ಕೆಜಿಎಫ್2 ವಿಮರ್ಶೆ‌ ಮಾಡಿದ ಸೆನ್ಸಾರ್ ಮಂಡಳಿಯ ಸದಸ್ಯ ಹೇಳಿದ್ದು ಇಲ್ಲಿದೆ ಓದಿ

ಈಗಾಗಲೇ ಸಿನಿಮಾ ನೋಡಿದ ವ್ಯಕ್ತಿ ಚಿತ್ರದ ಮೊದಲ ವಿಮರ್ಶೆ ನೀಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಓವರ್ ಸೀಸ್ ಸೆನ್ಸಾರ್ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಉಮೈರ್ ಸಂಧು ಕೆಜಿಎಫ್2 ಸಿನಿಮಾ ವೀಕ್ಷಿಸಿದ್ದು ವಿಮರ್ಶೆ ಸಹ ಮಾಡಿದ್ದಾರೆ. ಈ ಬಗ್ಗೆ ಉಮೈರ್ ಸಂಧು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.


Ad Widget

Ad Widget

ಯಶ್ ನಟನೆಯ ಕೆಜಿಎಫ್2 ಸಿನಿಮಾವನ್ನು ಕನ್ನಡ ಚಿತ್ರರಂಗದ ಕಿರೀಟ ಎಂದು ಬಣ್ಣಿಸಿದ್ದಾರೆ. ಅಷ್ಟೆಯಲ್ಲ 5 ಕ್ಕೆ 5 ಸ್ಟಾರ್ ನೀಡುವ ಮೂಲಕ ಬ್ಲಾಕ್ ಬಸ್ಟರ್ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನ ಎನ್ನುವುದು ಹೇಳಿದ್ದಾರೆ. ‘ಈ ಸಿನಿಮಾ ಕನ್ನಡ ಸಿನಿಮಾರಂಗದ ಕಿರೀಟವಾಗಿದೆ. ಕೆಜಿಎಫ್-2 ಪ್ರಾರಂಭದಿಂದ ಕೊನೆಯವರೆಗೂ ಹೈ ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಮತ್ತು ಸಸ್ಪೆನ್ಸ್ ಥ್ರಿಲ್ ನಿಂದ ತುಂಬಿದೆ. ಚಿತ್ರದ ಸಂಭಾಷಣೆ ಶಾರ್ಪ್ ಆಗಿದೆ. ಸಂಗೀತ ಡೀಸೆಂಟ್ ಆಗಿದೆ, ಅಬ್ಬರದ ಬ್ಯಾಗ್ರೌಂಡ್ ಸರಿಹೊಂದಿಸಿದೆ.


Ad Widget

ಅದ್ಭುತವಾದ ಸಿನಿಮಾ, ಸಿನಿಮಾದುದ್ದಕ್ಕೂ ತೀವ್ರತೆ ಕಾಪಾಡಿಕೊಂಡಿದ್ದಾರೆ. ಪ್ರತಿಯೊಬ್ಬರ ಅಭಿನಯ ಅದ್ಭುತವಾಗಿದೆ. ಈ ಸಿನಿಮಾ ಕೇವಲ ಸ್ಯಾಂಡಲ್ ವುಡ್ ಬ್ಲಾಕ್ ಬಸ್ಟರ್ ಮಾತ್ರ ಅಲ್ಲ, ಇದು ವಿಶ್ವ ಮಟ್ಟದ ಸಿನಿಮಾವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನ ಯಶ್ ಮತ್ತು ಸಂಜಯ್ ದತ್ ಪ್ರಮುಖ ಹೈಲೆಟ್ ಆಗಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಶಾಕ್ ನೀಡುತ್ತೆ ಮತ್ತು ರೋಮಾಂಚನವಾಗುತ್ತದೆ’ ಎಂದು ಹೇಳಿದ್ದಾರೆ.

ಬೆರಗುಗೊಳಿಸುವ ದೃಶ್ಯ ಅದ್ಭುತವಾಗಿದೆ. ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಕಜಿಎಫ್-2 ನುರಿತ ತಾರಾಗಣದಿಂದ ಶಕ್ತಿಶಾಲಿ ಪ್ರದರ್ಶನ ವಿದೆ. ವೀಕ್ಷಕರ ಕಣ್ಣು ಚಿತ್ರದ ನಾಯಕ ಮತ್ತು ಖಳನಟನ ಮೇಲೆಯೇ ಇರುತ್ತದೆ.  ಚಿತ್ರದ ಕ್ಲೈಮ್ಯಾಕ್ಸ್ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ ಎಂದಿದ್ದಾರೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: