ಮೂರು ದಿನ ರಜೆ ಪಡೆದು ಹನಿಮೂನ್ ಗೆ ತೆರಳಿದ್ದ ಯುವಕನ ಅನುಭವ!! ಎರಡೇ ದಿನದಲ್ಲಿ ಮದುವೆಯೇ ಬೇಡವಿತ್ತು ಎಂದಳಂತೆ ಮದಿಮ್ಮಲ್!!?

ಬಿಡುವಿಲ್ಲದ ಕೆಲಸದ ಮಧ್ಯೆ ಹೊಸದಾಗಿ ಮದುವೆಯಾಗಿದ್ದ ಯುವಕನೋರ್ವ ತನ್ನ ಪತ್ನಿಯೊಂದಿಗೆ ಹನಿಮೂನ್ ಗೆ ತೆರಳಿದ್ದ ಸಂದರ್ಭ ಕೆಲಸದ ಒತ್ತಡ ಅಡ್ಡಿ ಪಡಿಸಿದ್ದು, ಸದ್ಯ ಪತ್ನಿ ಕೋಪಗೊಂಡು ಮದುವೆಯೇ ಬೇಡವಿತ್ತು ಎನ್ನುತ್ತಿದ್ದಾಳೆ ಎಂದು ವ್ಯಕ್ತಿಯೋರ್ವ ಬೇಸರ ತೋಡಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.

ಅಂತದ್ದೇನಾಯಿತು!?
ಹೌದು, ಕಳೆದ ಜನವರಿಯಲ್ಲಿ ತನ್ನ ಪತ್ನಿಯೊಂದಿಗೆ ಹನಿಮೂನ್ ಗಾಗಿ ಕಾಂಬೋಡಿಯಾಗೆ ತೆರಳಿದ್ದ ಸಂದರ್ಭ ಬಾಸ್ ನ ಕರೆ ಬಂದಿದೆ. ಅತ್ತ ಕಡೆಯಿಂದ ಮಾತು ಪ್ರಾರಂಭಿಸಿದ ಬಾಸ್, ಒಂದು ದಿನ ರಜೆ ಕ್ಯಾನ್ಸಲ್ ಮಾಡಿ ಕೆಲಸಕ್ಕೆ ಜಾಯಿನ್ ಆಗು, ತುರ್ತು ಮೀಟಿಂಗ್ ಇರುವ ಕಾರಣ ಅಮೇರಿಕಾಕ್ಕೆ ಹೋಗಿ ಬಾ ಎಂದಿದ್ದಾರಂತೆ. ಇದಕ್ಕೆ ಒಪ್ಪದೇ ಇದ್ದಾಗ ಬಾಸ್ ಗರಂ ಆಗಿದ್ದು, ಬೇಜವಾಬ್ದಾರಿ ಪ್ರದರ್ಶಿಸುವುದಾದರೆ ಕೆಲಸದಿಂದ ತೆಗೆಯುವುದಾಗಿ ಧಮ್ಕಿ ಹಾಕಿದ್ದರಂತೆ.

ಹನಿಮೂನ್ ಗೆಂದು ಮೂರು ದಿನ ರಜೆ ಪಡೆದು ಬಹಳ ಸಂತೋಷದಿಂದ ತೆರಳಿದ್ದ ನವ ಜೋಡಿಯ ಖುಷಿಗೆ ಬಾಸ್ ಅಡ್ಡ ಬಂದಿದ್ದು ಬೇಸರವಾಗಿತ್ತಂತೆ. ಹನಿಮೂನ್ ಮಧ್ಯದಲ್ಲೇ ಬರ ಹೇಳಿದ್ದ ಬಾಸ್ ನ ಮಾತಿಗೆ ಯುವಕ ಒಪ್ಪದೇ ಇದ್ದುದರಿಂದ ಬಾಸ್ ತರಾಟೆಗೆ ತೆಗೆದುಕೊಂಡಿದ್ದರು. ಇದೆಲ್ಲದರಿಂದ ವಧುವಿನ ಮೂಡ್ ಆಫ್ ಆಗಿದ್ದು,ಯಾಕಪ್ಪ ಮದುವೆಯಾದೆ ಎಂದು ಬೇಸರ ತೋಡಿಕೊಂಡಳು ಎಂದು ಯುವಕ ಹನಿಮೂನ್ ಅನುಭವವನ್ನು ಬಿಚ್ಚಿಟ್ಟಿದ್ದಾನೆ.

Leave A Reply

Your email address will not be published.