‘ ಈ ವರ್ಷದ ಶೈಕ್ಷಣಿಕ ವರ್ಷದಿಂದಲೇ ಪಠ್ಯದಲ್ಲಿ ‘ಭಗವದ್ಗೀತೆ’ – ಸಚಿವ ಬಿ ಸಿ ನಾಗೇಶ್!

‘ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲಾಗುವುದು’ ಆಲಮಟ್ಟಿಯಲ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

‘ನೈತಿಕ ಶಿಕ್ಷಣ ಈಗಿನ ಅಗತ್ಯವಿದ್ದು, ರಾಮಾಯಣ, ಮಹಾಭಾರತ ಸೇರಿದಂತೆ ನೈತಿಕ ಗುಣ ಬೆಳೆಸುವ ಕತೆಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದ್ದಾರೆ.

‘ಅಬ್ದುಲ್ ಕಲಾಂ ಅವರು ಭಗವದ್ಗೀತೆಯಲ್ಲಿ ಶಕ್ತಿ ಅಡಗಿದೆ ಎಂದು ಹೇಳಿದ್ದಾರೆ. ಭಗವದ್ಗೀತೆ ಧಾರ್ಮಿಕ ಆಚರಣೆಯಲ್ಲ, ಪೂಜಾ ವಿಧಾನವೂ ಅಲ್ಲ, ಅದರ ಸಾರವನ್ನು ಎಲ್ಲ ಧರ್ಮೀಯರೂ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಜೀವನಕ್ಕೆ ಬೇಕಾದ ಮಾರ್ಗದರ್ಶನ ಅದರಲ್ಲಿ ಅಡಗಿದೆ’ ಎಂದರು.

‘ಭಗವದ್ಗೀತೆಯ ಯಾವ ಸಾರವನ್ನು ನೈತಿಕ ವಿಷಯದ ಪಠ್ಯದಲ್ಲಿ ಅಳವಡಿಸಬೇಕೆಂಬುದನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

Leave A Reply

Your email address will not be published.