ನಿಮ್ಮ‌ ಹಸ್ತದಲ್ಲಿರುವ ಚಿಪ್ ನಿಂದಲೇ ಎಲ್ಲಾ ಹಣ ಪಾವತಿ!
ಹಣ ಪಾವತಿಗೆ ಮೊಬೈಲ್, ನಗದು, ಯುಪಿಐ ಐಡಿ ಏನೂ ಬೇಕಿಲ್ಲ!!!!

ಈ ರೀತಿಯಲ್ಲಿ ಒಂದು ಊಹೆ ಮಾಡಿಕೊಳ್ಳಿ. ನೀವೊಂದು
ಹೋಟೆಲ್‌ಗೋ ಅಥವಾ ಹೊರಗಡೆ ಏನಾದರೂ ಖರೀದಿ ಮಾಡಲೆಂದು ಹೋದಾಗ ಕೊನೆಗೆ ಪಾವತಿ ಮಾಡಲು ಮುಂದಾದಾಗ, ಹಾಗೇಯೇ
ಸುಮ್ಮನೆ ಎಡಗೈಯನ್ನು ಪಿಒಎಸ್ ಅಥವಾ ಇತರೆ
ಸಂಪರ್ಕರಹಿತ ಪಾವತಿ ಸಾಧನಗಳ ಮೇಲಿಟ್ಟಾಗ, ತಕ್ಷಣ ಹಣ ಕಡಿತವಾಗುತ್ತದೆ, ಆ ಕ್ಷಣ ಎಲ್ಲರೂ ಅಚ್ಚರಿಯಿಂದ ನಿಮ್ಮನ್ನು ನೋಡುತ್ತಾರೆ!

ಹೌದು, ಇಂತಹದ್ದೊಂದು ಮೈಕ್ರೋಚಿಪ್ ಈಗಾಗಲೇ ತಯಾರಾಗಿದೆ.

ನೆದರ್ಲೆಂಡ್, ಅಮೆರಿಕದಂತಹ ದೇಶಗಳಲ್ಲಿ ಕೆಲವರು ಬಳಕೆಯನ್ನೂ ಈಗಾಗಲೇ ಶುರು ಮಾಡಿದ್ದಾರೆ. ಬ್ರಿಟಿಷ್-ಪೋಲಿಷ್ ಸಂಸ್ಥೆ ವ್ಯಾಲೆಟ್‌ಮೊರ್ ಈ ರೀತಿಯ ಮೈಕ್ರೋಚಿಪ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ. ಜಗತ್ತಿನ ಯಾವುದೇ ದೇಶದಲ್ಲಾದರೂ ಸಂಪರ್ಕರಹಿತ ಪಾವತಿ ವ್ಯವಸ್ಥೆ ಬಳಕೆಯಲ್ಲಿದ್ದರೆ ಅಲ್ಲಿ ಈ ಸುಲಭ ‘ಚಿಪ್’ ಸಾಧನವನ್ನು ನಿಮ್ಮ ಹಣ ಪಾವತಿಗೆ ಬಳಸಬಹುದು! ಈ ಚಿಪ್ ಕೇವಲ ಒಂದು ಅಕ್ಕಿಕಾಳಿನ ಗಾತ್ರದಲ್ಲಿರುತ್ತದೆ, ಇದರ ಸುತ್ತ ಒಂದು ಆ್ಯಂಟೆನಾ ಇರುತ್ತದೆ.
ಇದಕ್ಕೆ ಬ್ಯಾಟರಿ ಅಥವಾ ಇನ್ನಾವುದೇ ಚಾರ್ಜಿಂಗ್ ಸಾಧನಗಳ ಅವಶ್ಯಕತೆಯಿಲ್ಲ. ಒಮ್ಮೆ ಹಸ್ತದ ಹಿಂಭಾಗದಲ್ಲಿ ಕೂರಿಸಿಬಿಟ್ಟರೆ ಮುಗಿಯಿತು!

ಎನ್ಎಫ್ ಸಿ ತಂತ್ರಜ್ಞಾನವನ್ನು ಬಳಸಿ ವ್ಯಾಲೆಟ್‌ಮೊರ್ ಈ ಸಾಧನವನ್ನು ತಯಾರಿಸಿದೆ. ಭವಿಷ್ಯದಲ್ಲಿ ಇದು ಮನೆಮಾತಾದರೂ ಅಚ್ಚರಿಯಿಲ್ಲ!

Leave A Reply

Your email address will not be published.