ತನ್ನ ಮೇಲೆ ಹಾಗೂ ಮೊಮ್ಮಕ್ಕಳ ಮೇಲೆ ಹಲ್ಲೆ ಮಾಡಲು ಬಂದ ಮಗನನ್ನು ಕೊಂದ ಹೆತ್ತ ತಾಯಿ!!!

ಕುಡಿತದಿಂದ ಎಷ್ಟೋ ಮನೆಯ ನೆಮ್ಮದಿ ಹಾಳಾಗಿದ್ದು ಇದೆ. ಎಷ್ಟೋ ಮನೆಯಲ್ಲಿ ದಿನನಿತ್ಯ ಗಲಾಟೆ, ಜಗಳ, ಮಾನಸಿಕ ಕಿರಿಕಿರಿ ಉಂಟಾಗಿ, ಜನ ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡಿದ್ದೂ ಇದೆ. ಈ ಕುಡಿತದ ಕಾರಣದಿಂದಲೇ ಸಿಟ್ಟಿಗೆದ್ದ ತಾಯಿಯೋರ್ವಳು ತನ್ನ ಮಗನ ಹತ್ಯೆ ಮಾಡಿದ್ದಾಳೆ.

ಮದ್ಯವ್ಯಸನಿಯಾಗಿ ಹಲ್ಲೆ ನಡೆಸಲು ಬಂದ ಮಗನನ್ನು ತಾಯಿಯೇ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯವಾಡದಲ್ಲಿ ನಡೆದಿದೆ.


Ad Widget

Ad Widget

Ad Widget

ಈ ಸಂಬಂಧ 55 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಗ ತನ್ನ ಮತ್ತು ಮೊಮ್ಮಕ್ಕಳ ಮೇಲೆ ಹಲ್ಲೆ ನಡೆಸಲು ಬಂದಾಗ ತಾಯಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ.

ಮಗ ಮತ್ತು ಸೊಸೆಗೆ ವಿಚ್ಛೇದನ ತಗೊಂಡು ಬೇರ್ಪಟ್ಟಿದ್ದಾರೆ. ಆದರೆ ರಾಮನವಮಿ ಆಚರಿಸಲು ಮಕ್ಕಳನ್ನು ಅಜ್ಜಿ ಪ್ರೀತಿಯಿಂದ ಮನೆಗೆ ಕರೆದುಕೊಂಡು ಬಂದಿದ್ದಳು. ಆದರೆ ಕುಡಿದು ಬಂದ ಮಗ ತನ್ನ ಹೆತ್ತ ತಾಯಿ ಅಂತಾನೂ ನೋಡದೇ ಹಲ್ಲೆ ಮಾಡಲು ಮುಂದಾದ, ಜೊತೆಗೆ ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳಿಗೂ ಹೊಡೆಯಲು ಮುಂದಾದ. ಮಗ ಹಲ್ಲೆ ನಡೆಸಲು ಮುಂದಾಗಿದ್ದನ್ನು ತಡೆಯಲು ತಾಯಿ ಕೊಡಲಿಯಿಂದ ಏಟು ಕೊಟ್ಟಿದ್ದಾಳೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.

Leave a Reply

error: Content is protected !!
Scroll to Top
%d bloggers like this: