ಕಡಬ : ಪಂಜದ ಮನೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ;

ಕಡಬ ( ಪಂಜ) : ಯುವಕನೊಬ್ಬನ ಮೃತದೇಹವೊಂದು ಮನೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಎರಡು ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಪಂಜದ ಕೂತ್ಕುಂಜ ಗ್ರಾಮದ ಪುತ್ಯ ದಿ.ಶಿವಪ್ಪ ಗೌಡ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರ ರಮೇಶ್ (36) ಎಂಬವರ ಮೃತದೇಹ ಇದಾಗಿದೆ.


Ad Widget

Ad Widget

Ad Widget

ರಮೇಶರ ಪತ್ನಿ ಶ್ರೀಮತಿ ಕವಿತಾ ಅವರು ಮಕ್ಕಳೊಂದಿಗೆ ಕೆಲವು ಸಮಯಗಳಿಂದ ತವರು ಮನೆಯಲ್ಲಿ ವಾಸವಿದ್ದರು. ಪಂಜದಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದ ರಮೇಶ್ ಅವರು ಬಳಿಕ ಅಡಿಕೆ ಸುಲಿಯುವುದು ಹಾಗೂ ಕೂಲಿ ಕೆಲಸ ಮಾಡಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.

ರಮೇಶರವರ ಮನೆ ಸಮೀಪ ಸಹೋದರ ಮತ್ತು ತಾಯಿ ಮನೆ ಇದ್ದು ,ಅದು ಇತ್ತೀಚೆಗೆ ಮಾರಾಟವಾಗಿತ್ತು. ಆದರೆ ಮನೆ ಇನ್ನಷ್ಟೇ ಬಿಟ್ಟು ಕೊಡಬೇಕಾಗಿತ್ತು. ಎ.15 ರಂದು ಸಂಜೆ ರಮೇಶರ ತಾಯಿ ಅವರ ಮನೆಗೆ ಬಂದು ಅಲ್ಲಿಯೇ ಸಮೀಪದಲ್ಲಿರುವ ಮಗನ ಮನೆಗೆ ತೆರಳಿದಾಗ ಮನೆಯೊಳಗೆ ಮೃತ ಪಟ್ಟಿದ್ದ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂತು.

ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೃತ ವ್ಯಕ್ತಿ ಮದ್ಯವ್ಯಸನಿಯಾಗಿದ್ದು ಮತ್ತು ಅವರಿಗೆ ಅನಾರೋಗ್ಯ ಕಾಡುತ್ತಿತ್ತು ಎನ್ನಲಾಗಿದೆ. ಸುಬ್ರಹ್ಮಣ್ಯ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: