ಮಂಗಳೂರು ವಿವಿಯಲ್ಲಿ ಉದ್ಯೋಗಾವಕಾಶ ; ವಿವಿಧ ಹುದ್ದೆಗೆ ಅರ್ಜಿ ಆಹ್ವಾನ- ಏಪ್ರಿಲ್ 19 ರಂದು ನೇರ ಸಂದರ್ಶನ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಹುದ್ದೆಗಳ ಬಗೆಗಿನ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಈ ಕೆಳಗಿನ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ. 11 ತಿಂಗಳ ಅವಧಿಗೆ ಅಥವಾ ಈ ಕಚೇರಿಯ ಮುಂದಿನ ಆದೇಶದವರೆಗೆ ಯಾವುದು ಮೊದಲು ಬರುವುದೋ ಅಲ್ಲಿಯವರೆಗೆ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 19-04-2022 ರಂದು ಪೂರ್ವಾಹ್ನ 09-00 ಗಂಟೆವರೆಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.

ಸಂದರ್ಶನ ದಿನಾಂಕ : 19-04-2022 ಸಂದರ್ಶನ ವಿಳಾಸ: ಸಿಂಡಿಕೇಟ್ ಸಂಭಾಂಗಣ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ,

ಹುದ್ದೆಗಳ ವಿವರ : ಕೆಮಿಸ್ಟ್ರಿ ಲ್ಯಾಬ್ ಸಹಾಯಕ: 02
ಇಲೆಕ್ಟ್ರಾನಿಕ್ಸ್ ಲ್ಯಾಬ್ ಸಹಾಯಕ: 01
ಸ್ಟ್ಯಾಟಿಸ್ಟಿಕ್ಸ್ ವಿಭಾಗ ಸಹಾಯಕ : 1
ಅಪ್ರೈಡ್ ಜೂವಾಲಜಿ ಸಹಾಯಕ : 2
ಯೋಗಿಕ್ ಸೈನ್ಸ್ ಸಹಾಯಕ : 1
ಫಿಸಿಕ್ಸ್ ಲ್ಯಾಬ್ ಸಹಾಯಕ : 2
ಮೆಟೀರಿಯಲ್ಸ್ ಸೈನ್ಸ್ ಲ್ಯಾಬ್ ಸಹಾಯಕ : 1 ಬಯೋಸೈನ್ಸ್ ಲ್ಯಾಬ್ ಸಹಾಯಕ: 1
ಫುಡ್ ನ್ಯುಟ್ರಿಷಿನ್, ಡಯಟಿಕ್ಸ್ / ಫುಡ್ ಟೆಕ್ನಾಲಜಿ ಕೋರ್ಸ್ ಲ್ಯಾಬ್ ಸಹಾಯಕ : 1
ಮೈಕ್ರೋಬಯೋಲಜಿ ಕೋರ್ಸ್ ಲ್ಯಾಬ್ ಸಹಾಯಕ : 1 ಎನ್ವಿರಾನ್ನೆಂಟಲ್ ಸೈನ್ಸ್ ಕೋರ್ಸ್ ಲ್ಯಾಬ್ ಸಹಾಯಕ :
1
ಬಯೋಟೆಕ್ನಾಲಜಿ ಕೋರ್ಸ್ ಲ್ಯಾಬ್ ಸಹಾಯಕ : 1 ಬಾಟನಿ ಲ್ಯಾಬ್ ಸಹಾಯಕ: 1
ಮ್ಯಾಥೆಮೆಟಿಕ್ಸ್ ಅಂಡ್ ಕಂಪ್ಯೂಟರ್ ಸೈನ್ಸ್ ಲ್ಯಾಬ್
ಸಹಾಯಕ : 1
ಫಿಸಿಕ್ಸ್ ಲ್ಯಾಬ್ ಸಹಾಯಕ : 1
ಹಾಸ್ಟೆಲ್ ವಾರ್ಡನ್ : 2
ಎಸ್ಟೇಟ್ ಆಫೀಸರ್ : 1

ವಿದ್ಯಾರ್ಹತೆ : ಅಭ್ಯರ್ಥಿಗಳು ಬಿಎಸ್ಸಿ
/ ಎಂಎಸ್ಸಿ / ಪದವಿ ಪಾಸ್ ಮಾಡಿರಬೇಕು.

ವಯೋಮಿತಿ ಅರ್ಹತೆ: ಕನಿಷ್ಠ 18 ವರ್ಷ ಆಗಿರಬೇಕು,
ಗರಿಷ್ಠ 40 ವರ್ಷ ಮೀರಿರಬಾರದು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ಮಂಗಳೂರು ವಿಶ್ವವಿದ್ಯಾಲಯದ ವೆಬ್‌ಸೈಟ್ www.mangaloreuniversity.ac.in ಗೆ ಭೇಟಿ ನೀಡಿ, ಡೌನ್‌ಲೋಡ್ ಮಾಡಿಕೊಳ್ಳಬಹುದು.

ಶೈಕ್ಷಣಿಕ ಅರ್ಹತೆ, ಜಾತಿ/ ವರ್ಗ, ಜನ್ಮ ದಿನಾಂಕ, ಕಾರ್ಯಾನುಭ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.

ಮೇಲೆ ತಿಳಿಸಿದ ವಿಳಾಸಕ್ಕೆ ಅಭ್ಯರ್ಥಿಗಳು ತಪ್ಪದೇ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ಮಾತ್ರ ಹಾಜರಾಗಲು ತಿಳಿಸಲಾಗಿದೆ. ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಮೂಲ ದಾಖಲೆಗಳನ್ನು ತೆಗೆದುಕೊಂಡು ಬಂದಿರಬೇಕು ಎಂದು ಹೇಳಲಾಗಿದೆ. ಈ ಹುದ್ದೆಗಳು 11 ತಿಂಗಳ ತಾತ್ಕಾಲಿಕ ಪೋಸ್ಟ್‌ಗಳಾಗಿದ್ದು, ಅಗತ್ಯವಿದ್ದಲ್ಲಿ ಮುಂದುವರೆಸುವ ಸಾಧ್ಯತೆ ಇರುತ್ತದೆ.

Leave A Reply

Your email address will not be published.