ವರ್ಗಾವಣೆ ಬೇಕಾದರೆ ಹೆಂಡತಿಯನ್ನು ‘ಒಂದು ರಾತ್ರಿ’ ಮಟ್ಟಿಗೆ ಕಳುಹಿಸು ಎಂದ ಮೇಲಾಧಿಕಾರಿ!

0 9

ವರ್ಗಾವಣೆ ಬೇಕೆಂದರೆ ತನ್ನ ಪತ್ನಿಯನ್ನು ಒಂದು ರಾತ್ರಿಯ ಮಟ್ಟಿಗೆ ಕಳುಹಿಸು ಎಂದು ಚಿತ್ರಹಿಂಸೆ, ಮಾನಸಿಕ ಕಿರುಕುಳ ನೀಡಿದ ಮೇಲಧಿಕಾರಿಯ ವರ್ತನೆಗೆ ಮನನೊಂದ ನೌಕರನೋರ್ವ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವಿದ್ಯುತ್ ಇಲಾಖೆಯ ಜೂನಿಯರ್ ಇಂಜಿನಿಯರ್ ಲಖಿಂಪುರ ನಿವಾಸಿ ಗೋಕುಲ್ ಪ್ರಸಾದ್ (45) ಎಂಬಾತನೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. . ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ತನಗೆ ತನ್ನ ಮೇಲಧಿಕಾರಿ ವರ್ಗಾವಣೆ ಬೇಕೆಂದರೆ ತನ್ನ ಪತ್ನಿಯನ್ನು ರಾತ್ರಿಗೆ ಕಳುಹಿಸು ಎನ್ನುತ್ತಿದ್ದ ಇದರಿಂದ ತಾನು ತುಂಬಾ ನೊಂದಿದ್ದೇನೆ. ಹಾಗಾಗಿ ಸಾಯುತ್ತಿದ್ದೇನೆ ಎಂದು ವಿಡಿಯೋ ಮಾಡಿ ತನಗೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ.

ಇನ್ನು ಮೃತನ ಪತ್ನಿ ಕೂಡ ಅವರ ಮೇಲಧಿಕಾರಿಗಳು ಮೂರು ವರ್ಷಗಳಿಂದಲೂ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಖಿನ್ನತೆಗೂ ಒಳಗಾಗಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.

Leave A Reply