ಬಾಲಿವುಡ್ ನಟಿ ಕತ್ರಿನಾ ಗರ್ಭಿಣಿ !!?-ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಫೋಟೋ ವೈರಲ್

ಬಾಲಿವುಡ್ ನ ನಟಿ, ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆಯೇ ಎಂಬ ಬಗ್ಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲಾರಂಭಿಸಿದ್ದಾರೆ.

2021 ರ ಡಿ.9 ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅದ್ಧೂರಿಯಾಗಿ ಮದುವೆಯಾಗಿದ್ದರು.

ಗರ್ಭಿಣಿಯಾಗಿರುವ ಸಂಶಯ ಜನರಿಗೆ ಯಾಕೆ ಬಂತೆಂದರೆ, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪೀಚ್ ಬಣ್ಣದ ಸಡಿಲವಾದ ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದರು. ಈ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ತಮ್ಮ ನೆಚ್ಚಿನ ನಟಿ ಗರ್ಭಿಣಿ ಆಗಿದ್ದಾರೆಯೇ ಎಂದು ಅಭಿಮಾನಿಗಳು ಸಂಶಯ ಪಡಲು ಪ್ರಾರಂಭ ಮಾಡಿದ್ದಾರೆ.

‘ಕತ್ರಿನಾ ಗರ್ಭಿಣಿ ತರ ಕಾಣುತ್ತಾರೆ’ ಎಂದು ಹಲವು ಬಗೆಯ ಕಮೆಂಟ್ ಮಾಡಿದ್ದಾರೆ.

Leave A Reply

Your email address will not be published.