ಮದುವೆ ಮಂಟಪದಲ್ಲಿ ವಧುವಿನ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಜೊತೆ ಬ್ಯೂಟಿಷಿಯನ್ ಪರಾರಿ !!?

ಇನ್ನೇನು ಮದುವೆಗೆ ಕೆಲವೇ ನಿಮಿಷ ಇದೆ ಎನ್ನುವಷ್ಟರಲ್ಲಿ ಕೋಣೆಗೆ ಬಂದ ವಧುವಿಗೆ ಶಾಕ್ ಕಾದಿತ್ತು. ವಧುವಿನ ಕೋಣೆಯಲ್ಲಿದ್ದ ಚಿನ್ನಾಭರಣಗಳನ್ನು ಯಾರೋ ಕದ್ದು ಪರಾರಿಯಾಗಿದ್ದು, ಆ ಆರೋಪ ವಧುವಿನ ಅಲಂಕಾರಕ್ಕೆ ಬಂದಿದ್ದ ಬ್ಯೂಟಿಷಿಯನ್ ಮೇಲೆರಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

27 ವರ್ಷದ ಖಾಸಗಿ ಕಂಪನಿ ಉದ್ಯೋಗಿ ಪೂರ್ಣಿಮಾ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿರುವ ಮಹಾಲಕ್ಷ್ಮಿ ಮಂಟಪದಲ್ಲಿ ಮಂಗಳಸೂತ್ರ ಧಾರಣೆಗಾಗಿ ಕೊಠಡಿಯಿಂದ ಹೊರಬಂದಿದ್ದರು. ಈ ವೇಳೆ ವಧುವಿನ ಕೊಠಡಿಯಲ್ಲಿದ್ದ 102 ಗ್ರಾಮ್ ತೂಕದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಶಾಸ್ತ್ರದ ಕೆಲಸಗಳಿಗಾಗಿ ವಧು ಕೋಣೆಯಿಂದ ಹೊರಬಂದಿದ್ದಾರೆ. ಈ ಸಮಯದಲ್ಲಿ ಬ್ಯೂಟಿಶಿಯನ್ ಮಾತ್ರ ಅಲ್ಲಿದ್ದರು ಎಂಬುದಾಗಿ ಹೇಳಿದ್ದಾರೆ.


Ad Widget

Ad Widget

Ad Widget

ಆಭರಣಗಳನ್ನು ಧರಿಸಲು ಪೂರ್ಣಿಮಾ ತನ್ನ ಕೋಣೆಗೆ ತೆರಳಿದಾಗ ಅಲ್ಲಿ ಆಭರಣ ಕಾಣೆಯಾಗಿತ್ತು. ಕನಕಪುರ ರಸ್ತೆಯ ರಂಗನಾಥ ಲೇಔಟ್ ನಿವಾಸಿ ಪೂರ್ಣಿಮಾ ಅವರಿಗೆ ಭಾವೀ ಪತಿ ವಿನೋದ್ ಕುಮಾರ್ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈ ಕಳ್ಳತನ ಬ್ಯೂಟಿಷಿಯನ್ ಅವರೆ ಮಾಡಿದ್ದಾರೆ ಎಂಬುದನ್ನು ಹೇಳಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಬ್ಯೂಟಿಷಿಯನ್ ಅವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: