ಸುಳ್ಯ: ಜ್ಯೋತಿಷಿ ಇದ್ದ ಕಾರು ಅಪಘಾತ-ಮೂವರಿಗೆ ಗಂಭೀರ ಗಾಯ!! ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಮುಸ್ಲಿಂ ವರ್ತಕ

ಸುಳ್ಯ:ಇಲ್ಲಿನ ಸಮೀಪದ ಕಲ್ಲುಗುಂಡಿ ಎಂಬಲ್ಲಿ ಏಪ್ರಿಲ್ 14ರ ರಾತ್ರಿ ಕಾರೊಂದು ಸೇತುವೆ ಡಿವೈಡರ್ ಗೆ ಗುದ್ದಿದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಗಾಯಳುಗಳನ್ನು ಜ್ಯೋತಿಷಿ ಗುರುರಾಜ್, ಪ್ರೇಮ್ ಹಾಗೂ ಕಾರು ಚಾಲಕ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಸಂಪಾಜೆಯಿಂದ ಸುಳ್ಯ ಮಾರ್ಗವಾಗಿ ಸವಣೂರು ಕಡೆಗೆ ಚಲಿಸುತ್ತಿದ್ದ ಜ್ಯೋತಿಷಿ ಇದ್ದ ಕಾರು ಕಲ್ಲುಗುಂಡಿ ಮುಖ್ಯಪೇಟೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡಿತು. ಪರಿಣಾಮ ಸೇತುವೆಯ ಡಿವೈಡರ್ ಗೆ ಗುದ್ದಿದ್ದು, ಘಟನೆಯಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಕಾರಿನೊಳಗಿದ್ದ ಪ್ರಯಾಣಿಕರು ಗಾಯಗೊಂಡರು.

ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಲ್ಲುಗುಂಡಿಯ ಮುಸ್ಲಿಂ ವರ್ತಕ ಇ ಆರ್ ಅನ್ವರ್ ಸಾದತ್ ಅವರು ತಮ್ಮ ಕಾರಿನಲ್ಲಿಯೇ ಗಾಯಳುಗಳನ್ನು ಸಾಗಿಸಲು ನೆರವಾದರು.ಗಂಭೀರ ಗಾಯಗೊಂಡಿರುವ ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.

Leave A Reply