ಯುವಕರ ಚೇಷ್ಟೆಯಿಂದ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ!

0 11

ಯುವಕರ ಚೇಷ್ಟೆಯಿಂದ ಬೇಸತ್ತ ಇಂಟರ್ ಮೀಡಿಯೇಟ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯ ಶವದ ಬಳಿ ಎರಡು ಪುಟಗಳ ಸೂಸೈಡ್ ನೋಟ್ ಪತ್ತೆಯಾಗಿದೆ. ಇದರಲ್ಲಿ ಬಾಲಕಿ ಯುವಕನೋರ್ವನ ಹೆಸರನ್ನು ಬರೆದಿದ್ದಾಳೆ.

ಯುವಕನ ಚೇಷ್ಟೆ ಹಾಗೂ ಬ್ಲಾಕ್‌ಮೇಲಿಂಗ್‌ನಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆತ್ಮಹತ್ಯೆ ಪತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಬಂದಾ ಜಿಲ್ಲೆಯ ದೇಹತ್ ಕೊಟ್ಟಾಲಿ ವ್ಯಾಪ್ತಿಯ ಕರ್ಬೈ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾಮಪ್ರಸಾದ್ ಎಂಬುವವರ ಮಗಳಾದ 19 ವರ್ಷದ ರೋಶನಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಗ್ರಾಮದ ಇಂಟರ್ ಕಾಲೇಜಿನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

ಎರಡು ಪುಟಗಳ ಸೂಸೈಡ್ ನೋಟ್ ಬರೆದಿದ್ದು, ಈ ಪತ್ರವನ್ನು ಸಹೋದರಿಯನ್ನು ಉದ್ದೇಶಿಸಿ ಬರೆಯಲಾಗಿದೆ. ಇದರಲ್ಲಿ ಯುವಕನೊಬ್ಬ ಬ್ಲಾಕ್‌ಮೇಲ್ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾಳೆ. ಆತ್ಮಹತ್ಯೆ ಪತ್ರದ ಕೊನೆಯಲ್ಲಿ ತಾಯಿಯನ್ನು ನೋಡಿಕೊಳ್ಳಿ ಎಂದು ರಕ್ತದಲ್ಲಿ ಬರೆದಿದ್ದಾಳೆ.

ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿಗೂ ಕಾಯಲಾಗುತ್ತಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Leave A Reply