ಮಹಿಳೆಯ ದೇಹದಲ್ಲಿ ಇದ್ದಕ್ಕಿದ್ದಂತೆಯೇ ಬೆಳೆಯತೊಡಗಿತು ಕೊಂಬು !! | ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದ ಈ ಪ್ರಕರಣದ ಕುರಿತು ಹೀಗಿದೆ ಮಾಹಿತಿ

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ದಿನನಿತ್ಯ ಬರುವ ಪ್ರಕರಣಗಳಲ್ಲಿ ಕೆಲ ಪ್ರಕರಣಗಳು ವೈದ್ಯ ಲೋಕವನ್ನೇ ಬೆಚ್ಚಿಬೀಳಿಸುತ್ತವೆ. ಅಂತಹ ಪ್ರಕರಣವೊಂದು ಮಲೇಶಿಯಾದಲ್ಲಿ ಕಂಡುಬಂದಿದೆ. ಆದರೆ, ಇತ್ತೀಚಿನ ಕಾಯಿಲೆಗಳು ಹೆಚ್ಚುತ್ತಿರುವಂತೆಯೇ ಚಿಕಿತ್ಸಾ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಪ್ರಗತಿ ಕಾಣಿಸಿಕೊಳ್ಳುತ್ತಿರುವುದು ಒಂದು ಸಮಾಧಾನಕರ ಸಂಗತಿ ಎಂದೇ ಹೇಳಬಹುದು.

ಇದೇ ಸರಣಿಯಲ್ಲಿ ಇದೀಗ ಮಹಿಳೆಯೊಬ್ಬಳ ಎದೆ ಭಾಗದಲ್ಲಿ ಕೊಂಬು ಬೆಳೆದಿರುವ ಪ್ರಕರಣ ಮಲೇಷ್ಯಾದಿಂದ ಬೆಳಕಿಗೆ ಬಂದಿದೆ. ಮೊದಲು ಮಹಿಳೆಗೆ ಆ ಕೊಂಬುಗಳು ಕಾಣಿಸಿಕೊಂಡ ಜಾಗದಲ್ಲಿ ತುರಿಕೆ ಶುರುವಾಗಿದ್ದು, ನಂತರ ಅಲ್ಲಿ ಕೊಂಬನ್ನು ನೋಡಿ ಮಹಿಳೆಯ ಪ್ರಜ್ಞೆಯೇ ತಪ್ಪಿಹೋಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ವಾಸ್ತವದಲ್ಲಿ, ಈ ಘಟನೆ ಮಲೇಷ್ಯಾದ ಒಂದು ನಗರದಿಂದ ವರದಿಯಾಗಿದೆ. ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ಪ್ರಕಾರ, ಆರಂಭದಲ್ಲಿ ಈ ಮಹಿಳೆ ತನ್ನ ಎದೆಯಲ್ಲಿ ತುರಿಕೆ ಅನುಭವಿಸಿದ್ದಾಳೆ. ನಂತರ ಅವಳು ಅದನ್ನು ಸಾಮಾನ್ಯ ತುರಿಕೆ ಎಂದು ಭಾವಿಸಿದ್ದಾಳೆ. ಬಳಿಕ ಅವಳಿಗೆ ಹೆಚ್ಚು ತೊಂದರೆಯಾಗಲು ಶುರುವಾಗಿದ್ದು, ಅದಕ್ಕೆ ಔಷಧಿಯನ್ನು ಅನ್ವಯಿಸಲು ಶುರುಮಾಡಿದ್ದಾರೆ. ಆದರೆ, ಔಷಧಿ ಕೆಲಸ ಮಾಡಿಲ್ಲ. ನಂತರ ತುರಿಕೆ ಕಾಣಿಸಿಕೊಂಡ ಜಾಗದಿಂದ ಏನೋ ಹೊರಬರುತ್ತಿರುವುದನ್ನು ನೋಡಿದ ಮಹಿಳೆ ಬೆಚ್ಚಿಬಿದ್ದಿದ್ದು, ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆಗೆ ಒಳಗಾಗಿದ್ದಾಳೆ.

ಇದು ಒಂದು ರೀತಿಯ ಕೊಂಬಿನಂತಿದ್ದು, ಕ್ರಮೇಣ ಹೆಚ್ಚಾಗುತ್ತಿದೆ ಎಂದು ವೈದ್ಯರ ತಂಡ ಪರೀಕ್ಷೆಯ ಮೂಲಕ ಪತ್ತೆಹಚ್ಚಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಅವಶ್ಯಕ ಎಂದು ಮಹಿಳೆಗೆ ವೈದ್ಯರು ಮನವರಿಕೆ ಮಾಡಿಕೊಟ್ಟಿದ್ದಾರೆ. ಇಲ್ಲದಿದ್ದರೆ ಅದರ ಗಾತ್ರ ಮತ್ತು ಉದ್ದವು ತುಂಬಾ ದೊಡ್ದದಾಗಲಿದೆ ಎಂದು ಹೇಳಿದ್ದಾರೆ. ಮಹಿಳೆಯ ಎದೆಯ ಮೇಲೆ ಹೊರಬಂದ ಈ ಕೊಂಬು ಕ್ರಮೇಣ ಐದು ಸೆಂಟಿಮೀಟರ್ ಉದ್ದಕ್ಕೆ ಬೆಳೆದಿದೆ. ಪ್ರಸ್ತುತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅವುಗಳನ್ನು ತೆಗೆದುಹಾಕಲು ವೈದ್ಯರು ನಿರ್ಧರಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಮಹಿಳೆಯ ದೇಹದಿಂದ ಇದೀಗ ಕೊಂಬನ್ನು ಹೊರತೆಗೆದಿದ್ದಾರೆ. ಅಪರೂಪದ ಚರ್ಮದ ಸೋಂಕಿನಿಂದಾಗಿ ಮಹಿಳೆಯ ಎದೆಯ ಮೇಲೆ ಈ ಕೊಂಬು ಹೊರಬಂದಿದೆ ಎಂದು ಅವರು ಹೇಳಿದ್ದಾರೆ. ಕೂದಲು, ಚರ್ಮ ಮತ್ತು ಉಗುರುಗಳಲ್ಲಿ ಕೆರಾಟಿನ್ ಎಂಬ ಪ್ರೋಟೀನ್ ಸಂಗ್ರಹವಾಗುವುದರಿಂದ ಉಂಟಾಗುವ ಚರ್ಮದ ಕೊಂಬು ಇದಾಗಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ. ಆದರೆ, ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದುಹಾಕಿರುವುದರಿಂದ ಸದ್ಯ ಮಹಿಳೆ ನಿಟ್ಟುಸಿರು ಬಿಡುವಂತಾಗಿದೆ.

error: Content is protected !!
Scroll to Top
%d bloggers like this: