದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ಗಲಭೆ ನಿಯಂತ್ರಿಸಲು ಪೊಲೀಸರು 13 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.

ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕದೆ. ಹಳೇ ಹುಬ್ಬಳ್ಳಿಗೆ ರಾಶಿ ರಾಶಿ ಕಲ್ಲು, ಬಡಿಗೆಗಳ ತಂದಿಟ್ಟಿದ್ಯಾರು..? ಕಲ್ಲುಗಳೇ ಸಿಗದ ಏರಿಯಾದಲ್ಲಿ ಲೋಡ್​ಗಟ್ಟಲೆ ಕಲ್ಲು ಸಿಕ್ಕಿದ್ದೇಗೆ..? ದಿಢೀರ್​​ ಅಷ್ಟು ಸಂಖ್ಯೆಯಲ್ಲಿ ಕಿಡಿಗೇಡಿಗಳು ಜಮಾಯಿಸಿದ್ದೇಗೆ..? ಕೇವಲ ಒಂದೇ ಒಂದು ಪೋಸ್ಟ್​​ಗೆ ಹಿಂಸಾಚಾರಕ್ಕೆ ಇಳಿಯಬೇಕಿತ್ತಾ..? ರಾಶಿ ರಾಶಿ ಕಲ್ಲು, ಬಡಿಗೆ ಹಿಡಿದುಕೊಂಡು ಬಂದಿದ್ಯಾಕೆ ಗೊತ್ತಾ..? ಹುಬ್ಬಳ್ಳಿ ಗಲಭೆಗೆ ಮೊದಲೇ ಸ್ಕೆಚ್ ಹಾಕಿದ್ರಾ..? ಎಂಬ ಪ್ರಶ್ನೆಗಳು ಎದ್ದಿವೆ.

Leave A Reply

Your email address will not be published.