ರೈಲು ಪ್ರಯಾಣಿಕರ ಗಮನಕ್ಕೆ; ರೇಲ್ವೆ ಇಲಾಖೆಯಿಂದ ಈ ಹೊಸನಿಯಮಗಳು ಜಾರಿ

ನೀವು ರೈಲಿನಲ್ಲಿ ಪ್ರಯಾಣಿಸುವಾಗ, ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಅನೇಕ ದೂರುಗಳನ್ನು ಆಧರಿಸಿ ರೈಲ್ವೆ ನಿಯಮ ಬದಲಾಗಿವೆ. ಇದು ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಅನ್ವಯಿಸುತ್ತೆ. 

ಭಾರತೀಯ ರೈಲ್ವೇಯು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಪ್ರಯಾಣದ ಸಮಯದಲ್ಲಿ ಶಾಂತಿಯುತವಾಗಿ ಮಲಗಲು ರೈಲ್ವೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ರೈಲ್ವೆಯ ಹೊಸ ನಿಯಮಗಳ ಪ್ರಕಾರ, ಈಗ ನಿಮ್ಮ ಆಸನ, ಕಂಪಾರ್ಟ್‌ಮೆಂಟ್ ಅಥವಾ ಕೋಚ್‌ನಲ್ಲಿರುವ ಯಾವುದೇ ಪ್ರಯಾಣಿಕರು ಮೊಬೈಲ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಜತೆಗೆ ಜೋರಾಗಿ ಹಾಡುಗಳನ್ನು ಹಾಕುವಂತ್ತಿಲ್ಲ. ಇತರೆ ಪ್ರಯಾಣಿಕರ ನಿದ್ರೆಗೆ ಯಾವುದೇ ತೊಂದರೆಯಾಗದಂತೆ  ವರ್ತಿಸಬೇಕು.‌

ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ 10 ಗಂಟೆಯ ನಂತರ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಮಂಡಳಿ ನಿರ್ಧರಿಸಿದೆ. ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರು ಜೋರಾಗಿ ಮಾತನಾಡುವಂತಿಲ್ಲ, ಸಂಗೀತ ಕೇಳುವಂತಿಲ್ಲ. ಯಾವುದೇ ಪ್ರಯಾಣಿಕರು ದೂರು ನೀಡಿದರೆ, ಅದನ್ನು ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯದ್ದಾಗಿರುತ್ತದೆ.

Leave A Reply

Your email address will not be published.