ಉಡುಪಿ : ಪತಿಯ ಅಪರೇಷನ್ ಗೆ ದುಡ್ಡು ಹೊಂದಿಸಲಾಗದೆ, ಮನನೊಂದು ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ!

0 12

ಅಜೆಕಾರು; ಪತಿಯ ಆಪರೇಷನ್ ಗೆ ಹಣ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಅಂಡಾರು ಗ್ರಾಮದ ಬಾಳೆಹಿತ್ತು ಎಂಬಲ್ಲಿ ನಡೆದಿದೆ.

ಮೃತರನ್ನು ಅಂಡಾರು ಗ್ರಾಮದ ಬಾಳೆಹಿತ್ತು ನಿವಾಸಿ 45 ವರ್ಷದ ವನಿತಾ ಎಂದು ಗುರುತಿಸಲಾಗಿದೆ.

ವನಿತಾ ಅವರ ಪತಿ ಸತೀಶ್ ಎನ್. ರಾವ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಹಾಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದರು‌. ಹಾಗಾಗಿ ಹಣದ ವ್ಯವಸ್ಥೆ ಮಾಡಲು ವನಿತಾ ಮನೆಗೆ ಬಂದಿದ್ದು, ಹಣ ಹೊಂದಿಸಲು ಸಾಧ್ಯವಾಗದೇ ಹೋದ ಕಾರಣ ಮನನೊಂದು ಎ.13ರಂದು ಬೆಳಿಗ್ಗೆ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply