ಟೆರೇಸ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಲು ಮುಂದಾದ ಯುವತಿ! CISF ಸಿಬ್ಬಂದಿಯ ಜಾಣ್ಮೆಯಿಂದ ಬದುಕುಳಿದ ಯುವತಿ!

ಮೆಟ್ರೋ ನಿಲ್ದಾಣದ ಟೆರೆಸ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿ; ಚಾಣಾಕ್ಷತನದಿಂದ ಬಚಾವ್ ಮಾಡಿದ CISF ಸಿಬ್ಬಂದಿ

ದೆಹಲಿಯ ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ ಘಟನೆಯೊಂದು ಇಂದು ಬೆಳಗ್ಗೆ 7.20 ರ ಸುಮಾರಿಗೆ ನಡೆದಿದೆ. ಯುವತಿ ಮೆಟ್ರೋ ನಿಲ್ದಾಣದ ಟೆರೆಸ್ ಮೇಲೆ ಹತ್ತಿಕೊಂಡು ಕೆಳಕ್ಕೆ ಜಿಗಿಯಲು ಸಜ್ಜಾಗಿದ್ದು.
ಕೂಡಲೇ ಸಿಐಎಸ್ಎಫ್ ಸಿಬ್ಬಂದಿ ಯುವತಿ ನಿಂತಿದ್ದ ಸ್ಥಳಕ್ಕೆ ಬಂದಿದ್ದಾಳೆ.

ಯೋಧರು ಆಕೆಯ ಮನವೊಲಿಸಲು ಪ್ರಯತ್ನ ಪಡುತ್ತಲೇ ಇದ್ದರೂ, ಆಕೆ ಮಾತ್ರ ಒಪ್ಪಲೇ ಇಲ್ಲ. ಬೇಕಂತಲೇ ಯೋಧರು ಆಕೆಯೊಡನೆ ಮಾತನಾಡುತ್ತಾ ಇದ್ದರು.

ಮತ್ತೊಂದೆಡೆ ಕೆಳಗಡೆ ಉಳಿದ ಸಿಬ್ಬಂದಿ ದಪ್ಪನೆಯ ಶೀಟ್ ಹಿಡಿದುಕೊಂಡು ಗೋಡೆಯ ಕೆಳಭಾಗದಲ್ಲಿ ಜಮಾಯಿಸಿದ್ರು. ಆಕೆ ಕೆಳಕ್ಕೆ ಜಿಗಿದಾಗ ಶೀಟ್ ಸಹಾಯದಿಂದ ಅವಳನ್ನು ಹಿಡಿಯಲು ಸಜ್ಜಾಗಿ ನಿಂತಿದ್ದರು ಸ್ಥಳೀಯ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಅನ್ನು ಕೂಡ ಸ್ಥಳಕ್ಕೆ ಕರೆಸಲಾಯಿತು.

ಯೋಧರೊಂದಿಗೆ ಮಾತನಾಡುತ್ತಲೇ ಆಕೆ ಒಮ್ಮೆಲೇ ಕೆಳಕ್ಕೆ ಜಿಗಿದುಬಿಟ್ಟಿದ್ದಾಳೆ. ಕೆಳಗೆ ನಿಂತಿದ್ದ ಸಿಬ್ಬಂದಿ ದಪ್ಪನೆಯ ಕಂಬಳಿಯಲ್ಲಿ ಅವಳನ್ನು ಹಿಡಿದಿದ್ದಾರೆ. ಹಾಗಾಗಿ ಅವಳಿಗೆ ಪ್ರಾಣಾಪಾಯವಾಗಿಲ್ಲ. ಕಾಲಿಗೆ ಸ್ವಲ್ಪ ಗಾಯವಾಗಿದೆ. ಕೂಡಲೇ ಅವಳನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುವತಿ ಸದ್ಯ ಆರೋಗ್ಯವಾಗಿದ್ದು, ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನೆಂದು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

Leave A Reply

Your email address will not be published.