ಉಳ್ಳಾಲ : ಬಾಲಕ ನಾಪತ್ತೆ ಪ್ರಕರಣ ಸುಖಾಂತ್ಯ!

ಉಳ್ಳಾಲ : ಮನೆಯಿಂದ ಧಿಡೀರೆಂದು ಕಾಣೆಯಾಗಿ ಮನೆಯವರನ್ನು ದಂಗುಬಡಿಸಿದ್ದ ಬಾಲಕ ಅಜ್ಜಿ ಮನೆಯಲ್ಲಿ ಪತ್ತೆಯಾಗಿದ್ದು ಪೋಷಕರಿಗೆ ಸಮಾಧಾನ ಉಂಟು ಮಾಡಿದೆ.

ಉಳ್ಳಾಲ ಬೈಲು ಗಣೇಶನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರೆಸ್ಕಿನ ಮತ್ತು ರೋಹಿತ ಬ್ರಾಕ್ಸ್ ದಂಪತಿಯ ಪುತ್ರ ರಿಯಾನ್ (9ವರ್ಷ) ಇಂದು ಮಧ್ಯಾಹ್ನ ಧಿಡೀರ್ ನಾಪತ್ತೆಯಾಗಿದ್ದ, ಬೆಳಗ್ಗೆ ಸ್ನೇಹಿತರೊಂದಿಗೆ ತೊಕ್ಕೊಟ್ಟು ಚರ್ಚ್ ಗೆ ತೆರಳಿದ್ದು ಮಧ್ಯಾಹ್ನ ವಾಪಾಸಾಗಿದ್ದ. ಆಬಳಿಕ ಪಕ್ಕದಲ್ಲೇ ಇರುವ ದೊಡ್ಡಮ್ಮನ ಮನೆಗೆ ತೆರಳಿದ್ದು ಅಲ್ಲಿದ್ದ ರಿಯಾನ್ ತಾಯಿ ಮನೆಯ ಕೈ ಕೀಲಿ ಕೈ ಕೊಟ್ಟು ರಿಯಾನಲ್ಲಿ ಮನೆಗೆ ಹೋಗಲು ಹೇಳಿದ್ದರು. ಆದರೆ 2 ಗಂಟೆ ಸುಮಾರಿಗೆ ತಾಯಿ ಮನೆಗೆ ತೆರಳಿದಾಗ ಕಿಟಕಿಯಲ್ಲಿ ಮನೆಯ ಕೀಲಿ ಕೈ ಮಾತ್ರ ಇದ್ದು ‘ರಿಯಾನ್ ನಾಪತ್ತೆಯಾಗಿದ್ದ. ಗಾಬರಿಗೊಂಡ ರಿಯಾನ್ ಪೋಷಕರು, ಸ್ಥಳೀಯರು ಶೋಧ ನಡೆಸಿದ್ದು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಪೂಟೇಜ್ ಪರಿಶೀಲಿಸಿ ಶೋಧ ಕಾರ್ಯ ಆರಂಭಿಸಿದ್ದರು.

ಮನೆಮಂದಿ ತೀವ್ರ ಹುಡುಕಾಟದಲ್ಲಿ ತೊಡಗಿದ್ದರೆ, ಸಂಜೆ ಹೊತ್ತಲ್ಲಿ ಪಾವೂರು ಗ್ರಾಮದ ಇನೋಳಿಯ ಮಜಿಕಟ್ಟ ಎಂಬಲ್ಲಿ ತನ್ನ ಅಜ್ಜಿ ಮನೆಯ ತೋಟದಲ್ಲಿ ರಿಯಾನ್ ಪತ್ತೆಯಾಗಿದ್ದಾನೆ.

ಒಂಬತ್ತು ವರ್ಷದ ಹುಡುಗ ಒಬ್ಬನೇ ತೊಕ್ಕೊಟ್ಟಿನಿಂದ ಸಿಟಿ ಬಸೊಂದನ್ನ ಏರಿ ಇನೋಳಿಗೆ ತೆರಳಿ, ಅಲ್ಲಿರುವ ಮನೆಗೂ ಹೋಗದೆ ತೋಟದಲ್ಲಿ ಅಡಿಕೆ ಹೆಚ್ಚುತ್ತಿರುವಂತೆ ಮಾಡುತ್ತಾ ಇದ್ದ.

ಅಜ್ಜ, ಅಜ್ಜಿ ಸಾವನ್ನಪ್ಪಿದ್ದು ಮನೆಯಲ್ಲಿದ್ದ ಚಿಕ್ಕಮ್ಮನಿಗೆ ರಿಯಾನ್ ಬಂದ ವಿಚಾರ ತಡವಾಗಿ ತಿಳಿದುಬಂದಿತ್ತು. ರಿಯಾನ್ ನಾಪತ್ತೆ ಬಗ್ಗೆ ಜಾಲತಾಣದಲ್ಲಿ ಸಂದೇಶವನ್ನು ನೋಡಿದ ಚಿಕ್ಕಮ್ಮ ರಿಯಾನ್ ತಮ್ಮಲ್ಲಿ ಇರುವ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಸಂಜೆ ರಿಯಾನ್ ಮತ್ತೆ ನಗು, ನಗುತ್ತಾ ತಾಯಿ ಮನೆಗೆ ಮರಳಿದ್ದು ಪೋಷಕರು, ಸ್ಥಳೀಯರು ನೆಮ್ಮದಿಯ ನಗು ಬೀರಿದ್ದಾರೆ.

Leave A Reply

Your email address will not be published.